ಸತ್ತವರನ್ನು ಗೌರವಿಸಿ ಸತ್ತವರ ಪಕ್ಕದಲ್ಲಿಯೇ ಊಟ ಮಾಡಿ – ಈ ರೆಸ್ಟೋರೆಂಟ್‌ಗ ಬರಲು ‘ಗುಂಡಿಗೆ’ ಗಟ್ಟಿಯಿರಬೇಕು..!

ಸತ್ತವರನ್ನು ಗೌರವಿಸಿ ಸತ್ತವರ ಪಕ್ಕದಲ್ಲಿಯೇ ಊಟ ಮಾಡಿ – ಈ ರೆಸ್ಟೋರೆಂಟ್‌ಗ ಬರಲು ‘ಗುಂಡಿಗೆ’ ಗಟ್ಟಿಯಿರಬೇಕು..!

ಗ್ರಾಹಕರನ್ನ ಆಕರ್ಷಿಸುವ ಸಲುವಾಗಿ ರೆಸ್ಟೋರೆಂಟ್ ಗಳು ಭಿನ್ನ ಭಿನ್ನ ಮೆನು ತಯಾರಿ ಮಾಡುವುದರ ಜೊತೆಗೆ  ರೆಸ್ಟೋರೆಂಟ್ ವಿನ್ಯಾಸದಲ್ಲೂ ತಮ್ಮ ಕ್ರಿಯೇಟಿವಿಟಿಯನ್ನ ತೋರಿಸೋದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಥೀಮ್ ಆಧಾರಿತ ರೆಸ್ಟೋರೆಂಟ್ ಗಳು ನಮ್ಮಲ್ಲಿ ಇತ್ತೀಚಿನ ದಿನಗಳಲ್ಲಿ ಜಾಸ್ತಿ ಕಾಣಲು ಸಿಗುತ್ತವೆ. ಡಿನ್ನರ್ ಇನ್ ದಿ ಸ್ಕೈ ಎಂಬ ಗಾಳಿಯಲ್ಲಿ ತೇಲಾಡುವ ಟೇಬಲ್ ನಲ್ಲಿ ಊಟ ಎಂಬ ಪರಿಕಲ್ಪನೆ ಯಿಂದ ಹಿಡಿದು ಜಲಪಾತದ ತಳದಲ್ಲಿ ಕುಳಿತು ಊಟವನ್ನು ಆನಂದಿಸುವಂತಹ ಥೀಮ್ ಗಳು ಇವತ್ತು ಹಲವಾರು ದೇಶಗಳಲ್ಲಿವೆ. ಆದರೆ ಇಲ್ಲೊಂದು ರೆಸ್ಟೋರೆಂಟ್ ತಮ್ಮ ಪರಿಕಲ್ಪನೆಯ ಕ್ರಿಯೇಟಿವಿಟಿಯಲ್ಲಿ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿದೆ. ಹೌದೂ.. ಈ ರೆಸ್ಟೋರೆಂಟ್‌ನಲ್ಲಿ ಸತ್ತ ಜನರ ಪಕ್ಕದಲ್ಲೇ ಊಟ ಮಾಡುವ ಅವಕಾಶವಿದೆಯಂತೆ. ಅಂದ ಹಾಗೇ ಇಂತದೊಂದು ವಿಚಿತ್ರವಾದ ರೆಸ್ಟೋರೆಂಟ್ ಇರೋದು ನಮ್ಮ ದೇಶದಲ್ಲೇ.

ಇದನ್ನೂ ಓದಿ: ಕಾಡುಮೃಗಗಳ ನಡುವೆ ಬದುಕಿಗಾಗಿ 40 ದಿನಗಳ ಸಾಹಸ – ಅಮೆಜಾನ್ ಅರಣ್ಯದಲ್ಲಿ ನಾಲ್ವರು ಮಕ್ಕಳ ರಕ್ಷಣೆಯ ರೋಚಕ ಕಥೆ

‘ದಿ ಲಕ್ಕಿ ಟೀ ಸ್ಟಾಲ್’ ಇದು 50 ವರುಷಗಳ ಹಿಂದೆ ಅಹಮದಾಬಾದ್‌ನ ಲಾಲ್ ದರ್ವಾಜಾದಲ್ಲಿ ಆರಂಭವಾಗಿತ್ತು. ಅಂದಿನಿಂದ  ಚಹಾ ಅಂಗಡಿಯಲ್ಲಿ ಅತಿಥಿಗಳು ತಮ್ಮ ಸುತ್ತಲೂ ಶವಪೆಟ್ಟಿಗೆಯ ಪಕ್ಕದಲ್ಲೇ ತಿಂಡಿ ತಿನ್ನುತ್ತಾರೆ. ಶವಪೆಟ್ಟಿಗೆಗಳು ಮತ್ತು ಟೇಬಲ್ ಗಳು ಒಂದರ ಪಕ್ಕದಲ್ಲಿಯೇ ಇವೆ. ಈ ಶವಪೆಟ್ಟಿಗೆಗಳನ್ನು ಕಬ್ಬಿಣದ ಗ್ರಿಲ್‌ಗಳಿಂದ ಮುಚ್ಚಲಾಗಿದ್ದರೂ ಇವುಗಳು ಶವ ಪೆಟ್ಟಿಗೆಯ ರೀತಿಯಲ್ಲಿಯೇ ಕಂಡು ಬರುತ್ತವೆ. ಅಂದ ಹಾಗೇ ರೆಸ್ಟೋರೆಂಟ್ ಮಾಲೀಕ ಕೃಷ್ಣನ್ ಕುಟ್ಟಿ ಅವರು ಈ ಜಮೀನನ್ನು ತೆಗೆದುಕೊಳ್ಳುವ ಮೊದಲು ಇದು ಸ್ಮಶಾನವಾಗಿತ್ತು ಎಂದು ಅವರಿಗೆ ತಿಳಿದಿರಲಿಲ್ಲ. ಆದಾಗಿಯೂ ತಿಳಿದ ನಂತರ ಅಲ್ಲಿ ರೆಸ್ಟೋರೆಂಟ್ ನಿರ್ಮಿಸುವ ಅವರ ಯೋಜನೆಯನ್ನ ಬದಲಾಯಿಸಿಕೊಂಡಿರಲಿಲ್ಲ. ಅದನ್ನೇ ಅನುಕೂಲವನ್ನಾಗಿ ಮಾಡಿಕೊಂಡು ಸತ್ತವರೊಂದಿಗೆ ಊಟ ಎನ್ನುವ ಪರಿಕಲ್ಪನೆಯೊಂದಿಗೆ ರೆಸ್ಟೋರೆಂಟ್ ಆರಂಭವಾಗುತ್ತದೆ. ಈಗ ಇದು ಹ್ಯಾಂಗ್ ಔಟ್ ಮಾಡಲು ಅತ್ಯಂತ ಪ್ರಿಯವಾದ ಸ್ಥಳಗಳಲ್ಲಿ ಒಂದಾಗಿದೆ.

ಪ್ರತಿದಿನ ಬೆಳಿಗ್ಗೆ, ರೆಸ್ಟೋರೆಂಟ್‌ನ ಕೆಲಸಗಾರರು  ಎಲ್ಲಾ ಸಮಾಧಿಗಳನ್ನು ಸ್ವಚ್ಛಗೊಳಿಸುತ್ತಾರೆ ಮತ್ತು ಅದರ ಮೇಲೆ ಹೂವುಗಳನ್ನು ಇರಿಸಿ ಅವುಗಳನ್ನು ಸ್ವಚ್ಛವಾದ ಬಟ್ಟೆಯಿಂದ ಮುಚ್ಚುತ್ತಾರೆ. ಅಂತರವನ್ನು ಸೃಷ್ಟಿಸಲು, ಪವಿತ್ರತೆಯನ್ನು ಕಾಪಾಡಲು ಮತ್ತು ಜನರು ಸಮಾಧಿಗಳ ಮೇಲೆ ಬೀಳದಂತೆ ರಕ್ಷಿಸಲು, ಸುತ್ತಲೂ ಸ್ಟೀಲ್ ಬಾರ್‌ಗಳನ್ನು ಹಾಕಲಾಗಿದೆ ಮತ್ತು ಸಮಾಧಿಗಳ ಸುತ್ತಲೂ ರೆಸ್ಟೋರೆಂಟ್ ಟೇಬಲ್‌ಗಳನ್ನು ಇರಿಸಲಾಗಿದೆ. ಮಾಲೀಕರು ಮತ್ತು ಕೆಲಸಗಾರರು ಸಮಾಧಿಗಳನ್ನು ಗೌರವದಿಂದ ನೋಡುತ್ತಾರೆ. ಏಕೆಂದರೆ ಈ ಸಮಾಧಿಗಳು ತಮ್ಮ ವ್ಯವಹಾರಕ್ಕೆ ಅದೃಷ್ಟವನ್ನು ತರುತ್ತವೆ ಎಂದು ಅವರು ನಂಬುತ್ತಾರೆ.

“ಸತ್ತವರನ್ನು ಗೌರವಿಸಿ, ಬದುಕಿರುವವರನ್ನು ಗೌರವಿಸಿದಂತೆ” ಎಂಬ ಧ್ಯೇಯವಾಕ್ಯದೊಂದಿಗೆ ರೆಸ್ಟೋರೆಂಟ್ ನಡೆಯುತ್ತಿದೆ. ರಾತ್ರಿಯ ಊಟ ಅಥವಾ ಕ್ಯಾಶುಯಲ್ ಚಾಯ್ ಹ್ಯಾಂಗ್‌ಔಟ್ ಸಮಯವಾಗಲಿ, ಈ ಸ್ಥಳವು ಯಾವಾಗಲೂ ಗ್ರಾಹಕರಿಂದ ತುಂಬಿರುತ್ತದೆ ಮತ್ತು  ಊಟವನ್ನು ಆನಂದಿಸುತ್ತಾರೆ. ಗ್ರಾಹಕರು ಮತ್ತು ಅಲ್ಲಿಯ ಕೆಲಸಗಾರರು ಇಬ್ಬರೂ ಸಮಾಧಿಗಳ ನಡುವೆ ನ್ಯಾವಿಗೇಟ್ ಮಾಡುವ ಮೂಲಕ ತಮ್ಮ ಟೇಬಲ್‌ಗಳಿಗೆ ದಾರಿ ಮಾಡಿಕೊಡುತ್ತಾರೆ ಮತ್ತು ಸತ್ತವರೊಂದಿಗೆ ಊಟ ಎನ್ನುವ ಎಂಬ ಪರಿಕಲ್ಪನೆಯೂ ಎಷ್ಟೇ ವಿಚಿತ್ರವಾಗಿದ್ದರೂ ಲಕ್ಕಿ ರೆಸ್ಟೋರೆಂಟ್ ಟೇಬಲ್‌ಗಳು ಮಾತ್ರ ಯಾವಾಗಲೂ ಗ್ರಾಹಕರೊಂದಿಗೆ ತುಂಬಿರುತ್ತವೆ. ಗ್ರಾಹಕರು ತಮ್ಮ ಸುತ್ತಮುತ್ತಲಿನ ಕಡೆಗೆ ಹೆಚ್ಚು ಗಮನ ಹರಿಸದೆ ಪರಸ್ಪರರ ಕಂಪನಿಯನ್ನು ಆನಂದಿಸುತ್ತಾರೆ.

suddiyaana