ಒಡಿಶಾ ರೈಲು ದುರಂತದ ಬಗ್ಗೆ ಸಿಬಿಐ ತನಿಖೆ – 40 ಮೃತದೇಹಗಳ ಮೇಲೆ ಸಣ್ಣ ಗಾಯವೂ ಆಗಿಲ್ಲ!
278 ಪ್ರಯಾಣಿಕರ ದಾರುಣ ಸಾವು. ಸಾವಿರಕ್ಕೂ ಹೆಚ್ಚು ಜನರ ನರಳಾಟ. ಮಾರಣಹೋಮಕ್ಕೆ ಸಾಕ್ಷಿಯಾದ ಒಡಿಶಾ ರೈಲು ದುರಂತ ಹತ್ತಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಪಘಾತದ ಸುತ್ತ ಷಡ್ಯಂತ್ರದ ವಾಸನೆ ಹರಿದಾಡ್ತಿದೆ. ಜೂನ್ 2 ರಂದು ಸಂಭವಿಸಿದ ಬಾಲಸೋರ್ ರೈಲು ದುರಂತ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದು, ಅಪಘಾತದ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ.
ಇದನ್ನೂ ಓದಿ : ಊರಿಗೆ ತೆರಳಲು ಬಸ್ ಇಲ್ಲವೆಂದು ತಾನೇ ಸರ್ಕಾರಿ ಬಸ್ ಚಲಾಯಿಸಿಕೊಂಡು ಹೋದ ಭೂಪ!
10 ಸದಸ್ಯರ ಸಿಬಿಐ ತಂಡ ಬಾಲಸೋರ್ ರೈಲು ಅಪಘಾತ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದೆ. ಯಾವುದಾರರೂ ಪಿತೂರಿಯಿಂದ ಈ ಘಟನೆ ನಡೆದಿದೆಯೇ ಎಂದು ಮಾಹಿತಿ ಕಲೆ ಹಾಕುತ್ತಿದೆ. ಹಾಗೇ ಕೋರಮಂಡಲ್ ಲೋಕೋ ಪೈಲಟ್ ಹಾಗೂ ಆತನ ಸಹಾಯಕನ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ.
ಮತ್ತೊಂದೆಡೆ ಮೃತರ ಪೈಕಿ 40 ಮೃತದೇಹಗಳ ಮೇಲೆ ಸಣ್ಣ ಗಾಯವೂ ಆಗಿಲ್ಲ. ಹೀಗಾಗಿ ಇವುಗಳಲ್ಲಿ ಹೆಚ್ಚಿನ ಸಾವುಗಳು ಬಹುಶಃ ಕರೆಂಟ್ ಶಾಕ್ನಿಂದ ಸಂಭವಿಸಿರಬಹುದು ಎಂದು ಅನುಮಾನಿಸಲಾಗಿದೆ. 101 ಶವಗಳ ಗುರುತು ಪತ್ತೆಯಾಗದ ಕಾರಣ ಸಂಬಂಧಿಕರ ಹಾಗೂ ಮೃತದೇಹಗಳ ಡಿಎನ್ಎ ಪರೀಕ್ಷೆ ನಡೆಸಲು ಸರ್ಕಾರ ನಿರ್ಧರಿಸಿದೆ.