ಭಾರತದಲ್ಲಿ ನಿರ್ಮಾಣವಾಗುತ್ತಿದೆ ಪ್ರಪಂಚದ ಮೊದಲ 3ಡಿ ದೇವಾಲಯ! – ಹೇಗಿರಲಿದೆ ಗೊತ್ತಾ ಈ ದೇಗುಲ?

ಭಾರತದಲ್ಲಿ ನಿರ್ಮಾಣವಾಗುತ್ತಿದೆ ಪ್ರಪಂಚದ ಮೊದಲ 3ಡಿ ದೇವಾಲಯ! – ಹೇಗಿರಲಿದೆ ಗೊತ್ತಾ ಈ ದೇಗುಲ?

3ಡಿ ಶೋ, 3ಡಿಸಿ ನಿಮಾಗಳು ಇತ್ತೀಚೆಗೆ ಕಾಮನ್‌. ಈಗ 3ಡಿ ದೇಗುಲವೊಂದು ನಿರ್ಮಾಣವಾಗುತ್ತಿದೆ. ಪ್ರಪಂಚದಲ್ಲಿಯೇ ಮೊದಲ ಬಾರಿಗೆ ಇಂತದ್ದೊಂದು ದೇವಾಲಯ ತಲೆಯೆತ್ತುತ್ತಿರುವುದು ತೆಲಂಗಾಣದಲ್ಲಿ.

ತೆಲಂಗಾಣದ ಸಿದ್ದಪೇಟೆಯ ಬುರುಗಪಲ್ಲಿಯಲ್ಲಿರುವ ಗೇಟೆಡ್ ವಿಲ್ಲಾ ಕಮ್ಯುನಿಟಿ ‘ಚರ್ವಿತ ಮೀಡೋಸ್’ನಲ್ಲಿ 3ಡಿ ದೇವಾಲಯ ನಿರ್ಮಾಣಗೊಳ್ಳುತ್ತಿದೆ. ಈ ಮಂದಿರವನ್ನು ಅಪ್ಸುಜಾ ಇನ್​ಫ್ರಾಟೆಕ್ ಸಂಸ್ಥೆ ನಿರ್ವಿುಸುತ್ತಿದ್ದು, 3,800 ಚದರ ಅಡಿ ಪ್ರದೇಶದಲ್ಲಿ ಈ ವಿಶಿಷ್ಟ ಮಂದಿರ ನಿರ್ಮಾಣಗೊಳ್ಳಲಿದೆ. ದೇವಸ್ಥಾನ ನಿರ್ಮಾಣಕ್ಕಾಗಿ 3ಡಿ-ಪ್ರಿಂಟೆಡ್ ನಿರ್ಮಾಣ ಕಂಪನಿಯಾದ ಸಿಂಪ್ಲಿಫೋರ್ಜ್ ಕ್ರಿಯೇಷನ್ಸ್​ನೊಂದಿಗೆ ಅಪ್ಸುಜಾ ಇನ್​ಫ್ರಾಟೆಕ್ ಒಪ್ಪಂದ ಮಾಡಿಕೊಂಡಿದೆ.

ಇದನ್ನೂ ಓದಿ: ಬರೋಬ್ಬರಿ 74 ಲಕ್ಷಕ್ಕೂ ಅಧಿಕ ಭಾರತೀಯರ ವಾಟ್ಸ್​ಆ್ಯಪ್ ಖಾತೆ ಬ್ಯಾನ್‌! – ಮೆಟಾ ಕೊಟ್ಟ ಕಾರಣ ಏನು?

3ಡಿ ದೇವಸ್ಥಾನದಲ್ಲಿ 3 ಗರ್ಭಗುಡಿ ಇರಲಿದೆ. ಗಣಪತಿಗೆ ಸಮರ್ಪಿತವಾದ ‘ಮೋದಕ’ ಆಕಾರದ ಗರ್ಭಗುಡಿ, ಶಂಕರನಿಗೆ ಚೌಕಾಕಾರ ಮತ್ತು ದೇವಿ ಪಾರ್ವತಿಗೆ ಕಮಲಾಕಾರದ ಗರ್ಭಗುಡಿಗಳು ಮಂದಿರದಲ್ಲಿರುತ್ತವೆ ಎಂದು ಅಪ್ಸುಜಾ ಇನ್​ಫ್ರಾಟೆಕ್​ನ ಆಡಳಿತ ನಿರ್ದೇಶಕ ಹರಿ ಕೃಷ್ಣ ಜೇಡಪಲ್ಲಿ ತಿಳಿಸಿದ್ದಾರೆ.

ಹೈದರಾಬಾದ್​ನ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ಸಹಯೋಗದೊಂದಿಗೆ ಸಿಂಪ್ಲಿ ಫೋರ್ಜ್ ಕ್ರಿಯೇಷನ್ಸ್ ಕಳೆದ ಮಾರ್ಚ್​ನಲ್ಲಿ ಕೇವಲ 2 ಗಂಟೆಯೊಳಗೆ ಸೇತುವೆಯ ಮೂಲಮಾದರಿ ನಿರ್ವಿುಸಿತ್ತು. ಅದು ಭಾರತದ ಆ ಬಗೆಯ ಮೊದಲ ಸೇತುವೆಯಾಗಿದೆ. ಆ ಸೇತುವೆಯನ್ನು ಕೂಡ ಚರ್ವಿತ ಮೀಡೋಸ್​ನಲ್ಲೇ ಜೋಡಿಸಲಾಗಿತ್ತು. ಐಐಟಿ ಹೈದರಾಬಾದ್​ನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಕೆ.ವಿ.ಎಲ್. ಸುಬ್ರಮಣಿಯಂ ಮತ್ತವರ ಸಂಶೋಧನಾ ತಂಡ ಅದರ ಪರಿಕಲ್ಪನೆ ಹಾಗೂ ವಿನ್ಯಾಸ ರೂಪಿಸಿತ್ತು. ಭಾರ ಹೊರುವ ಸಾಮರ್ಥ್ಯದ ಪರೀಕ್ಷೆ ಹಾಗೂ ಬಳಕೆಯ ಮೌಲ್ಯಮಾಪನದ ನಂತರ ಈ ಸೇತುವೆಯನ್ನು ಪಾದಚಾರಿಗಳ ಬಳಕೆಗೆ ಮುಕ್ತಗೊಳಿಸಲಾಗಿದೆ. ಈ ಸೇತುವೆಮಂದಿರದ ಸುತ್ತ ಇರುವ ಗಾರ್ಡನ್​ಗೆ ಪಾದಚಾರಿಗಳ ಸಂಚಾರಕ್ಕೆ ಅದು ಬಳಕೆಯಾಗಲಿದೆ ಎಂದು ಸಿಂಪ್ಲಿಫೋರ್ಜ್ ಕ್ರಿಯೇಷನ್ಸ್​ನ ಸಿಇಒ ಧ್ರುವ ಗಾಂಧಿ ಹೇಳಿದ್ದಾರೆ.

suddiyaana