ವಿಶ್ವದ ನಿಧಾನಗತಿಯ ವಿದ್ಯಾರ್ಥಿ ನಾನೇ..! – 71ನೇ ವಯಸ್ಸಿನಲ್ಲಿ ಇವರಿಗಿರುವ ಹುಮ್ಮಸ್ಸು ಹೇಗಿದೆ ಗೊತ್ತಾ..!

ವಿಶ್ವದ ನಿಧಾನಗತಿಯ ವಿದ್ಯಾರ್ಥಿ ನಾನೇ..! – 71ನೇ ವಯಸ್ಸಿನಲ್ಲಿ ಇವರಿಗಿರುವ ಹುಮ್ಮಸ್ಸು ಹೇಗಿದೆ ಗೊತ್ತಾ..!

ಪದವಿ ಪಡೆಯೋದಿಕ್ಕೆ ವಯಸ್ಸಿನ ಮಿತಿಯಿಲ್ಲ. ಕಲಿಯುವ ಆಸಕ್ತಿಯೊಂದೇ ಬೇಕಾಗಿರೋದು. ಇಲ್ಲೊಬ್ಬ ವ್ಯಕ್ತಿ ತನ್ನ 21ನೇ ವಯಸ್ಸಿನಲ್ಲಿ ಪದವಿ ಕಾಲೇಜ್ ಗೆ ಸೇರಿಕೊಳ್ಳುತ್ತಾರೆ. ಆದರೆ, ಆತ ಪದವಿ ಗಿಟ್ಟಿಸಿಕೊಳ್ಳಲು 50 ವರುಷವನ್ನ ತೆಗೆದುಕೊಳ್ಳಬೇಕಾಯಿತು. ಅಂದರೇ ತನ್ನ 71 ನೇ ವಯಸ್ಸಿನಲ್ಲಿ ಪದವಿ ಪೂರ್ಣಗೊಳಿಸುತ್ತಾರೆ. ಈ ಮೂಲಕ ತಾನು ವಿಶ್ವದ ನಿಧಾನಗತಿಯ ವಿದ್ಯಾರ್ಥಿ ಎಂದು ತನ್ನನ್ನು  ಹೇಳಿಕೊಳ್ಳುತ್ತಾರೆ. ಆದರೆ ಇಲ್ಲೊಂದು ಸಣ್ಣ ಟ್ವಿಸ್ಟ್ ಇದೆ. ಈತ ಕಲಿಯೋದಿಕ್ಕೆ ಆಸಕ್ತಿ ಇಲ್ಲದೇ ನಿಧಾನವಾಗಿ ಪದವಿಯನ್ನ ಪೂರ್ಣ ಗೊಳಿಸಿದ ಎಂದು ಅಂದ್ಕೋಬೇಡಿ. ಯಾಕೆಂದರೆ, ಈತ ಜೀವನದಲ್ಲಿ ಹೊಸ ಹೊಸ ಆಸಕ್ತಿಯನ್ನ ಕಂಡುಕೊಳ್ಳುತ್ತಾ ಜೀವನದಲ್ಲಿ ಯಶಸ್ವಿಯಾದ ಮೇಲೆ ಬಿಟ್ಟು ಹೋಗಿದ್ದ ಪದವಿಯನ್ನ ಮತ್ತೇ ಹುಡುಕುತ್ತಾ ಹೋಗಿ ಪೂರ್ಣಗೊಳಿಸುತ್ತಾನೆ.

ಇದನ್ನೂ ಓದಿ: ಗತವೈಭವ ಸಾರುವ ಅರಮನೆ ಈಗ ಐಷಾರಾಮಿ ಹೋಟೆಲ್ – ಒಂದು ದಿನಕ್ಕೆ 10 ₹ಲಕ್ಷ.. ಏನೆಲ್ಲಾ ವಿಶೇಷತೆ?

ಆರ್ಥರ್ ರಾಸ್ ಅವರು 1969 ರಲ್ಲಿ ತನ್ನ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿಯನ್ನ ಪಡೆಯಲು ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯ (UBC)  ಕ್ಕೆ ಸೇರಿಕೊಳ್ಳುತ್ತಾರೆ. ಆ ಸಮಯದಲ್ಲಿ ಅವರಿಗೆ ರಂಗಭೂಮಿಯ ಬಗ್ಗೆ ಹೆಚ್ಚಿನ ಒಲವು ಇತ್ತು. ಹಾಗಾಗಿ ಆ ಪದವಿ ಪೂರ್ತಿ ಗೊಳಿಸುವ ಮೊದಲೇ ಅಂದರೆ ಎರಡು ವರುಷದಲ್ಲೇ ತಮ್ಮ ಮೇಜರ್ ಅನ್ನು ಬದಲಾಯಿಸಿದರು ಮತ್ತು ನ್ಯಾಷನಲ್ ಥಿಯೇಟರ್ ಸ್ಕೂಲ್‌ಗೆ ಸೇರಿಕೊಂಡರು. ಅಲ್ಲಿ ಆ ಪದವಿಯನ್ನ ಪೂರ್ಣಗೊಳಿಸುತ್ತಾರೆ. ಹಾಗಿದ್ದರೂ ಅವರು ರಂಗಭೂಮಿಯನ್ನ ವೃತ್ತಿಯನ್ನಾಗಿಸಿಕೊಂಡಿರಲಿಲ್ಲ. ಇದಾದ ನಂತರ  ವಕೀಲನಾಗಬೇಕು ಎಂದು ಬಯಸುತ್ತಾರೆ ಮತ್ತೂ ಕಾನೂನು ಕಾಲೇಜ್ ಗೆ ಸೇರಿಕೊಳ್ಳುತ್ತಾರೆ. ಮುಂದೆ ಕಾನೂನನ್ನೇ ತನ್ನ ವೃತ್ತಿಯನ್ನಾಗಿ ಮಾಡಿಕೊಂಡು ಸಿವಿಲ್ ವ್ಯಾಜ್ಯಗಾರರಾಗಿ 35 ವರುಷ ದುಡಿಯುತ್ತಾರೆ.

2016 ರಲ್ಲಿ ನಿವೃತ್ತಿಯಾದ ನಂತರ 50 ವರುಷಗಳ ಹಿಂದೆ ಪ್ರಾರಂಭಿಸಿದ್ದ ಪದವಿಯನ್ನ ನೆನಪು ಮಾಡಿಕೊಳ್ಳುತ್ತಾರೆ. ಅದನ್ನ ಪೂರ್ಣ ಗೊಳಿಸಲು ಇದು ಸಕಾಲವೆಂದು ಯೋಚಿಸಿದ ಆರ್ಥರ್ ರಾಸ್ ಅವರು ಹೊಸ ವಿದ್ಯಾರ್ಥಿ ಸಂಖ್ಯೆಯನ್ನು ಪಡೆಯಲು ನವೆಂಬರ್ 2016 ರಲ್ಲಿ UBC ಗೆ ಕರೆ ಮಾಡುತ್ತಾರೆ. ಮತ್ತು ಜನವರಿ 2017 ರ ವೇಳೆಗೆ ಅವರು ಅರೆಕಾಲಿಕ ಇತಿಹಾಸ ವಿದ್ಯಾರ್ಥಿಯಾಗಿದ್ದರು. ಈಗ ಆರು ವರುಷಗಳ ನಂತರ 50 ವರುಷಗಳ ಹಿಂದೆ ಪ್ರಾರಂಭಿಸಿದ್ದ ಪದವಿಯನ್ನ ಪೂರ್ಣಗೊಳಿಸಲು ಯಶಸ್ವಿಯಾಗುತ್ತಾರೆ. ನಾನು ಕುತೂಹಲದಿಂದ ಕಲಿಯಲು ಬಯಸಿದ್ದೆ. ಕಲಿಕೆಯ ಆ ಬಯಕೆಯೇ ಇಷ್ಟು ವರ್ಷಗಳ ನಂತರ ತನ್ನ ಪದವಿಯನ್ನು ಮುಗಿಸಲು ಪ್ರೇರೇಪಿಸಿತು ಎಂದು ರಾಸ್ ಹೆಳುತ್ತಾರೆ ಮತ್ತೂ ವಿಶ್ವದ ನಿಧಾನಗತಿಯ ವಿದ್ಯಾರ್ಥಿ ತಾನೆಂದು ನಗುತ್ತಾ ಹೇಳಿಕೊಳ್ಳುತ್ತಾರೆ.

suddiyaana