ಮೊಬೈಲ್‌ ಉತ್ಪಾದನೆಯಲ್ಲಿ ಭಾರತ ನಂ.1 ದೇಶವಾಗಲು ಇನ್ನೊಂದೇ ಹೆಜ್ಜೆ ಬಾಕಿ! – ಇಷ್ಟೊಂದು ಪ್ರಗತಿ ಸಾಧಿಸಲು ಕಾರಣವೇನು?

ಮೊಬೈಲ್‌ ಉತ್ಪಾದನೆಯಲ್ಲಿ ಭಾರತ ನಂ.1 ದೇಶವಾಗಲು ಇನ್ನೊಂದೇ ಹೆಜ್ಜೆ ಬಾಕಿ! – ಇಷ್ಟೊಂದು ಪ್ರಗತಿ ಸಾಧಿಸಲು ಕಾರಣವೇನು?

ನವದೆಹಲಿ: ಭಾರತದ ತಂತ್ರಜ್ಞಾನ ಜಗತ್ತು ಸದಾ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ಭಾರತದ ಮೂಲಸೌಕರ್ಯ, ಅನೂಕೂಲಕ ಸರ್ಕಾರಿ ನೀತಿ ಮತ್ತು ಪ್ರತಿಭಾವಂತ ನೌಕರರು ಇರುವುದರಿಂದ ಜಾಗತಿಕ ಕಂಪೆನಿಗಳನ್ನು ಭಾರತ ಆಕರ್ಷಿಸುತ್ತಿದೆ. ಪ್ರಸ್ತುತ ಮೊಬೈಲ್‌ ತಯಾರಿಕೆಯಲ್ಲಿಯೂ ಹೆಚ್ಚು ಪ್ರಗತಿ ಸಾಧಿಸುತ್ತಿದೆ. ಇದೀಗ ಮೊಬೈಲ್ ಉತ್ಪಾದನೆಯಲ್ಲಿ ಭಾರತ ನಂ.1 ದೇಶವಾಗಲು ಇನ್ನೊಂದೇ ಹೆಜ್ಜೆ ಬಾಕಿ ಇದೆ.

ಇದನ್ನೂ ಓದಿ: ಟೆಕ್ನಾಲಜಿ ಮೂಲಕವೇ ಸಮರ! – ಭಾರತ ಮತ್ತು ಅಮೆರಿಕ ನಡುವಿನ ಡ್ರೋನ್ ಡೀಲ್ ಫಿಕ್ಸ್?

ವೇಗವಾಗಿ ಪ್ರಗತಿ ಪಡೆಯುತ್ತಿರುವ ದೇಶಗಳಲ್ಲಿ ಭಾರತ ಕೂಡ ಒಂದು. ವಿದೇಶಿ ಕಂಪನಿಗಳು ಕೂಡ ಭಾರತದತ್ತ ಮುಖಮಾಡುತ್ತಿದೆ. ಅತಿದೊಡ್ಡ ಸ್ಮಾರ್ಟ್​ಫೋನ್ ಕಂಪೆನಿ ಆ್ಯಪಲ್, ದಕ್ಷಿಣ ಕೊರಿಯಾದ ಸ್ಯಾಮ್ಸಂಗ್ ಕಂಪೆನಿ ಉತ್ಪನ್ನಗಳನ್ನು ಭಾರತದಲ್ಲಿ ತಯಾರಿಸುತ್ತಿದೆ. ಜತೆಗೆ ಮೊಬೈಲ್ ಕ್ಷೇತ್ರದಲ್ಲಿ 100 ಪ್ರತಿಶತ ವಿದೇಶಿ ನೇರ ಹೂಡಿಕೆಗೆ ಅನುಮತಿ ನೀಡಿದೆ. ಈ ಮೂಲಕ ಮೊಬೈಲ್ ತಯಾರಿಕಾ ಕ್ಷೇತ್ರಕ್ಕೆ ಭಾರತ ಸೂಕ್ತ ತಾಣವಾಗಿ ಬದಲಾಗಿದ್ದು, ಮೊಬೈಲ್‌ ಉತ್ಪಾದನೆಯಲ್ಲಿ ಭಾರತ ವಿಶ್ವದ ಎರಡನೇ ಸ್ಥಾನ ಪಡೆದಿದೆ. ಚೀನಾ ಮೊದಲ ಸ್ಥಾನವನ್ನು ಬಾಚಿಕೊಂಡಿದೆ.

ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಭಾರತವು ತಂತ್ರಜ್ಞಾನದ ಮೇಲೆ ತನ್ನ ಹಿಡಿತ ಬಲಪಡಿಸಿದೆ. ಇದು ಹೂಡಿಕೆದಾರರಿಗೂ ಸಾಕಷ್ಟು ನೆರವಾಗಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಮೇಕ್ ಇನ್ ಇಂಡಿಯಾ ಯೋಜನೆಯಡಿ ಆ್ಯಪಲ್ ಕಂಪೆನಿ ಭಾರತದ ಮೂರು ಕಡೆಗಳಲ್ಲಿ ಮೊಬೈಲ್ ಉತ್ಪಾದಿಸುತ್ತಿದೆ. ಲಾವಾ ಕಂಪೆನಿ ದೇಶೀಯ ಮಾರುಕಟ್ಟೆಗೆ 5G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ಮೊದಲ ಭಾರತೀಯ ಬ್ರಾಂಡ್ ಆಗಿದೆ. ಉತ್ತಮ ಮೂಲಸೌಕರ್ಯ ನೀಡಿರುವುದರಿಂದ ಕಂಪೆನಿಗಳಿಗೆ ಭಾರತದಲ್ಲಿ ತನ್ನ ಉತ್ಪಾದನೆಯನ್ನು ದ್ವಿಗುಣಗೊಳಿಸಲು ಸಾಧ್ಯವಾಗುತ್ತಿದೆ ಎಂದು ಹೇಳಲಾಗುತ್ತಿದೆ.

suddiyaana