ವೃದ್ಧಾಪ್ಯ ವೇತನ ಕೇಳಿದ್ದಕ್ಕೆ ನೀವು ಬದುಕೇ ಇಲ್ಲ ಎಂದ ಅಧಿಕಾರಿಗಳು! – ಆಫೀಸರ್‌ ಎಡವಟ್ಟಿನಿಂದ ವಂಚಿತರಾದ ವೃದ್ಧ..

ವೃದ್ಧಾಪ್ಯ ವೇತನ ಕೇಳಿದ್ದಕ್ಕೆ ನೀವು ಬದುಕೇ ಇಲ್ಲ ಎಂದ ಅಧಿಕಾರಿಗಳು! – ಆಫೀಸರ್‌ ಎಡವಟ್ಟಿನಿಂದ ವಂಚಿತರಾದ ವೃದ್ಧ..

ಸರ್ಕಾರದಿಂದ ಬರುವ ವೃದ್ಧಾಪ್ಯ ವೇತನ ಸಾಕಷ್ಟು ಬಡ ಕುಟುಂಬಗಳಿಗೆ ನೆರವಾಗಿದೆ. ಅನೇಕ ಜನರಿಗೆ ವೃದ್ದಾಪ್ಯ ವೇತನ ಆಸರೆಯಾಗಿದೆ. ಇಲ್ಲೊಬ್ಬ ವ್ಯಕ್ತಿ ಸುಮಾರು 10 ವರ್ಷಗಳಿಂದ ವೃದ್ಧಾಪ್ಯ ವೇತನ ಪಡೆಯುತ್ತಿದ್ದರು. ಆದರೆ ಸರ್ಕಾರಿ ಅಧಿಕಾರಿಗಳ ಎಡವಟ್ಟಿನಿಂದ ವೃದ್ದಾಪ್ಯ ವೇತನ ಬರುವುದೇ ನಿಂತಿದೆ.

ಕೆಲ ಸರ್ಕಾರಿ ಅಧಿಕಾರಿಗಳ ಎಡವಟ್ಟಿನಿಂದಾಗಿ ಅನೇಕ ಜನರು ತಮಗೆ ಸಿಗುತ್ತಿದ್ದ ಸರ್ಕಾರಿ ಸೌಲಭ್ಯಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಇದೀಗ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಇಂತಹದ್ದೇ ಎಡವಟ್ಟು ಆಗಿದೆ. 79 ವರ್ಷದ ವಿಜಯ್ ಹಾಥಿ ಅವರು ಕಳೆದ 10 ವರ್ಷಗಳಿಂದ ತಿಂಗಳಿಗೆ 1000 ಸಾವಿರದಂತೆ ವೃದ್ಧಾಪ್ಯ ವೇತನ ಪಡೆಯುತ್ತಿದ್ದರು. ಆದರೆ ಕಳೆದ ಎರಡು ವರ್ಷಗಳ ಹಿಂದೆ ನಿಂತಿದೆ. ಆತಂಕಕ್ಕೆ ಒಳಗಾದ ವಿಜಯ್‌ ಅವರು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಬಳಿ ಕೇಳಿದಾಗ “ನೀವು ಮೃತ ಪಟ್ಟಿದ್ದೀರಿ ಎಂದು ಸರ್ಕಾರದ ದಾಖಲೆಗಳಲ್ಲಿ ಬರೆಯಲಾಗಿದೆ ನಿಮಗೆ ಇನ್ಮುಂದೆ ಸೌಲಭ್ಯ ಸಿಗುವುದಿಲ್ಲ” ಎಂದು ಹೇಳಿದ್ದಾರೆ!

ಇದನ್ನೂ ಓದಿ: ಬಿಪಿಎಲ್‌ ಕಾರ್ಡ್‌ ದಾರರಿಗೆ ಉಚಿತ ಇಂಟರ್‌ ನೆಟ್!‌ – 20 ಲಕ್ಷ ಕುಟುಂಬಗಳಿಗೆ ಉಪಯೋಗ  

ವೃದ್ದಾಪ್ಯ ವೇತನ ಬರುವುದು ನಿಂತಾಗಿನಿಂದ ಮನೆಯಲ್ಲಿ ನಿತ್ಯ ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ತನ್ನ ಪತ್ನಿ ಹಾಗೂ ಅನಾರೋಗ್ಯಕ್ಕೆ ತುತ್ತಾಗಿ ಹಾಸಿಗೆಯಲ್ಲಿ ಮಲಗಿಯೇ ಇರುವ ಮಗನೊಂದಿಗೆ ಬದುಕು ಸಾಗಿಸಲು ವಿಜಯ್‌ ಅವರು ಪಡುವ ಕಷ್ಟಪಡುತ್ತಿದ್ದಾರೆ. ಮಗನ ಚಿಕಿತ್ಸೆಗೆ ಹಾಗೂ ಮನೆಯ ಖರ್ಚಿಗೆ ಚೂರಾದರೂ ಸಹಾಯವಾಗುತ್ತಿದ್ದ ಸರ್ಕಾರದ ವೃದ್ಧಾಪ್ಯ ವೇತನ ಸೌಲಭ್ಯ ಕಳೆದ ಎರಡು ವರ್ಷಗಳಿಂದ ನಿಂತಿದೆ. ಇದರಿಂದಾಗಿ ವಿಜಯ್ ಹಾಥಿ ಅವರಿಗೆ ದಿಕ್ಕೇ ತೋಚದಂತಾಗಿದೆ.

ಗ್ರಾ.ಪಂ.ಸದಸ್ಯ ಚಿತ್ತರಂಜನ್ ಹಾಲ್ದರ್ ಈ ಬಗ್ಗೆ ಅಧಿಕಾರಿಗಳು “ದಾಖಲೆಗಳಲ್ಲಿ ತಪ್ಪು ಮಾಹಿತಿ ಹಾಕಿದ್ದರಿಂದ ಅವರ ಪಿಂಚಣಿ ನಿಂತಿದೆ” ಹೇಳಿದ್ದಾರೆ. ತಮ್ಮ ತಪ್ಪೆಂದು ಒಪ್ಪಿಕೊಂಡ ಬಳಿಕ ಚಿತ್ತರಂಜನ್ ಹಲ್ದರ್, ಇನ್ನೊಬ್ಬ ಪಂಚಾಯತ್ ಕಾರ್ಯಕರ್ತನ ಹೆಸರನ್ನು ಹೇಳಿದ್ದಾರೆ. ಮತ್ತೊಂದೆಡೆ ಧೋಲಾ ಪಂಚಾಯತ್ ಮುಖ್ಯಸ್ಥೆ ರೂಬಿಯಾ ಬೀಬಿ ಕಯಾಲ್ ಅವರ ಪತಿ, ಸ್ಥಳೀಯ ತೃಣಮೂಲ ನಾಯಕ ಹೊಸೈನ್ ಕಯಾಲ್ ವೃದ್ಧಾಪ್ಯ ವೇತನ ಸೌಲಭ್ಯ ನಿಲ್ಲಿಸಲು ನಿಲ್ಲಿಸಲು ಪಂಚಾಯತ್ ಸದಸ್ಯರು ಮತ್ತು ಸಿಬ್ಬಂದಿಗಳು ಕಾರಣವೆಂದು ಆರೋಪಿಸಿದ್ದಾರೆ. ಸೌಲಭ್ಯವನ್ನು ಮತ್ತೆ ಮರು ಪ್ರಾರಂಭಿಸುವ ಪ್ರಕ್ರಿಯೆ ಆರಂಭವಾಗಿದೆ. ಪಂಚಾಯಿತಿ ಕಚೇರಿಗೆ ಈ ಸಂಬಂಧ ದಾಖಲೆಗಳನ್ನು ಕಳುಹಿಸಲಾಗಿದೆ ಎಂದು ಕುಲ್ಪಿ ಬಿಡಿಒ ಸೌರಭ್ ಗುಪ್ತಾ ಹೇಳಿದ್ದಾರೆ.

suddiyaana