ಗುಜರಾತ್ ಗೆ ಅಪ್ಪಳಿಸಲಿದೆ ಬಿಪರ್ ಜಾಯ್ ಚಂಡಮಾರುತ – ನಿವಾಸಿಗಳ ಸ್ಥಳಾಂತರ.. ಎಲ್ಲೆಲ್ಲೂ ಕಟ್ಟೆಚ್ಚರ

ಗುಜರಾತ್ ಗೆ ಅಪ್ಪಳಿಸಲಿದೆ ಬಿಪರ್ ಜಾಯ್ ಚಂಡಮಾರುತ – ನಿವಾಸಿಗಳ ಸ್ಥಳಾಂತರ.. ಎಲ್ಲೆಲ್ಲೂ ಕಟ್ಟೆಚ್ಚರ

ಬಿಪರ್ ಜಾಯ್ ಚಂಡಮಾರುತ ಗುಜರಾತಿನ ಕರಾವಳಿಯತ್ತ ಮುನ್ನುಗ್ಗಿ ಬರುತ್ತಿದೆ.. ಗುರುವಾರ ಸಂಜೆ ಅಂದ್ರೆ ಜೂನ್ 15ರಂದು 125ರಿಂದ150 ಕಿಲೋ ಮೀಟರ್ ವೇಗದಲ್ಲಿ ಕಡಲತೀರಕ್ಕೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಚಂಡಮಾರುತ ಅತ್ಯಂತ ಬೃಹತ್ ಪ್ರಮಾಣದಲ್ಲಿ ಹಾನಿಯುಂಟು ಮಾಡುವ ಸಾಧ್ಯತೆ ಇದೆ. 7 ಜಿಲ್ಲೆಗಳಲ್ಲಿ ಸಾಕಷ್ಟು ಹಾನಿಯಾಗಲಿದೆ, ಈ ಪೈಕಿ ಕಛ್, ದೇವಭೂಮಿ ದ್ವಾರಕಾ ಹಾಗೂ ಜಾಮ್‍ನಗರ ಜಿಲ್ಲೆಗಳಲ್ಲಿ ಅಗಾಧ ಹಾನಿಯಾಗುವ ಸಂಭವವಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಸೌರಾಷ್ಟ್ರ-ಕಛ್ ಪ್ರದೇಶದ ಕರಾವಳಿ ಭಾಗಗಳಲ್ಲಿ ಬಿರುಗಾಳಿಯೊಂದಿಗೆ ಭಾರಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಚಂಡಮಾರುತದ ಚಲನೆಯು ಈಶಾನ್ಯ ದಿಕ್ಕಿನಲ್ಲಿ ಉಳಿಯುವ ಸಾಧ್ಯತೆಯಿದೆ ಮತ್ತು ಇದು ದಕ್ಷಿಣ ರಾಜಸ್ಥಾನದ ಕಡೆಗೆ ಚಲಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ : ತಿರುಪತಿ ಘಾಟ್​​ ರಸ್ತೆಯಲ್ಲಿ ಹೆಚ್ಚಾಗುತ್ತಿದೆ ಅಪಘಾತ – ಮಹಾ ಶಾಂತಿ ಹೋಮದ ಮೊರೆ ಹೋದ ಟಿಟಿಡಿ

ಚಂಡಮಾರುತದ ಹಿನ್ನೆಲೆ ಎರಡು ಹಂತಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಮೊದಲ ಹಂತದಲ್ಲಿ, ಸಮುದ್ರ ತೀರದಿಂದ 1 ರಿಂದ 5 ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸಲಾಗುತ್ತಿದೆ. ಎರಡನೇ ಹಂತದಲ್ಲಿ, ಕರಾವಳಿಯ 5 ರಿಂದ 10 ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸಲಾಗುತ್ತದೆ. ಚಂಡಮಾರುತದ ಹಿನ್ನೆಲೆ 17 ಎನ್​ಡಿಆರ್‍ಎಫ್ ಮತ್ತು 12 ಎಸ್​ಡಿಆರ್‍ಎಫ್ ತಂಡಗಳನ್ನು ದೇವಭೂಮಿ ದ್ವಾರಕಾ, ರಾಜ್‍ಕೋಟ್, ಜಾಮ್‍ನಗರ, ಜುನಾಗಢ್, ಪೋರಬಂದರ್, ಗಿರ್, ಸೋಮನಾಥ್, ಮೊರ್ಬಿ ಮತ್ತು ವಲ್ಸಾದ್ ಪೀಡಿತ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆಯಾಗಿ ಇರಿಸಲಾಗಿದೆ. ಪ್ರಯಾಣಿಕರ ಸುರಕ್ಷತೆ ಮತ್ತು ರೈಲು ಕಾರ್ಯಾಚರಣೆಯನ್ನು ಸರಾಗವಾಗಿಸಲು ಪಶ್ಚಿಮ ರೈಲ್ವೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.

ನಿರೀಕ್ಷಿತ ಭೂಕುಸಿತಕ್ಕೆ ಎರಡು ದಿನಗಳ ಮೊದಲೇ ಗುಜರಾತ್ ನ ಕರಾವಳಿ ಪ್ರದೇಶಗಳಿಂದ 30,000 ಜನರನ್ನು ತಾತ್ಕಾಲಿಕ ಆಶ್ರಯಕ್ಕೆ ಸ್ಥಳಾಂತರಿಸಿದ್ದಾರೆ. ಮೀನುಗಾರಿಕೆ ಚಟುವಟಿಕೆಗಳನ್ನು ಜೂನ್ 16 ರವರೆಗೆ ಸ್ಥಗಿತಗೊಳಿಸಲಾಗಿದೆ, ಬಂದರುಗಳನ್ನು ಮುಚ್ಚಲಾಗಿದೆ ಮತ್ತು ಹಡಗುಗಳಿಗೆ ಲಂಗರು ಹಾಕಲಾಗಿದೆ.ಗುಜರಾತ್ ಕರಾವಳಿಗೆ ಬಿಪರ್‍ಜೋಯ್ ಚಂಡಮಾರುತ ಅಪ್ಪಳಿಸುವ ಸೂಚನೆ ಮೇರೆಗೆ ಭಾರತೀಯ ರೈಲ್ವೆಯು 56 ರೈಲುಗಳ ಮಾರ್ಗ ಕಡಿತಗೊಳಿಸಿದ್ದು, 90 ರೈಲುಗಳನ್ನು ರದ್ದುಗೊಳಿಸಿದೆ. ಇದರಲ್ಲಿ ದ್ವಾರಕಾ, ಪೋರಬಂದರ್, ವೆರಾವಲ್, ಓಕಾ, ಗಾಂಧಾಮ್‍ಗೆ ಹೋಗುವ ರೈಲುಗಳ ಮಾರ್ಗ ಕಡಿತಗೊಳಿಸಿ ಅಹಮದಾಬಾದ್, ರಾಜ್‍ಕೋಟ್ ಹಾಗೂ ಸುರೇಂದ್ರನಗರದಲ್ಲಿ ನಿಲ್ಲಿಸಲಾಗುವುದು. ಇದರೊಂದಿಗೆ ಡಬಲ್ ಕಂಟೈನರ್ ರೈಲುಗಳನ್ನು ನಿಲ್ಲಿಸಲಾಗಿದೆ.

 

suddiyaana