ಪಶ್ಚಿಮ ಘಟ್ಟಗಳಲ್ಲಿವೆ ನೀರಿಲ್ಲದೆ ಬದುಕುವ ಸಸ್ಯಗಳು! – ಅಧ್ಯಯನದಲ್ಲಿ ವಿಜ್ಞಾನಿಗಳಿಗೆ ಗೊತ್ತಾಗಿದ್ದೇನು?

ಪಶ್ಚಿಮ ಘಟ್ಟಗಳಲ್ಲಿವೆ ನೀರಿಲ್ಲದೆ ಬದುಕುವ ಸಸ್ಯಗಳು! – ಅಧ್ಯಯನದಲ್ಲಿ ವಿಜ್ಞಾನಿಗಳಿಗೆ ಗೊತ್ತಾಗಿದ್ದೇನು?

ಭೂಮಿ ಮೇಲೆ ಬದುಕುವ ಪ್ರತಿಯೊಂದು ಜೀವಿಗಳಿಗೆ ನೀರು ಬೇಕೇ ಬೇಕು. ಗಿಡ, ಮರಗಳು ಕೂಡ ನೀರಿದ್ದ ಪ್ರದೇಶಗಳಲ್ಲಿ ಮಾತ್ರ ಬದುಕುತ್ತವೆ. ಆದರೆ ನೀರಿಲ್ಲದೆ ಬದುಕುವ ಸಸ್ಯಗಳ ಬಗ್ಗೆ ಕೇಳಿದ್ದೀರಾ? ಪಶ್ಚಿಮ ಘಟ್ಟಗಳಲ್ಲಿ ನೀರಿಲ್ಲದೆ ಬದುಕುವ ಗಿಡಗಳನ್ನು ವಿಜ್ಞಾನಿಗಳ ತಂಡವೊಂದು ಪತ್ತೆ ಹಚ್ಚಿದೆ.

ಇದನ್ನೂ ಓದಿ: ಈ ಮರದ ಗಾಳಿ ಉಸಿರಾಡಿದ್ರೆ ಸಾವು ಖಚಿತ? – ಈ ವೃಕ್ಷದ ಬಗ್ಗೆ ನಿಮಗೆ ಗೊತ್ತಾ?

ಪಶ್ಚಿಮ ಘಟ್ಟದ ಪ್ರದೇಶಗಳು ಹಚ್ಚ ಹಸಿರಿನಿಂದ ಕೂಡಿದೆ. ಈ ಪ್ರದೇಶದಲ್ಲಿ ಸಾವಿರಾರು ಗಿಡ, ಮರಗಳಿವೆ. ಇದೀಗ ಪುಣೆಯ ಅಘರ್ಕರ್ ಸಂಶೋಧನಾ ಸಂಸ್ಥೆಯ (ಎಆರ್‌ಐ) ಸಂಶೋಧಕರ ತಂಡ ಸಸ್ಯಗಳ ಮೇಲೆ ಅಧ್ಯಯನವೊಂದನ್ನು ನಡೆಸಿದ್ದು, ಈ ವೇಳೆ ಸುಮಾರು ಈಗ 62 ಹೊಸ ಜಾತಿಯ ಸಸ್ಯಗಳನ್ನು ಕಂಡುಹಿಡಿದಿದೆ ಮತ್ತು ವಿವರಗಳನ್ನು ನಾರ್ಡಿಕ್ ಜರ್ನಲ್ ಆಫ್ ಬಾಟನಿಯಲ್ಲಿ ಪ್ರಕಟಿಸಲಾಗಿದೆ. ಹೊಸದಾಗಿ ಗುರುತಿಸಲಾದ 16 ಜಾತಿಗಳು ಭಾರತೀಯ ಸ್ಥಳೀಯವಾಗಿದ್ದು, 12 ಪಶ್ಚಿಮ ಘಟ್ಟಗಳ ಹೊರವಲಯಕ್ಕೆ ಪ್ರತ್ಯೇಕವಾಗಿವೆ.

ಈ ಸಸ್ಯಗಳು ಬರಗಾಲದಲ್ಲಿಯೂ ಬದುಕಬಲ್ಲವು ಎಂದು ಸಂಶೋಧನೆಯಲ್ಲಿ ಪತ್ತೆಯಾಗಿವೆ. ವಿಶೇಷವಾಗಿ ಈ ಸಸ್ಯಗಳು ನೀರಿನ ಲಭ್ಯತೆ ಇಲ್ಲದೆ ಇದ್ದಾಗ ಸಂಪೂರ್ಣ ಕಾರ್ಯಚಟುವಟಿಕೆ ಸ್ಥಗಿತಗೊಳಿಸುತ್ತವೆ. ಯಾವಾಗ ನೀರು ಲಭ್ಯವಾಗುತ್ತದೆಯೋ ಆಗ ಮತ್ತೆ ಬೆಳೆಯಲು ಆರಂಭಿಸುತ್ತವೆ. ಆದ್ದರಿಂದ ಬರಪೀಡಿತ ಪ್ರದೇಶಗಳಲ್ಲಿ ಕೃಷಿಗೆ ಪೂರಕವಾಗಿ ಈ ಸಸ್ಯಗಳನ್ನು ಬೆಳೆಸಬಹುದು. ಸಸ್ಯಗಳು ಕೃಷಿಯಲ್ಲಿ, ವಿಶೇಷವಾಗಿ ನೀರಿನ ಕೊರತೆಯಿರುವ ಪ್ರದೇಶಗಳಲ್ಲಿಯೂ ಸಮೃದ್ಧವಾಗಿ ಬೆಳೆಯಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.

suddiyaana