ಉರುಳಿ ಬಿದ್ದ ಅಮೆರಿಕ ಅಧ್ಯಕ್ಷ – ಜೋ ಬೈಡನ್ ಜಾರಿ ಬಿದ್ದಿದ್ದೇಕೆ ?

ಉರುಳಿ ಬಿದ್ದ ಅಮೆರಿಕ ಅಧ್ಯಕ್ಷ – ಜೋ ಬೈಡನ್ ಜಾರಿ ಬಿದ್ದಿದ್ದೇಕೆ ?

ಅಮೆರಿಕ ಅಧ್ಯಕ್ಷ ಜೋ ಬೈಡನ್ ಉರುಳಿ ಬಿದ್ದಿದ್ದಾರೆ. ಅಮೆರಿಕದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವೇದಿಕೆಯ ಮೇಲೆ ಬೈಡನ್ ಎಡವಿ ಬಿದ್ದಿದ್ದಾರೆ. ಯುಎಸ್ ಅಧ್ಯಕ್ಷ ಜೋ ಬೈಡನ್ ಯುಎಸ್ ಏರ್ ಫೋರ್ಸ್‌ನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ವೇಳೆ ಜೋ ಬೈಡನ್ ಕಾಲು ಜಾರಿತ್ತು. ನಂತರ ಬ್ಯಾಲೆನ್ಸ್ ಸಿಗದೇ ಉರುಳಿ ಬಿದ್ದೇ ಬಿಟ್ಟಿದ್ದಾರೆ.

ಇದನ್ನೂ ಓದಿ: ಭೂಮಿಯಾಳದಲ್ಲಿ ರಂಧ್ರ ಕೊರೆಯುತ್ತಿರುವುದೇಕೆ ಚೀನಾ ? – ಆಳವಾದ ಬೋರ್‌ಹೋಲ್‌ಗೆ ಕಾರಣಗಳೇನು?

ಯುಎಸ್ ಏರ್ ಫೋರ್ಸ್ ಅಕಾಡೆಮಿಯಲ್ಲಿ ಭಾಷಣ ಮಾಡಿದ ನಂತರ ಯುಎಸ್ ಅಧ್ಯಕ್ಷ ಜೋ ಬೈಡನ್ ಅವರು ಕೆಡೆಟ್‌ಗಳೊಂದಿಗೆ ಹಸ್ತಲಾಘವ ಮಾಡಿದರು. ಇದಾದ ನಂತರ ತಮ್ಮ ಆಸನಕ್ಕೆ ತೆರಳುವ ವೇಳೆ ಎಡವಿ ಕೆಳಗೆ ಬಿದ್ದರು. ಕೂಡಲೇ ಏರ್‌ಫೋರ್ಸ್‌ ಅಧಿಕಾರಿಗಳು ಎದ್ದೇಳಲು ಸಹಕರಿಸಿದ್ದಾರೆ. ಎಡವಿ ಬಿದ್ದ 80 ವರ್ಷದ ಬೈಡನ್‌ ಬಳಿಕ ಡಿಪ್ಲೊಮಾ ಕೆಡೆಟ್‌ಗಳಿಗೆ ಪದವಿ ಪ್ರದಾನಮಾಡಿ, ವೇದಿಕೆಯಿಂದ ನಿರ್ಗಮಿಸಿದರು. ನಂತರ ಅಲ್ಲಿಂದ ಕ್ಷೇಮವಾಗಿ ನಡೆದುಕೊಂಡು ಶ್ವೇತ ಭವನಕ್ಕೆ ತೆರಳಿದರು. ಸದ್ಯ ಅಧ್ಯಕ್ಷರು ಗಾಯಗೊಂಡಿಲ್ಲ, ಫಿಟ್‌ ಆಗಿದ್ದಾರೆ ಎಂಬುದಾಗಿ ಶ್ವೇತಭವನದ ಸಂವಹನ ವಿಭಾಗದ ನಿರ್ದೇಶಕ ಬೆನ್ ಲಾಬೋಲ್ಟ್ ಟ್ವೀಟ್‌ ಮೂಲಕ ತಿಳಿಸಿದ್ದಾರೆ. ಬೈಡನ್ ಬಿದ್ದ ತಕ್ಷಣ, ಅವರು ಒಂದು ವಸ್ತುವನ್ನು ತೋರಿಸಿದರು. ಈ ವಸ್ತುವಿಗೆ ಕಾಲು ತಾಗಿ ಎಡವಿ ಕೆಳಗೆ ಬಿದ್ದಿದ್ದಾರೆ. ವೇದಿಕೆಯ ಮೇಲೆ ಸಣ್ಣ ಕಪ್ಪು ಮರಳಿನ ಚೀಲವನ್ನು ಹಾಕಲಾಗಿತ್ತು. ಜೋ ಬೈಡೆನ್ ಈ ಚೀಲದ ಮೇಲೆ ಮುಗ್ಗರಿಸಿ ಕುಸಿದು ಬಿದ್ದಿದ್ದಾರೆ ಎಂದು ಹೇಳಲಾಗುತ್ತದೆ.

2020 ರಲ್ಲಿ, ಬಿಡೆನ್ ತನ್ನ ಸಾಕು ನಾಯಿಯೊಂದಿಗೆ ಆಟವಾಡುವಾಗ ಬಿದ್ದಾಗ ಅವನ ಕಾಲು ಮುರಿದುಕೊಂಡಿದ್ದರು. ಅದಾದ ಬಳಿಕ ಏರ್ಫೋರ್ಸ್ ಒನ್ ವಿಮಾನ ಏರುವ ಸಂದರ್ಭದಲ್ಲಿ ಎಡವಿ ಬೀಳುವಂತಾದ ಘಟನೆ ನಡೆದಿತ್ತು. ಪೋಲೆಂಡ್ಗೆ ತೆರಳುವ ನಿಟ್ಟಿನಲ್ಲಿ ಬೈಡನ್ ವಿಮಾನವೇರುತ್ತಿದ್ದರು, ಅದರ ವಿಡಿಯೋ ವೈರಲ್ ಆಗಿತ್ತು.

suddiyaana