‘ಮದುವೆಗೆ ಬಂದ್ರೂ ಮುಯ್ಯಿ ಹಾಕಲ್ಲ.. ಸಹಾಯ ಕೇಳಿ ಬರಬೇಡಿ..’ – ಸೋಲಿನ ನೋವು ತೋಡಿಕೊಂಡ ಮಾಜಿ ಶಾಸಕ!

‘ಮದುವೆಗೆ ಬಂದ್ರೂ ಮುಯ್ಯಿ ಹಾಕಲ್ಲ.. ಸಹಾಯ ಕೇಳಿ ಬರಬೇಡಿ..’ – ಸೋಲಿನ ನೋವು ತೋಡಿಕೊಂಡ ಮಾಜಿ ಶಾಸಕ!

ಕರ್ನಾಟಕ ಚುನಾವಣಾ ಫಲಿತಾಂಶ ಹಲವರ ಲೆಕ್ಕಾಚಾರಗಳನ್ನೇ ಬುಡಮೇಲು ಮಾಡಿತ್ತು. ಮತದಾರ ಕೊಟ್ಟ ಶಾಕ್​ಗೆ ಘಟಾನುಘಟಿ ನಾಯಕರೇ ನೆಲಕಚ್ಚಿದ್ರು. ಸೋಲಿನಿಂದ ಕಂಗೆಟ್ಟಿರೋ ನಾಯಕರು ಇನ್ನೂ ಕೂಡ ಆಘಾತದಿಂದ ಹೊರಬಂದಂತೆ ಕಾಣ್ತಿಲ್ಲ. ಮಂಡ್ಯ ಜಿಲ್ಲೆಯ ನಾಗಮಂಗಲ ಕ್ಷೇತ್ರದ ಮಾಜಿ ಶಾಸಕ ಸುರೇಶ್ ಗೌಡ ಕೂಡ ಅದೇ ನೋವಿನಲ್ಲಿದ್ದು, ನಾನು ಯಾವ ಮದುವೆಗೆ ಬಂದ್ರೂ ಮುಯ್ಯಿ ಹಾಕಲ್ಲ ಎಂದಿದ್ದಾರೆ.

ಇದನ್ನೂ ಓದಿ : ‘ವಿಧಾನಸಭೆಗೆ ಟಿಕೆಟ್ ಸಿಗಲಿಲ್ಲ.. ಲೋಕಸಭೆಗಾದ್ರೂ ಕೊಡಿ’ – 2 ಕ್ಷೇತ್ರಗಳ ಮೇಲೆ ಕಣ್ಣಿಟ್ಟ ಭವಾನಿ ರೇವಣ್ಣ?

ಮದ್ದೂರು (Maddur) ಕ್ಷೇತ್ರದ ಕೊಪ್ಪದಲ್ಲಿ ನಡೆದ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಸುರೇಶ್ ಗೌಡ, ನಂಬಿದವರಿಂದಲೇ ನನಗೆ ಮೋಸ ಆಗಿದೆ, ನಾನೀಗ ಸೋತಿದ್ದೇನೆ. ಈ ಚುನಾವಣೆ (Karnataka Election 2023) ಸೋಲಿನಿಂದ ಬೇಜಾರಾಗಿ ನನ್ನ ಮನಸ್ಸು ಕಲ್ಲಾಗಿದೆ ಎಂದು ಬೇಸರ ಹೊರ ಹಾಕಿದ್ದಾರೆ. ವೈಯಕ್ತಿಕ ಕಷ್ಟ ಹೇಳಿಕೊಂಡು ಯಾರೂ ಕೂಡ ನನ್ನ ಬಳಿ ಬರಬೇಡಿ. ಇನ್ಮುಂದೆ ಯಾವುದೇ ಮದುವೆಗೆ ಬಂದರೂ ನಾನು ಮುಯ್ಯಿ ಹಾಕಲ್ಲ‌. ನಾನೀಗ ಚುನಾವಣೆ ಸೋತು‌ ಕಷ್ಟದಲ್ಲಿದ್ದೇನೆ, ಆದರೂ ಬಂದು ಸಹಾಯ ಕೇಳ್ತೀರಿ ಎಂದು ಹೇಳುವ ಮೂಲಕ ಸೋಲಿನ ನೋವು ತೋಡಿಕೊಂಡಿದ್ದಾರೆ.

ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ (Nagamangala Assembly Constituency) ಜೆಡಿಎಸ್ ಅಭ್ಯರ್ಥಿಯಾಗಿ ಸುರೇಶ್ ಗೌಡ ಸ್ಪರ್ಧೆ ಮಾಡಿದ್ದರು. ಆದರೆ ಕಾಂಗ್ರೆಸ್​​ನ ಚಲುವರಾಯಸ್ವಾಮಿ (Chaluvarayaswamy) ಗೆಲುವು ದಾಖಲಿಸಿದ್ದಾರೆ. ಬಿಜೆಪಿಯಿಂದ ಮಾಜಿ ಸಂಸದ ಶಿವರಾಮೇಗೌಡರ ಪತ್ನಿ ಸುಧಾ ಶಿವರಾಮೇಗೌಡರು (Sudha Shivaramegowda) ಸ್ಪರ್ಧಿಸಿದ್ದರು. ಚಲುವರಾಯಸ್ವಾಮಿ ಅವರು 4,414 ಮತಗಳ ಅಂತರದಿಂದ ಸುರೇಶ್ ಗೌಡರ ವಿರುದ್ಧ ಗೆದ್ದಿದ್ದಾರೆ. ಸುಧಾ ಶಿವರಾಮೇಗೌಡರು 7,769 ಮತಗಳನ್ನು ಪಡೆದುಕೊಂಡಿದ್ದಾರೆ.

suddiyaana