ಟೆಕ್ನಾಲಜಿ ಮೂಲಕವೇ ಸಮರ! – ಭಾರತ ಮತ್ತು ಅಮೆರಿಕ ನಡುವಿನ ಡ್ರೋನ್ ಡೀಲ್ ಫಿಕ್ಸ್?

ಟೆಕ್ನಾಲಜಿ ಮೂಲಕವೇ ಸಮರ! – ಭಾರತ ಮತ್ತು ಅಮೆರಿಕ ನಡುವಿನ ಡ್ರೋನ್ ಡೀಲ್ ಫಿಕ್ಸ್?

ಭಾರತ ಸರ್ಕಾರ ಅಮೆರಿಕದಿಂದ ಯಾಕೆ ಡ್ರೋನ್ ಖರೀದಿಸ್ತಿದೆ ಅನ್ನೋದಲ್ಲಿ ರಷ್ಯಾ ಮತ್ತು ಉಕ್ರೇನ್​ನಲ್ಲಿ ನಡೆಯುತ್ತಿರುವ ಯುದ್ಧವೇ ಸಾಕ್ಷಿ. ಈಗಿ ಸೈನಿಕರಿಗಿಂತ ಹೆಚ್ಚಾಗಿ ಟೆಕ್ನಾಲಜಿ ಮೂಲಕವೇ ಸಮರ ನಡೆಯುತ್ತೆ. ಸೈನಿಕರು ಎದುರುಬದುರಾಗಿ ಹೋರಾಡೋದ್ರ ಬದಲು ಅತ್ಯಾಧುನಿಕ ಮಿಸೈಲ್​ಗಳು, ಶಸ್ತ್ರಾಸ್ತ್ರಗಳು, ಡ್ರೋನ್​ಗಳ ಮೂಲಕವೇ ಹೊಡೆದಾಟ ನಡೆಯುತ್ತೆ. ಈಗ ಉಕ್ರೇನ್​​ನಲ್ಲಿ ನಡೆಯುತ್ತಿರೋದು ಕೂಡ ಇದೇ. ರಷ್ಯಾ ಮತ್ತು ಉಕ್ರೇನ್​​ ನಡುವೆ ಈಗ ಅಕ್ಷರಶ: ಡ್ರೋನ್ ಯುದ್ಧವೇ ನಡೀತಿದೆ. ಎರಡೂ ದೇಶಗಳ ಸ್ಪರ್ಧೆಗೆ ಬಿದ್ದಂತೆ ಪರಸ್ಪರ ಡ್ರೋನ್​​ಗಳನ್ನ ಹೊಡೆದುರುಳಿಸುತ್ತಿವೆ.

ಇದನ್ನೂ ಓದಿ: ವಿಶ್ವದ ಮೊಟ್ಟ ಮೊದಲ ನೀರು, ಚಹಾ, ಕಾಫಿ, ಬಿಸ್ಕೆಟ್ ಎಟಿಎಂ – ಗ್ರಾಹಕ ಸ್ನೇಹಿ ಮಶೀನ್ ಹೈದರಾಬಾದ್‌ನಲ್ಲಿ ಆರಂಭ

ರಷ್ಯಾ ವಶದಲ್ಲಿರುವ ಕ್ರೈಮಿಯಾ ಬಳಿ ಪುಟಿನ್​ ಪಡೆ ಒಟ್ಟು 9 ಉಕ್ರೇನ್ ಡ್ರೋನ್​ಗಳನ್ನ ಶೂಟ್ ಮಾಡಿದೆ. ಮತ್ತೊಂದೆಡೆ ಉಕ್ರೇನ್​ ಸೇನೆ ಕೂಡ ರಷ್ಯಾದ ಡ್ರೋನ್​ಗಳನ್ನ ಹೊಡೆದುರುಳಿಸಿದೆ. ರಾಜಧಾನಿ ಕೀವ್​​ನಲ್ಲಿ ಹಾರಾಡುತ್ತಿದ್ದ ರಷ್ಯಾದ ಒಟ್ಟು 20 ಡ್ರೋನ್​ಗಳನ್ನ ನಾಶಪಡಿಸಿರೋದಾಗಿ ಉಕ್ರೇನ್ ಹೇಳಿಕೊಂಡಿದೆ. ಉಕ್ರೇನ್​ ಸೇನೆಗೆ ಅಮೆರಿಕವೇ ಭಾರಿ ಪ್ರಮಾಣದಲ್ಲಿ ಡ್ರೋನ್​​ಗಳನ್ನ ಸಪ್ಲೈ ಮಾಡುತ್ತಿದೆ. ಹೀಗೆ ದೊಡ್ಡಣ್ಣ ಯುದ್ಧದಲ್ಲೇ ಭಾರಿ ಬ್ಯುಸಿನೆಸ್​ ಮಾಡಿಕೊಳ್ಳುತ್ತಿದ್ದಾನೆ. ದುಡ್ಡು ಮಾಡೋಕೆ ಈಗ ಭಾರತಕ್ಕೂ ಡ್ರೋನ್ ಆಫರ್ ಕೊಟ್ಟಿದ್ದಾನೆ.

suddiyaana