ನದಿಯಲ್ಲಿ ಬೋಟ್‌ ಮುಳುಗಿ 103 ಮಂದಿ ಸಾವು – ಮದುವೆಯಿಂದ ಹಿಂತಿರುಗುತ್ತಿದ್ದ ವೇಳೆ ಘೋರ ದುರಂತ

ನದಿಯಲ್ಲಿ ಬೋಟ್‌ ಮುಳುಗಿ 103 ಮಂದಿ ಸಾವು – ಮದುವೆಯಿಂದ ಹಿಂತಿರುಗುತ್ತಿದ್ದ ವೇಳೆ ಘೋರ ದುರಂತ

ನೈಜೀರಿಯಾ: ಮದುವೆಯಿಂದ ಹಿಂತಿರುಗುತ್ತಿದ್ದಾಗ ದೋಣಿಯೊಂದು ಮಗುಚಿ ಬಿದ್ದಿದ್ದು, ಮಕ್ಕಳು ಸೇರಿದಂತೆ 103 ಮಂದಿ ಸಾವನ್ನಪ್ಪಿರುವ ಘಟನೆ ಉತ್ತರ ನೈಜೀರಿಯಾದಲ್ಲಿ ನಡೆದಿದೆ.

ಕ್ವಾರ ರಾಜ್ಯದ ಪಟೇಗಿ ಜಿಲ್ಲೆಯಲ್ಲಿ ನೈಜರ್ ನದಿಯಲ್ಲಿ ಈ ದುರಂತ ಸಂಭವಿಸಿದೆ. ಬೋಟ್ ನಲ್ಲಿ 300ಕ್ಕೂ ಅಧಿಕ ಜನರು ಪ್ರಯಾಣಿಸುತ್ತಿದ್ದರು. ಮದುವೆ ಸಮಾರಂಭ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿತ್ತು. ಹೀಗಾಗಿ ಜನರು ನದಿ ದಾಟಲು ಸಾಧ್ಯವಾಗದೇ ದೋಣಿಯಲ್ಲಿ ತೆರಳಿದ್ದಾರೆ.

ಇದನ್ನೂ ಓದಿ: ಇಂದು ನಗರದಲ್ಲಿ ಹಾರ್ನ್‌ ಹೊಡೆಯುವಂತಿಲ್ಲ! – ಟ್ರಾಫಿಕ್‌ ಪೊಲೀಸರಿಂದ ವಿಶೇಷ ಆಂದೋಲನ

ದೋಣಿಯ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರು ಪ್ರಯಾಣ ಮಾಡುತ್ತಿದ್ದರು. ಈ ವೇಳೆ ನೀರಿನಲ್ಲಿ ಒಂದು ದೊಡ್ಡ ಮರದ ದಿಮ್ಮಿ ಡಿಕ್ಕಿ ಹೊಡೆದಿದ್ದು, ದೋಣಿ ಎರಡು ಭಾಗವಾಗಿದೆ. ಈ ವೇಳೆ ದೋಣಿಯಲ್ಲಿದ್ದ ಜನರು ನೀರಿಗೆ ಬಿದ್ದಿದ್ದಾರೆ. ಘಟನೆಯಲ್ಲಿ 103 ಮಂದಿ ಸಾವನ್ನಪ್ಪಿದ್ದಾರೆ. 100 ಜನರನ್ನು ರಕ್ಷಣೆ ಮಾಡಲಾಗಿದೆ. ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ನೈಜರ್ ನದಿಗೆ ಬಿದ್ದಿರುವ ಜನರನ್ನು ಸ್ಥಳೀಯರು ಮತ್ತು ಪೊಲೀಸರು ಸೇರಿ ಹುಡುಕುತ್ತಿದ್ದಾರೆ. ಇದುವರೆಗೆ 100 ಜನರನ್ನು ರಕ್ಷಣೆ ಮಾಡಲಾಗಿದೆ. ನದಿಯಲ್ಲಿ ಮುಳುಗಿ ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ಮದುವೆಯಲ್ಲಿ ಭಾಗಿಯಾಗಿದ್ದ ಸಂಬಂಧಿಕರು ಎಂದು ಪೊಲೀಸರು ತಿಳಿಸಿದ್ದಾರೆ.

suddiyaana