ನಮ್ಮ ಬೆಂಗಳೂರು ಇನ್ನು ಮುಂದೆ ಸೇಫ್ ಸಿಟಿ – ಸಿಲಿಕಾನ್ ಸಿಟಿ ಜನರ ಸಹಾಯಕ್ಕೆ ಹೆಲ್ಪ್‌ಲೈನ್

ನಮ್ಮ ಬೆಂಗಳೂರು ಇನ್ನು ಮುಂದೆ ಸೇಫ್ ಸಿಟಿ – ಸಿಲಿಕಾನ್ ಸಿಟಿ ಜನರ ಸಹಾಯಕ್ಕೆ ಹೆಲ್ಪ್‌ಲೈನ್

ನಮ್ಮ ಬೆಂಗಳೂರು ಸೇಫ್ ಸಿಟಿ ಆಗಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಪೊಲೀಸ್ ಇಲಾಖೆ ಮಾಡುತ್ತಲೇ ಬಂದಿದೆ. ಇದೀಗ ಸಿಟಿ ಪೊಲೀಸರು ಬೆಂಗಳೂರಿಗರ ರಕ್ಷಣೆಗೆ ಮತ್ತೊಂದು ಪ್ಲಾನ್ ಮಾಡಿದ್ದಾರೆ. ಬೆಂಗಳೂರಿನ ಜನರ ಸಹಾಯಕ್ಕೆ ಎಮರ್ಜೆನ್ಸಿ ಸೇವೆಯನ್ನು ಜಾರಿ ತರಲಾಗುತ್ತಿದೆ. ಸಿಲಿಕಾನ್ ಸಿಟಿಯಲ್ಲಿ ತುರ್ತು ಸಹಾಯವಾಣಿ ಸೇವೆ ಆರಂಭವಾಗಿದೆ.

ಇದನ್ನೂ ಓದಿ: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ – ಮಗನ ಶವಕ್ಕೆ ಮುತ್ತಿಟ್ಟು ಕಣ್ಣೀರಿಟ್ಟ ತಾಯಿ..!

ನಗರದಲ್ಲಿ ಪೊಲೀಸರಿಂದ ತುರ್ತು ಸಹಾಯವಾಣಿ ನಿರ್ಮಾಣವಾಗಿದೆ. ತುರ್ತು ಸಹಾಯವಾಣಿ ಉಪಯೋಗದಿಂದ ಮಹಿಳೆಯರು ನಿಂತ ಸ್ಥಳದಿಂದಲೇ ಪೊಲೀಸರಿಗೆ ಮಾಹಿತಿ ನೀಡಬಹುದಾಗಿದೆ. ಒಂದು ಬಟನ್ ಪ್ರೆಸ್ ಮಾಡಿದರೆ ಸಾಕು ನಿಮ್ಮ ಸುತ್ತಮುತ್ತ ಏನಾಗುತ್ತಿದೆ ಎಂದು ವಿಡಿಯೋ ಸಮೇತ ರೆಕಾರ್ಡ್ ಆಗುತ್ತೆ. ನೇರವಾಗಿ ಕಮಾಂಡ್ ಸೆಂಟರ್‌ಗೆ ಕರೆ ಹೋಗುವ ಮೂಲಕ ಮಾಹಿತಿ ಕಲೆ ಹಾಕಲಾಗುತ್ತದೆ. ನಂತರ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗುತ್ತದೆ. 7 ನಿಮಿಷಕ್ಕೆ ಹೋಯ್ಸಳ ಪೊಲೀಸರು ಸ್ಥಳಕ್ಕೆ ಆಗಮಿಸುತ್ತಾರೆ. ಬೆಂಗಳೂರಿನಾದ್ಯಂತ 30 ಕಡೆ ಈ ತುರ್ತು ಸಹಾಯವಾಣಿ ಇನ್ಸ್ಟಾಲೇಷನ್ ಮಾಡಲಾಗಿದ್ದು, ಮೊಬೈಲ್ ಬಳಕೆ ಇಲ್ಲದವರಿಗೂ ಇದು ಉಪಯೋಗವಾಗಲಿದೆ. ಇಲ್ಲಿಯವರೆಗೆ ಮೊದಲ ಹಂತದಲ್ಲಿ ಅಶೋಕನಗರ, ಜ್ಞಾನಭಾರತಿ ಕ್ಯಾಂಪಸ್, ಐಒಸಿ ವೃತ್ತ, ರಸೆಲ್ ಮಾರುಕಟ್ಟೆ, ಮಾರೇನಹಳ್ಳಿ ಸೇರಿದಂತೆ ಇತರೆಡೆ ತುರ್ತು ಸಹಾಯವಾಣಿ ಬಾಕ್ಸ್‌ಗಳನ್ನು ಅಳವಡಿಸಲಾಗಿದೆ. ಈ ಯೋಜನೆಯ ಭಾಗವಾಗಿ, 7,500 ಸಿಸಿಟಿವಿಗಳನ್ನು ಸ್ಥಾಪಿಸುವ ಗುರಿ ಕೂಡ ಇದೆ. ಅದರಲ್ಲಿ ಸುಮಾರು 4,000 ಈಗಾಗಲೇ ಅಳವಡಿಸಲಾಗಿದೆ.

suddiyaana