ಅಡುಗೆ ಎಣ್ಣೆ ಬೆಲೆ ಬಾರಿ ಇಳಿಕೆ! – ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದ್ದೇನು?

ಅಡುಗೆ ಎಣ್ಣೆ ಬೆಲೆ ಬಾರಿ ಇಳಿಕೆ! – ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದ್ದೇನು?

ನವದೆಹಲಿ: ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನತೆಗೆ ಖುಷಿ ಸುದ್ದಿಯೊಂದಿದೆ. ಅಡುಗೆ ಎಣ್ಣೆ ದರವು ಶೀಘ್ರವೇ ಇಳಿಕೆಯಾಗಲಿದೆ. ಜಾಗತಿಕ ಮಾರುಕಟ್ಟೆಗನುಗುಣವಾಗಿ ಅಡುಗೆ ಎಣ್ಣೆಯ ಎಂಆರ್‌ಪಿ ದರವನ್ನು ಪ್ರತಿ ಲೀಟರ್‌ಗೆ 8 ರಿಂದ 12 ರೂ. ಕಡಿಮೆಗೊಳಿಸುವಂತೆ ಕೇಂದ್ರ ಆಹಾರ ಸಚಿವಾಲಯವು ಉದ್ಯಮಗಳಿಗೆ ಸೂಚಿಸಿದೆ.

ಇದನ್ನೂ ಓದಿ: ಬರೋಬ್ಬರಿ 74 ಲಕ್ಷಕ್ಕೂ ಅಧಿಕ ಭಾರತೀಯರ ವಾಟ್ಸ್​ಆ್ಯಪ್ ಖಾತೆ ಬ್ಯಾನ್‌! – ಮೆಟಾ ಕೊಟ್ಟ ಕಾರಣ ಏನು?

ಖಾದ್ಯ ತೈಲಗಳ ಚಿಲ್ಲರೆ ಬೆಲೆ(ಎಂಆರ್​ಪಿ) ಇಳಿಕೆ ಕುರಿತು ಚರ್ಚಿಸಲು ಕರೆಯಲಾದ ಎರಡನೇ ಸಭೆಯಲ್ಲಿ ಕೇಂದ್ರವು, ಸಾಲ್ವೆಂಟ್ ಎಕ್ಸ್‌ಟ್ರಾಕ್ಷನ್ ಅಸೋಸಿಯೇಷನ್ ​​ಆಫ್ ಇಂಡಿಯಾ ಮತ್ತು ಭಾರತೀಯ ತರಕಾರಿ ತೈಲ ಉತ್ಪಾದಕರ ಸಂಘದ ಉದ್ಯಮದ ಪ್ರತಿನಿಧಿಗಳ ಸಭೆಯಲ್ಲಿ ಅಡುಗೆ ತೈಲ ಬೆಲೆ ಕಡಿಮೆಗೊಳಿಸುವಂತೆ ನಿರ್ದೇಶನ ನೀಡಿದೆ.

ಕಳೆದ ಹಲವು ತಿಂಗಳಿನಿಂದ ವಿವಿಧ ಖಾದ್ಯ ತೈಲಗಳ ಬೆಲೆಯು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕುಸಿದಿದ್ದರೂ ಸಹಿತ ದೇಶೀಯ ಮಾರುಕಟ್ಟೆಯಲ್ಲಿನ ಬೆಲೆಗಳು ಕಡಿಮೆಯಾಗುತ್ತಿಲ್ಲ. ಹೀಗಾಗಿ ಅಡುಗೆ ಎಣ್ಣೆ ಬೆಲೆಯನ್ನು ಕಡಿತ ಮಾಡುವಂತೆ ಕೇಂದ್ರ ಸೂಚಿಸಿಲಾಗಿದೆ.

suddiyaana