ಇನ್ಸ್ಟಾಗ್ರಾಂನಲ್ಲೂ ಲಭ್ಯವಾಗಲಿದೆ ಕೃತಕ ಬುದ್ಧಿಮತ್ತೆ ಇರುವ ಚಾಟ್ಬಾಟ್!
ವಿಶ್ವದಾದ್ಯಂತ ತಂತ್ರಜ್ಞಾನ ಲೋಕದಲ್ಲಿ ಇತ್ತೀಚಿಗೆ ಹರಿದಾಡುತ್ತಿರುವ ಹಾಗೂ ಭಾರೀ ಸಂಚಲನ ಮೂಡಿಸುತ್ತಿರುವ ವಿಷಯ ಎಂದರೆ ‘ಚಾಟ್ ಜಿಟಿಪಿ’. ಇದೀಗ ಮೆಟಾ ಮಾಲೀಕತ್ವದ ಇನ್ಸ್ಟಾಗ್ರಾಂ ಬಳಕೆದಾರರಿಗೆ ಇನ್ನು ಕೃತಕ ಬುದ್ಧಿಮತ್ತೆಯೊಂದಿಗೆ ಚಾಟ್ ಮಾಡುವ ಅವಕಾಶ ಬರಲಿದೆ.
ಇದನ್ನೂ ಓದಿ: ಇನ್ನು ಮುಂದೆ ಪ್ಲೇಸ್ಟೋರ್ನಲ್ಲೂ ಲಭ್ಯವಾಗಲಿದೆ ‘ಚಾಟ್ ಜಿಟಿಪಿ’!
ಚಾಟ್ ಜಿಟಿಪಿ ಅಪ್ಲಿಕೇಷನ್ ಆರಂಭದಲ್ಲಿ ಕೇವಲ ವೆಬ್ಸೈಟ್ಗಳಲ್ಲಿ ಮಾತ್ರ ಲಭ್ಯವಿತ್ತು. ಬಳಿಕ ಆ್ಯಪ್ರೂಪದಲ್ಲಿ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ಕೆಲದಿನಗಳ ಹಿಂದಷ್ಟೇ ಹೇಳಿತ್ತು. ಇದೀಗ ಇನ್ಸ್ಟಾಗ್ರಾಂನಲ್ಲೂ ಕೃತಕ ಬುದ್ದಿಮತ್ತೆಯೊಂದಿಗೆ ಚಾಟ್ ಮಾಡುವ ಅವಕಾಶ ಲಭ್ಯವಾಗಲಿದೆ. ಇದಕ್ಕಾಗಿ ಇನ್ಸ್ಟಾಗ್ರಾಂ ಕೆಲ ಅಪ್ಡೇಟ್ಗಳನ್ನು ಪರೀಕ್ಷಿಸುತ್ತಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಲೀಕರ್ ಅಲೆಸ್ಸಾಂಡ್ರೊ ಪಲುಝಿ ಟ್ವೀಟ್ ಮಾಡಿದ್ದು, ಇನ್ಸ್ಟಾಗ್ರಾಂನಲ್ಲಿ ಚಾಟ್ ಜಿಟಿಪಿ ಹೇಗೆ ಕಾರ್ಯನಿರ್ವಹಿಸಲಿದೆ ಎಂಬುವುದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಚಾಟ್ಬಾಟ್ಗಳನ್ನು ಬಳಸುವ ಬಗ್ಗೆ ಯೋಜನೆಗಳಿವೆ ಎಂದು ಹೇಳಿದ್ದಾರೆ.
ಚಾಟ್ಬಾಟ್ಅನ್ನು ಪ್ರಶ್ನೆಗಳಿಗೆ ಉತ್ತರಿಸಲು ಮತ್ತು ಸಲಹೆ ನೀಡಲು ಬಳಸಲಾಗುತ್ತದೆ. ಬಳಕೆದಾರು ಚಾಟ್ ಮಾಡಲು 30 ರೀತಿಯ ವ್ಯಕ್ತಿತ್ವಗಳನ್ನು ಆಯ್ಕೆ ಮಾಡಬಹುದಾಗಿದೆ ಎಂದು ಲೀಕರ್ ಹಂಚಿಕೊಂಡ ಸ್ಕ್ರೀನ್ ಶಾಟ್ ನಲ್ಲಿ ಉಲ್ಲೇಖವಾಗಿದೆ.