ರಾಕಿಂಗ್ ಸ್ಟಾರ್ ಯಶ್ ಮನೆಗೆ ಐಷಾರಾಮಿ ಕಾರು – ದುಬಾರಿ ಕಾರಿನ ಬೆಲೆ ನಾಲ್ಕು ಕೋಟಿ ರೂಪಾಯಿ..!
![ರಾಕಿಂಗ್ ಸ್ಟಾರ್ ಯಶ್ ಮನೆಗೆ ಐಷಾರಾಮಿ ಕಾರು – ದುಬಾರಿ ಕಾರಿನ ಬೆಲೆ ನಾಲ್ಕು ಕೋಟಿ ರೂಪಾಯಿ..!](https://suddiyaana.com/wp-content/uploads/2023/06/Rocking-Star-Yash.webp)
ಕೆಜಿಎಫ್, ಕೆಜಿಎಫ್ 2 ಸಿನಿಮಾ ಸಕ್ಸಸ್ ನಂತರ ರಾಕಿಂಗ್ ಸ್ಟಾರ್ ಯಶ್, ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದಿದ್ದಾರೆ. ಯಶ್ಗೆ ಡಿಮ್ಯಾಂಡ್ ಕೂಡಾ ಹೆಚ್ಚಾಗುತ್ತಿದೆ. ಅನೇಕ ಪ್ರತಿಷ್ಠಿತ ಬ್ರ್ಯಾಂಡ್ಗಳಿಗೆ ರಾಯಭಾರಿ ಆಗಿರುವ ಯಶ್ ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಾರೆ. ಅದಕ್ಕೆ ತಕ್ಕಂತೆ ಅವರ ಲೈಫ್ಸ್ಟೈಲ್ ಕೂಡ ಬದಲಾಗಿದೆ. ಈಗ ಯಶ್ ಮನೆಗೆ ಹೊಸ ಐಷಾರಾಮಿ ಕಾರು ಬಂದಿದೆ. ರೇಂಜ್ ರೋವರ್ ಕಾರನ್ನು ರಾಕಿಂಗ್ ಸ್ಟಾರ್ ಯಶ್ ಖರೀದಿಸಿದ್ದಾರೆ.
ಇದನ್ನೂ ಓದಿ: ನಿವೇದಿತಾ ಚೊಚ್ಚಲ ಸಿನಿಮಾ ‘ಫೈರ್ ಫ್ಲೈ’ – ಮಗಳಿಗೆ ಶುಭಹಾರೈಸಿದ ಶಿವರಾಜ್ ಕುಮಾರ್
ಕಪ್ಪು ಬಣ್ಣದ ರೇಂಜ್ ರೋವರ್ ಕಾರನ್ನು ಯಶ್ ಖರೀದಿಸಿದ್ದು ಈ ಸಂದರ್ಭದಲ್ಲಿ ಪತ್ನಿ ರಾಧಿಕಾ ಪಂಡಿತ್ ಜೊತೆಯಲ್ಲಿದ್ದರು. ಮಕ್ಕಳಾದ ಯಥರ್ವ್ ಮತ್ತು ಐರಾ ಕೂಡ ಬಂದಿದ್ದರು. ಕಪ್ಪು ಬಣ್ಣದ ರೇಂಜ್ ರೋವರ್ ಸ್ಪೆಷಲ್ ಎಡಿಷನ್ ಕಾರು ಇದಾಗಿದೆ. ಪೂಜೆಯ ಬಳಿಕ ಪತ್ನಿ ರಾಧಿಕಾ ಮತ್ತು ಮಕ್ಕಳ ಜೊತೆ ಕಾರಿನಲ್ಲಿ ಯಶ್ ಸುತ್ತಾಡಿದ್ದಾರೆ. ಬಳಿಕ ಮಕ್ಕಳೊಂದಿಗೆ ಯಶ್ ದಂಪತಿ ಕಾರಿನ ಮುಂದೆ ನಿಂತು ಪೋಸ್ ನೀಡಿದ್ದಾರೆ. ಈ ಹೊಸ ರೇಂಜ್ ರೋವರ್ ಕಾರಿನ ಬೆಲೆ ಬರೋಬ್ಬರಿ 4 ಕೋಟಿ ರೂಪಾಯಿ. ಅನೇಕ ಐಷಾರಾಮಿ ಸೌಲಭ್ಯಗಳು ಈ ಕಾರಿನಲ್ಲಿವೆ. ಯಶ್ ನಟಿಸಲಿರುವ ಹೊಸ ಸಿನಿಮಾ ಇನ್ನಷ್ಟೇ ಸೆಟ್ಟೇರಬೇಕಿದೆ. ಅದಕ್ಕೂ ಮುನ್ನವೇ ಅವರು ದುಬಾರಿ ಬೆಲೆಯ ಕಾರನ್ನು ಖರೀದಿಸಿದ ಸಂಭ್ರಮದಲ್ಲಿದ್ದಾರೆ ಯಶ್.