ಕೆನಡಾದಲ್ಲಿ ನಕಲಿ ಶಿಕ್ಷಣ ಸಂಸ್ಥೆಯ ಕುತಂತ್ರ? – 700 ವಿದ್ಯಾರ್ಥಿಗಳ ಸ್ಥಿತಿ ಅತಂತ್ರ
ನವದೆಹಲಿ: ಕೆನಡಾದಲ್ಲಿ ವಿದ್ಯಾಭ್ಯಾಸಕ್ಕೆ ತೆರಳಿರುವ ಸುಮಾರು 700 ಭಾರತೀಯ ವಿದ್ಯಾರ್ಥಿಗಳು ಸಂಕಷ್ಟದಲ್ಲಿದ್ದಾರೆ. ನಕಲಿ ಶಿಕ್ಷಣ ಸಂಸ್ಥೆಯ ಅಡ್ಮಿಶನ್ ಆಮಿಷಕ್ಕೆ ಬಲಿಯಾಗಿ ವಿದ್ಯಾರ್ಥಿಗಳು ಅತಂತ್ರ ಸ್ಥಿತಿ ಎದುರಿಸುತ್ತಿರುವ ಪ್ರಸಂಗ ಬೆಳಕಿಗೆ ಬಂದಿದೆ. ಅಲ್ಲದೆ, ಈ ವಿದ್ಯಾರ್ಥಿಗಳು ಗಡಿಪಾರು ಭೀತಿಯಲ್ಲಿದ್ದಾರೆ.
ಇದನ್ನೂ ಓದಿ: ವಿಮಾನದಲ್ಲಿ ತೆರಳುವಾಗ ಬಾಂಬ್ ಎಂದ ಪ್ರಯಾಣಿಕ – ತಪಾಸಣೆ ವೇಳೆ ಬ್ಯಾಗ್ ನಲ್ಲಿ ಸಿಕ್ಕಿದ್ದು ತೆಂಗಿನಕಾಯಿ!
ಸುಮಾರು 700 ಭಾರತೀಯ ವಿದ್ಯಾರ್ಥಿಗಳನ್ನು ಅಕ್ರಮವಾಗಿ ಅಡ್ಮಿಷನ್ ಮಾಡಿಕೊಳ್ಳಲಾಗಿತ್ತು. ಪಂಜಾಬಿಗಳೇ ಇವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರು ಕೆನಡಾದ ಕಾಯಂ ನಿವಾಸಿಗಳಾಗಲು ಅರ್ಜಿ ಸಲ್ಲಿಸಿದಾಗ ಅಡ್ಮಿಶನ್ ನಕಲಿ ಎಂದು ಬೆಳಕಿಗೆ ಬಂದಿದೆ. ಇವರ ರಕ್ಷಣೆಗೆ ಭಾರತ ಸರ್ಕಾರ ಧಾವಿಸಬೇಕು ಎಂದು ಪಂಜಾಬ್ ಎನ್ಆರ್ಐ ಖಾತೆ ಸಚಿವ ಕುಲದೀಪ್ ಸಿಂಗ್ ಧಾಲಿವಾಲ್ ಆಗ್ರಹಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್, ನಮ್ಮ ಸಚಿವಾಲಯ ಹಾಗೂ ಕೆನಡಾ ದೂತಾವಾಸವು ಈ ವಿಷಯವನ್ನು ಕೆನಡಾ ಸರ್ಕಾರದ ಮುಂದೆ ಇರಿಸಲಿದೆ. ಕೆನಡಾ ಸರ್ಕಾರ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿಕೊಡುವ ವಿಶ್ವಾಸವಿದೆ ಎಂದಿದ್ದಾರೆ.