ನನಗೊಂದು ಹೆಣ್ಣು ಕೊಡಿಸಿ ಎಂದು ಅಧಿಕಾರಿಗಳಿಗೆ ಪತ್ರ – ವಧು ಹುಡುಕಲು ತಂಡ ರಚಿಸಿದ ಆಫೀಸರ್
ಜೈಪುರ: ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ ಎನ್ನುವುದು ಈಗಿನ ಯುವಕರ ಗೋಳು. ಹೀಗಾಗಿ ತಮಗೆ ಗೊತ್ತಿರುವವರ ಬಳಿ, ಬ್ರೋಕರ್ ಗಳ ಬಳಿ ಹೆಣ್ಣು ಹುಡುಕಿಕೊಡುವಂತೆ ಮನವಿ ಮಾಡುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ತಾನು ಏಕಾಂಗಿಯಾಗಿದ್ದೇನೆ. ತನಗೆ ಹೆಣ್ಣು ಹುಡುಕಿಕೊಡಿ ಎಂದು ಸರ್ಕಾರಿ ಅಧಿಕಾರಿಗೆ ಪತ್ರ ಬರೆದಿದ್ದಾನೆ.
ಇದನ್ನೂ ಓದಿ: ಅಕ್ಕಿ ಆಸೆಗೆ ಜನಗಳ ಜೀವ ತೆಗೆಯುತ್ತಿದ್ದ ಕಳ್ಳಾನೆ ಸೆರೆ – ತಯಾರಾಗುತ್ತಿದೆ ‘ಅರಿಕೊಂಬನ್’ ಅಟ್ಟಹಾಸದ ಸಿನಿಮಾ
ರಾಜಸ್ಥಾನದ ದೌಸಾ ಜಿಲ್ಲೆಯ ಬಹರವಾಂಡ ಬ್ಲಾಕ್ನ ಇನ್ಫ್ಲೇಶನ್ ರಿಲೀಫ್ ಕ್ಯಾಂಪ್ನಲ್ಲಿ ಈ ಘಟನೆ ನಡೆದಿದೆ. ಸಿಕ್ರಿ ಉಪವಿಭಾಗದ ಗಂಗಡವಾಡಿ ಗ್ರಾಮದ ನಿವಾಸಿ ಕಲ್ಲು ಮಾಹ್ವಾರ್ ಎಂಬಾತನೇ ಪತ್ರ ಬರೆದ ವ್ಯಕ್ತಿ. ತಾಲೂಕಿನ ತಹಸೀಲ್ದಾರ್ ಹರಿಕಿಶನ್ ಸೈನಿ ಎಂಬುವರಿಗೆ ಪತ್ರ ಬರೆದಿದ್ದಾನೆ. ಆತ ಬರೆದ ಪತ್ರ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಇದೀಗ ಆತನ ಪತ್ರಕ್ಕೆ ಅಧಿಕಾರಿಗಳು ಸ್ಪಂದಿಸಿದ್ದಾರೆ.
ಆತ ಪತ್ರದಲ್ಲಿ ʼನಾನು ಏಕಾಂಗಿಯಾಗಿದ್ದು, ಮನೆಯ ಜವಾಬ್ದಾರಿಗಳನ್ನು ನಿರ್ವಹಿಸಲು ತುಂಬಾ ಕಷ್ಟಪಡುತ್ತಿದ್ದೇನೆ. ಹೀಗಾಗಿ ನನಗೊಂದು ಹೆಣ್ಣು ಕೊಡಿಸಿ ಎಂದು ಬರೆದಿದ್ದಾನೆ. ಇದೀಗ ಆ ಪತ್ರವನ್ನು ಸರ್ಕಾರಕ್ಕೆ ರವಾನಿಸಿದ್ದು, ಪತ್ರ ಬರೆದ ವ್ಯಕ್ತಿಗೆ ಸೂಕ್ತ ಹೆಂಡತಿಯನ್ನು ಹುಡುಕಿಕೊಡಲು ಒಂದು ತಂಡವನ್ನು ರಚಿಸುವಂತೆ ಒತ್ತಾಯ ಮಾಡಿದ್ದಾರೆ.
ಕಲ್ಲು ಮಾಹ್ವಾರ್ ತನ್ನನ್ನು ಮದುವೆಯಾಗುವ ಯುವತಿಗೆ ಕೆಲವು ಮಾನದಂಡಗಳನ್ನು ನಿಗದಿಪಡಿಸಿದ್ದಾನೆ. ಅದರಲ್ಲಿ ಆತ ಬಾಳ ಸಂಗಾತಿಯಾಗುವವಳು ಸ್ಲಿಮ್ ಆಗಿ ಫೇರ್ ಆಗಿರಬೇಕು. ಆಕೆ 30 ರಿಂದ 40 ರ ನಡುವಿನ ವಯಸ್ಸಿನವಳಾಗಿರಬೇಕು. ಅಲ್ಲದೆ, ಮನೆಗೆಲಸಗಳಲ್ಲಿ ನೈಪುಣ್ಯತೆ ಇರಬೇಕೆಂದು ಎಂದು ಬೇಡಿಕೆ ಇಟ್ಟಿದ್ದಾರೆ.
ಆದರೆ, ಈ ರೀತಿಯ ಪತ್ರದಿಂದ ಹಿಂದೆ ಕೆಲವು ಕಿಡಿಗೇಡಿಗಳು ಇದ್ದಾರೆ ಎಂದು ತಹಸೀಲ್ದಾರ್ ಹರಿಕಿಶನ್ ಸೈನಿ ಆರೋಪಿಸಿದ್ದಾರೆ. ಸದ್ಯಕ್ಕೆ ಅರ್ಜಿಗೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಂಡಿಲ್ಲ ಮತ್ತು ಮುಂದೆ ಮುಂದುವರಿಸುವ ಸಾಧ್ಯತೆ ಇಲ್ಲ ಎಂದು ಹೇಳಲಾಗುತ್ತಿದೆ.