ನಟ ಜಗ್ಗೇಶ್ ಕಾಲಿಗೆ ಏಟು – ಪಾದದ ಮೂಳೆ ಮುರಿತದಿಂದ 6 ವಾರಗಳ ವಿಶ್ರಾಂತಿಗೆ ವೈದ್ಯರ ಸಲಹೆ
ನಟ ಜಗ್ಗೇಶ್ ಕಾಲಿಗೆ ಏಟಾಗಿದ್ದು, 6 ವಾರಗಳ ವಿಶ್ರಾಂತಿಯಲ್ಲಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆ ಮುಗಿಯುತ್ತಿದ್ದಂತೆ ಜಗ್ಗೇಶ್ ಅಮೆರಿಕಕ್ಕೆ ತೆರಳಿದ್ದರು. ಅಲ್ಲಿಂದ ಕೆಲ ದಿನಗಳ ಹಿಂದಷ್ಟೆ ಭಾರತಕ್ಕೆ ಮರಳಿದ್ದರು. ಆದರೆ ಇದೀಗ ಜಗ್ಗೇಶ್ ಕಾಲಿನ ಮೂಳೆ ಮುರಿದಿದ್ದು, ಆರು ವಾರಗಳ ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದಾರೆ. ಈ ಬಗ್ಗೆ ಸ್ವತಃ ಜಗ್ಗೇಶ್ ಅವರೇ ಚಿತ್ರ ಹಂಚಿಕೊಂಡಿದ್ದು, ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಆಸ್ಕರ್ ಪ್ರಶಸ್ತಿ ಮೂಲಕ ವಿಶ್ವದಾದ್ಯಂತ ಗಮನಸೆಳೆದ ಜೋಡಿ – ಸೂರಿಗಾಗಿ ನೆರವಿಗೆ ಕಾಯುತ್ತಿದ್ದಾರೆ ಬೆಳ್ಳಿ ಬೊಮ್ಮನ್
ಸಣ್ಣ ಅಚಾತುರ್ಯ ನಡಿಗೆಯಿಂದ ಪಾದದ ಮೂಳೆ ಮುರಿತ, 6ವಾರದ ದಿಗ್ಭಂಧನ ನಡಿಗೆಗೆ ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ. ನಡೆಯುವಾಗ ಆದ ಅಚಾತುರ್ಯದಿಂದ ಪಾದದ ಮೂಳೆ ಮುರಿತವಾಗಿದೆ ಎಂದು ಜಗ್ಗೇಶ್ ಹೇಳಿದ್ದಾರೆ. ಅನೇಕರು ಜಗ್ಗೇಶ್ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ನಟ ಜಗ್ಗೇಶ್ ಕಾಲಿಗೆ ಏಟಾಗಿರುವ ಬಗ್ಗೆ ಇನ್ನೊ ಂದು ವಿಚಾರವೂ ಚರ್ಚೆಗೆ ಬಂದಿದೆ. ಇತ್ತೀಚೆಗೆ ಅಮೆರಿಕಕ್ಕೆ ಹೋಗಿದ್ದ ಜಗ್ಗೇಶ್ ಅಲ್ಲಿಂದ ವಾಪಸ್ ಬರುವಾಗ ವಿಮಾನದಲ್ಲಿ ಆದ ಘಟನೆಯಿಂದ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ವಿಮಾನ ಬೆಂಗಳೂರಿನಲ್ಲಿ ಭೂ ಸ್ಪರ್ಷ ಮಾಡುವ ಮುನ್ನ ಜರ್ಕ್ ಹೊಡೆದಿದ್ದರಿಂದ ಜಗ್ಗೇಶ್ ಕಾಲಿಗೆ ಪೆಟ್ಟಾಗಿದೆ ಎನ್ನಲಾಗುತ್ತಿದೆ. ಜಗ್ಗೇಶ್ ಮಾತ್ರವೇ ಅಲ್ಲದೆ ಅದೇ ವಿಮಾನದಲ್ಲಿದ್ದ ಇನ್ನೂ ಕೆಲವು ಪ್ರಯಾಣಿಕರಿಗೂ ಪೆಟ್ಟಾಗಿದೆ. ಗಗನ ಸಖಿಯರಿಬ್ಬರಿಗೂ ಪೆಟ್ಟಾಗಿದೆ ಎನ್ನಲಾಗುತ್ತಿದೆ.