ಬಿಪಿಎಲ್‌ ಕಾರ್ಡ್‌ ದಾರರಿಗೆ ಉಚಿತ ಇಂಟರ್‌ ನೆಟ್!‌ – 20 ಲಕ್ಷ ಕುಟುಂಬಗಳಿಗೆ ಉಪಯೋಗ  

ಬಿಪಿಎಲ್‌ ಕಾರ್ಡ್‌ ದಾರರಿಗೆ ಉಚಿತ ಇಂಟರ್‌ ನೆಟ್!‌ – 20 ಲಕ್ಷ ಕುಟುಂಬಗಳಿಗೆ ಉಪಯೋಗ  

ಸ್ಮಾರ್ಟ್​ಫೋನ್ ಎಂಬುದು ಇಂದಿನ ದಿನದಲ್ಲಿ ಹೇಗೆ ಮುಖ್ಯವೋ ಅದೇ ರೀತಿ ಇಂಟರ್ನೆಟ್​ ಸಹ ಅಷ್ಟೇ ಮುಖ್ಯವಾಗಿದೆ. ಇಂಟರ್ನೆಟ್​ ಸೌಲಭ್ಯ ಇಲ್ಲದೆ ಇಂದು ಯಾವುದೇ ಕೆಲಸವನ್ನು ಸಹ ಮಾಡಲು ಸಾಧ್ಯವಿಲ್ಲ. ಇಂಟರ್ನೆಟ್​ ಸೌಲಭ್ಯ ಪಡೆಯಬೇಕಾದ್ರೆ ಸಾವಿರಾರೂ ರೂಪಾಯಿ ಹಣ ಪಾವತಿಸಲೇಬೇಕು. ಆದ್ರೆ ಇಲ್ಲೊಂದು ರಾಜ್ಯದಲ್ಲಿ ಇಂಟರ್ನೆಟ್​ ಸೌಲಭ್ಯವನ್ನು ತನ್ನ ರಾಜ್ಯದ ಜನರಿಗೆ ಉಚಿತವಾಗಿ ನೀಡುತ್ತಿದೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜ್ಯದ ಎಲ್ಲಾ ಮನೆಗಳಿಗೆ ಹೈಸ್ಪೀಡ್ ಇಂಟರ್ನೆಟ್ ಸಂಪರ್ಕವನ್ನು ಒದಗಿಸಲು ಉದ್ದೇಶಿಸಿದ್ದು, ಈ ಹಿನ್ನೆಲೆ ಮಹತ್ವಾಕಾಂಕ್ಷೆಯ ಕೇರಳ ಫೈಬರ್ ಆಪ್ಟಿಕಲ್ ನೆಟ್ ವರ್ಕ್ (K-FON) ರಾಜ್ಯದಲ್ಲಿ ಅನುಷ್ಠಾನಗೊಳಿಸಿದ್ದಾರೆ.

ಇದನ್ನೂ ಓದಿ: ಗ್ಯಾರಂಟಿಗಳ ಬಳಿಕ ಜನರಿಗೆ ಬೆಲೆ ಏರಿಕೆ ಶಾಕ್‌ – ವಿದ್ಯುತ್ ಬಿಲ್ ಫಿಕ್ಸೆಡ್ ಚಾರ್ಜ್ ದಿಢೀರ್‌ ಹೆಚ್ಚಳ!

ಈ ಬಗ್ಗೆ ಮಾತನಾಡಿದ ಸಿಎಂ ಪಿಣೃರಾಯಿ ವಿಜಯನ್‌, ಕೇರಳ ಇಂಟರ್ನೆಟ್ ಪಡೆಯುವ ಹಕ್ಕನ್ನು ಮೂಲಭೂತ ಹಕ್ಕನ್ನಾಗಿ ಮಾಡಿದ ದೇಶದ ಏಕೈಕ ರಾಜ್ಯವಾಗಿದೆ. ಅಂತರ್ಜಾಲವು ಮೂಲಭೂತ ಹಕ್ಕಾಗಿ ಕಾಗದದಲ್ಲಿ ಉಳಿಯುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ರಾಜ್ಯವು K-FON ಅನ್ನು ಜಾರಿಗೆ ತರುತ್ತಿದೆ. ಎಲ್ಲರಿಗೆ ಹೈಸ್ಪೀಡ್ ಇಂಟರ್ನೆಟ್ ತಲುಪಿಸಲು ರಾಜ್ಯವು ಈಗ ಮೂಲಸೌಕರ್ಯಗಳನ್ನು ಒದಗಿಸುತ್ತಿದೆ ಎಂದು ಹೇಳಿದರು.

K-FON ಮೂಲಕ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) 20 ಲಕ್ಷ ಕುಟುಂಬಗಳಿಗೆ ಉಚಿತವಾಗಿ ಇಂಟರ್ನೆಟ್ ನೀಡಲಾಗುತ್ತಿದೆ. ಈ ಮೂಲಕ ಅತ್ಯಂತ ಹಿಂದುಳಿದವರೂ ಹೊಸ ಪ್ರಪಂಚಕ್ಕೆ ತೆರೆದುಕೊಂಡು ಹೊಂದಿಕೊಳ್ಳಲು ಸಾಧ್ಯವಾಗಲಿದೆ. ಯೋಜನೆಯ ಮೊದಲ ಭಾಗವಾಗಿ, 17,412 ಸರ್ಕಾರಿ ಕಚೇರಿಗಳು ಮತ್ತು 2,105 ಮನೆಗಳಿಗೆ ಉಚಿತ ಇಂಟರ್‌ ನೆಟ್‌ ಸಂಪರ್ಕವನ್ನು ನೀಡಲಾಗಿದೆ. 9,000 ಮನೆಗಳಿಗೆ ಸಂಪರ್ಕವನ್ನು ಖಚಿತಪಡಿಸಿಕೊಳ್ಳಲು ಈಗಾಗಲೇ ಕೇಬಲ್ ಜಾಲವನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.

ಕೋವಿಡ್ -19 ಸಾಂಕ್ರಾಮಿಕ ರೋಗದ ನಂತರ ವರ್ಕ್ ಫ್ರಂ ಹೋಮ್ ಹೊಸ ಕೆಲಸದ ಸಂಸ್ಕೃತಿಯಾಗಿ ಹೊರಹೊಮ್ಮಿದೆ. ನಮ್ಮ ಯುವಕರು ಈ ಉದಯೋನ್ಮುಖ ಕೆಲಸದ ಶೈಲಿಗಳಿಂದ ಪ್ರಯೋಜನ ಪಡೆಯಬೇಕಾದರೆ, ರಾಜ್ಯದಾದ್ಯಂತ ಉತ್ತಮ ಇಂಟರ್ನೆಟ್ ಸಂಪರ್ಕ ಇರಬೇಕು. K-FON ಆ ಸೌಲಭ್ಯ ಎಲ್ಲರಿಗೂ ತಲುಪಿಸಲು ಉದ್ದೇಶಿಸಿದೆ ಎಂದು ಹೇಳಿದ್ದಾರೆ.

suddiyaana