ಅಭಿ – ಅವಿವಾ ಬೀಗರೂಟಕ್ಕೆ ಮಂಡ್ಯದಲ್ಲಿ ಸಿದ್ಧತೆ – 50 ಸಾವಿರ ಮಂದಿಗೆ ಭರ್ಜರಿ ಬಾಡೂಟ

ಅಭಿ – ಅವಿವಾ ಬೀಗರೂಟಕ್ಕೆ ಮಂಡ್ಯದಲ್ಲಿ ಸಿದ್ಧತೆ – 50 ಸಾವಿರ ಮಂದಿಗೆ ಭರ್ಜರಿ ಬಾಡೂಟ

ಮಂಡ್ಯದ ಗಂಡು ಅಂಬರೀಶ್ ಎಂದು ಹೇಳುವಾಗಲೇ ರೆಬೆಲ್ ಸ್ಟಾರ್ ಗೆ ಮಂಡ್ಯ ಅಂದರೆ ಅದೆಷ್ಟು ಇಷ್ಟ ಅನ್ನುವುದು ಎಲ್ಲರಿಗೂ ಗೊತ್ತಿದೆ. ಮಂಡ್ಯ ಮತ್ತು ಅಂಬರೀಶ್ ನಂಟು ಇರೋದೇ ಹಾಗೆ. ಇದೀಗ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಬೀಗರೂಟ ಕಾರ್ಯಕ್ರಮ ಮಂಡ್ಯದಲ್ಲಿ ನಡೆಯಲಿದೆ. ಸುಮಾರು 50 ಸಾವಿರ ಮಂದಿಗೆ ಬೀಗರೂಟ ಬಡಿಸಲು ಭರ್ಜರಿಯಾಗಿಯೇ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮದುವೆಯಷ್ಟೆ ಅದ್ದೂರಿಯಾಗಿ ಬೀಗರೂಟ ಕಾರ್ಯಕ್ರಮ ಆಯೋಜಿತವಾಗಿದ್ದು, ಭಾರಿ ಸಂಖ್ಯೆಯಲ್ಲಿ ಜನರಿಗೆ ಭರ್ಜರಿ ಮಾಂಸದೂಟ ಹಾಕಿಸಲು ತಯಾರಿ ಆರಂಭವಾಗಿದೆ.

ಇದನ್ನೂ ಓದಿ:ಅಂಬಿ ಮಗನ ಮದುವೆ – ರಜಿನಿಕಾಂತ್, ಸುಹಾಸಿನಿ ಸೇರಿದಂತೆ ಗಣ್ಯರಿಂದ ಶುಭಾಶಯ

ಜೂನ್ 16ರಂದು ಬೀಗರೂಟ ಕಾರ್ಯಕ್ರಮ ನಡೆಯಲಿದೆ. ಮದ್ದೂರಿನ ಗೆಜ್ಜಲಗೆರೆಯ ಬೃಹತ್ ಮೈದಾನದಲ್ಲಿ ಬೀಗರೂಟಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸುಮಾರು 15 ಎರಕರೆ ಪ್ರದೇಶದಲ್ಲಿ ಜರ್ಮನ್ ಟೆಂಟ್‌ಗಳನ್ನು ಹಾಕಲಾಗುತ್ತಿದೆ. ಸುಮಾರು ಐವತ್ತು ಸಾವಿರ ಜನರಿಗೆ ಭೋಜನ ವ್ಯವಸ್ಥೆಯನ್ನು ಮಾಡಿಸಲಾಗುತ್ತಿದ್ದು, ವಿಐಪಿ ಹಾಗೂ ಸಾಮಾನ್ಯರಿಗಾಗಿ ಎರಡು ಕೌಂಟರ್‌ಗಳನ್ನು ಮಾಡಲಾಗುತ್ತಿದೆ. ಬೀಗರೂಟ ನಡೆಯುವ ಸಮಯದಲ್ಲಿಯೇ ನೂತನ ವಧು-ವರರು ಜನರಿಗೆ ನಮಸ್ಕಾರ ತಿಳಿಸಿ ಅಲ್ಲಿಯೇ ಅವರ ಅಭಿನಂದನೆ ಸ್ವೀಕರಿಸಲಿದ್ದಾರೆ.

ಇನ್ನು ಬೀಗರೂಟಕ್ಕೆ ಖಾದ್ಯಗಳನ್ನು ತಯಾರಿಸಲು ಈಗಾಗಲೇ ಪಟ್ಟಿ ತಯಾರಾಗಿದೆ. 7 ಟನ್ ಮಟನ್ ಹಾಗೂ 7 ಟನ್ ಚಿಕನ್ ಅನ್ನು ಬಳಸಿ ಬೀಗರೂಟ ತಯಾರು ಮಾಡಲಾಗುತ್ತಿದೆ. ಮೆನುವಿನಲ್ಲಿ ರಾಗಿ ಮುದ್ದೆ, ಬೋಟಿ ಗೊಜ್ಜು, ಮೊಟ್ಟೆ, ಮಟನ್, 2 ತರ ಚಿಕನ್, ಗೀ ರೈಸ್, ಅನ್ನ, ತಿಳಿ ಸಾಂಬಾರ್, ಮಜ್ಜಿಗೆ, ಬಾಳೆಹಣ್ಣು, ಬೀಡಾ ನಂದಿನಿ ಐಸ್ ಕ್ರೀಂ, ಇರಲಿವೆ.

suddiyaana