‘ಪದೇ ಪದೇ ಮೈ ಮುಟ್ಟುತ್ತಿದ್ದ.. ಲೈಂಗಿಕ ಬಯಕೆ ಈಡೇರಿಕೆಗೆ ಒತ್ತಾಯಿಸುತ್ತಿದ್ದ’ – ಕುಸ್ತಿ ಒಕ್ಕೂಟದ ಅಧ್ಯಕ್ಷನ ಮೇಲೆ ಆರೋಪಗಳ ಸುರಿಮಳೆ..!

‘ಪದೇ ಪದೇ ಮೈ ಮುಟ್ಟುತ್ತಿದ್ದ.. ಲೈಂಗಿಕ ಬಯಕೆ ಈಡೇರಿಕೆಗೆ ಒತ್ತಾಯಿಸುತ್ತಿದ್ದ’ – ಕುಸ್ತಿ ಒಕ್ಕೂಟದ ಅಧ್ಯಕ್ಷನ ಮೇಲೆ ಆರೋಪಗಳ ಸುರಿಮಳೆ..!

ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕುಸ್ತಿಪಟುಗಳು ಮಾಡಿರುವ ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ದೆಹಲಿ ಪೊಲಿಸರು ಎರಡು ಎಫ್ಐಆರ್ ಮತ್ತು 10 ದೂರುಗಳನ್ನು ದಾಖಲಿಸಿದ್ದಾರೆ. ಕುಸ್ತಿಪಟುಗಳ ದೂರುಗಳ ಅನ್ವಯ ದೆಹಲಿಯ ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದ್ದು, ಇದೀಗ ಎಫ್‌ಐಆರ್‌ನಲ್ಲಿ ದೂರುಗಳು ಏನೆಂಬುದು ಬಹಿರಂಗಗೊಂಡಿದೆ. ಎರಡು ಎಫ್‌ಐಆರ್‌ ಪ್ರಕಾರ, ಬ್ರಿಜ್‌ ಭೂಷಣ್‌ ಲೈಂಗಿಕ ಅನುಕೂಲಕ್ಕಾಗಿ ಬೇಡಿಕೆಯಿಟ್ಟಿದ್ದರು. ಅನುಚಿತವಾಗಿ‌ ದೇಹ ಸ್ಪರ್ಶಿಸುವುದು, ಹುಡುಗಿಯರ ಎದೆ ಮೇಲೆ ಕೈ ಹಾಕುವುದು, ಮೈ-ಕೈ ಮುಟ್ಟುವುದು, ಅವರನ್ನು ಹಿಂಬಾಲಿಸುವುದು ಸೇರಿದಂತೆ 10 ದೂರುಗಳನ್ನು ದಾಖಲಿಸಲಾಗಿದೆ.

ಇದನ್ನೂ ಓದಿ: ಬ್ರಿಜ್ ಭೂಷಣ್ ಶರಣ್ ಸಿಂಗ್ ಬಂಧನಕ್ಕೆ ತೀವ್ರಗೊಂಡ ಆಗ್ರಹ – ಬೆಳಗಾವಿ, ಮೈಸೂರಲ್ಲೂ ಪ್ರತಿಭಟನೆ

ಬ್ರಿಜ್ ಭೂಷಣ್ ಲೈಂಗಿಕ ಸಂಬಂಧ ಹೊಂದುವಂತೆ ಒತ್ತಡ ಹೇರುತ್ತಿದ್ದರು ಎಂದು ಆರೋಪಿಸಲಾಗಿದೆ. ಬ್ರಿಜ್ ಭೂಷಣ್ ಅನೇಕ ಬಾರಿ ಕಿರುಕುಳ ನೀಡಿದ್ದಾರೆ ಎಂದು ಆಟಗಾರರು ಆರೋಪಿಸಿದ್ದಾರೆ. ಕುಸ್ತಿಪಟುಗಳು ಏಪ್ರಿಲ್ 21 ರಂದು ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ಬ್ರಿಜ್ ಭೂಷಣ್ ವಿರುದ್ಧ ದೂರು ನೀಡಿದ್ದರು. ಕುಸ್ತಿಪಟುಗಳು ಸುಪ್ರೀಂ ಕೋರ್ಟ್‌ಗೆ ಮೊರೆ ಹೋದ ನಂತರ, ದೆಹಲಿ ಪೊಲೀಸರು ಏಪ್ರಿಲ್ 28 ರಂದು ಎರಡು ಪ್ರತ್ಯೇಕ ಎಫ್ಐಆರ್‌ಗನ್ನು ದಾಖಲಿಸಿದ್ದಾರೆ. ಈ ಎರಡೂ ಎಫ್ಐರ್‌ಗಳ ಪ್ರತಿಗಳಲ್ಲಿರುವ ಮಾಹಿತಿ ಸಿಕ್ಕಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354, 354 (ಎ), 354 (ಡಿ) ಮತ್ತು 34 ಅಡಿಯಲ್ಲಿ ಎರಡು ಎಫ್ಐಆರ್ ದಾಖಲಾಗಿದ್ದು, ಆರೋಪ ಸಾಬೀತಾದಲ್ಲಿ 3 ವರ್ಷ ಜೈಲು ಶಿಕ್ಷೆಗೆ ಗುರಿಯಾಬೇಕಾಗುತ್ತದೆ. ಮೊದಲ ಎಫ್ಐಆರ್‌ಗಳಲ್ಲಿ ಆರು ಒಲಿಂಪಿಯನ್‌ಗಳ ದೂರನ್ನು ಉಲ್ಲೇಖಿಸಲಾಗಿದೆ. ಎರಡನೇ ಎಫ್ಐಆರ್ ಅಪ್ರಾಪ್ತ ಕುಸ್ತಿಪಟುವಿನ ತಂದೆ ಮಾಡಿರುವ ಆರೋಪದ ಮೇಲೆ ದಾಖಲಾಗಿದೆ. ಅಪ್ರಾಪ್ತ ಬಾಲಕಿಯ ತಂದೆಯ ದೂರಿನ ಮೇರೆಗೆ ಎರಡನೇ ಎಫ್ಐಆರ್ ದಾಖಲಿಸಲಾಗಿದೆ. ಇದು ಪೋಕ್ಸೊ ಕಾಯಿದೆಯ ಸೆಕ್ಷನ್ 10 ರ ಅಡಿಯಲ್ಲಿ, ಇದರಲ್ಲಿ ಐದರಿಂದ ಏಳು ವರ್ಷಗಳವರೆಗೆ ಶಿಕ್ಷೆಯ ಅವಕಾಶವಿದೆ. ಎಫ್ಐಆರ್‌ನಲ್ಲಿ ಉಲ್ಲೇಖಿಸಲಾದ ಘಟನೆಗಳು 2012 ರಿಂದ 2022 ರವರೆಗೆ ದೇಶದ ವಿವಿಧ ಭಾಗಗಳಲ್ಲಿ ಮತ್ತು ವಿದೇಶಗಳಲ್ಲಿ ನಡೆದಿವೆ. ಅಪ್ರಾಪ್ತರ ತಂದೆಯ ಪರವಾಗಿ ಎರಡನೇ ಎಫ್ಐಆರ್ ದಾಖಲಿಸಲಾಗಿದೆ. ಆಟಗಾರ ಪದಕ ಗೆದ್ದಾಗ ಚಿತ್ರ ತೆಗೆಯುವ ನೆಪದಲ್ಲಿ ಆರೋಪಿಗಳು ಅವರನ್ನು ಬಿಗಿಯಾಗಿ ಹಿಡಿದಿದ್ದರು ಎಂದು ಇದರಲ್ಲಿ ಹೇಳಲಾಗಿದೆ.

ಡಬ್ಲ್ಯುಎಫ್ಐ ಮುಖ್ಯಸ್ಥರ ವಿರುದ್ಧ ದಾಖಲಾಗಿರುವ ಮತ್ತೊಂದು ದೂರಿನಲ್ಲಿ, ಕುಸ್ತಿಪಟುವಿನ ಟೀ ಶರ್ಟ್ ತೆಗೆದು, ಆಕೆಯ ಎದೆಯ ಮೇಲೆ ಕೈ ಇಟ್ಟ ಆರೋಪವಿದೆ. ಬಲವಂತವಾಗಿ ನನ್ನನ್ನು ಹತ್ತಿರಕ್ಕೆ ಎಳೆದುಕೊಂಡರು ಎಂದು ದೂರಲಾಗಿದೆ. ಎಳೆದು ತಬ್ಬಿಕೊಂಡು ಹಣದ ಆಮಿಷವೊಡ್ಡಿ ಲೈಂಗಿಕ ಬಯಕೆ ಈಡೇರಿಸಲು ಒತ್ತಾಯಿಸಿದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಉಸಿರಾಟದ ಮಾದರಿಯನ್ನು ಪರೀಕ್ಷಿಸುವುದಾಗಿ ಹೇಳಿ ಹೊಟ್ಟೆಯನ್ನು ಅನುಚಿತವಾಗಿ ಸ್ಪರ್ಶಿಸಿದರು ಎಂದು ಮತ್ತೊಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸಾಲಿನಲ್ಲಿ ನಿಂತಿದ್ದಾಗ ಅನುಚಿತವಾಗಿ ಸ್ಪರ್ಶಿಸಿದರು. ಅಂಗಾಂಗಳನ್ನು ಮುಟ್ಟಿದರು ಎಂದು ಇನ್ನೊಂದು ದೂರಿನಲ್ಲಿ ಆರೋಪಿಸಲಾಗಿದೆ.

suddiyaana