ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಿಗೆ ಉಳಿಗಾಲವೇ ಇಲ್ಲ – ಅಪ್ರಾಪ್ತ ಹಿಂದೂ ಹುಡುಗಿಯನ್ನ ಬಲವಂತವಾಗಿ ಮತಾಂತರಗೊಳಿಸಿ ವಿವಾಹ
ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಿಗೆ ಉಳಿಗಾಲವೇ ಇಲ್ಲದಂತಾಗಿದೆ. ಸಿಂಧ್ ಪ್ರಾಂತ್ಯದಲ್ಲಿ ಹಿಂದೂ ಸಮುದಾಯದ ಅಪ್ರಾಪ್ತ ಬಾಲಕಿಯನ್ನ ಅಪಹರಣ ಮಾಡಿ, ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸಿ ಮುಸ್ಲಿಂ ವ್ಯಕ್ತಿ ವಿವಾಹವಾಗಿರೋ ಘಟನೆ ನಡೆದಿದೆ.
ಇದನ್ನೂ ಓದಿ : ಟರ್ಕಿಶ್ ಹಡಗು ಹೈಜಾಕ್ – ಇಟಲಿ ವಿಶೇಷ ಪಡೆಯಿಂದ ಕಾರ್ಯಚರಣೆ
ಮೂವರು ಬಂದೂಕುಧಾರಿಗಳು ದಿಲೀಪ್ ಕುಮಾರ್ ಎಂಬುವವರ ಮನೆಗೆ ನುಗ್ಗಿ, ಚಿನ್ನಾಭರಣಗಳನ್ನ ದೋಚಿ, 14 ವರ್ಷದ ಪುತ್ರಿಯ ಹಣೆಗೆ ಪಿಸ್ತೂಲ್ ಇಟ್ಟು ಆಕೆಯನ್ನ ಮನೆಯಿಂದ ಎಳೆದೊಯ್ಯಲಾಗಿದೆ. ದಿಲೀಪ್ ಕುಮಾರ್ ಪುತ್ರಿಯ ಅಪಹರಣವಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ರೂ, ಮಗಳು ವಾಪಸ್ ಬರ್ತಾಳೆ ಅನ್ನೋ ಆಶಾಭಾವಣೆಯನ್ನೇ ಕಳೆದುಕೊಂಡಿದ್ದಾರಂತೆ. ಈ ನಡುವೆ ಪೊಲೀಸರು ಆಕೆ ತನ್ನ ಇಚ್ಛೆಯಂತೆ ಇಸ್ಲಾಂಗೆ ಮತಾಂತರಗೊಂಡು ವಿವಾಹವಾಗಿದ್ದಾಳೆ ಅಂತಾ ಹೇಳುತ್ತಿದ್ದಾರೆ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಸಮುದಾಯದ ಮಂದಿ ವಾಸವಿದ್ದಾರೆ. ಆದ್ರೆ, ಇತ್ತೀಚಿನ ವರ್ಷಗಳಲ್ಲಿ ಹಿಂದೂಗಳನ್ನ ಬಲವಂತವಾಗಿ ಮತಾಂತರ ಮಾಡಿ, ವಿವಾಹವಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಪಾಕ್ ಜನಸಂಖ್ಯೆಯಲ್ಲಿ ಶೇಕಡಾ 2.1ರಷ್ಟು ಹಿಂದೂಗಳಿದ್ದು, ಕೇವಲ ಶೇಕಡಾ 1.6ರಷ್ಟು ಕ್ರಿಶ್ಚಿಯನ್ನರಿದ್ದಾರೆ.