ಗ್ಯಾರಂಟಿಗಳನ್ನು ಜಾರಿಗೊಳಿಸಲು ಬೃಹತ್ ಸಮಾವೇಶಕ್ಕೆ ಸಿದ್ಧತೆ – ಹೊಸ ಸಂದೇಶ ಸಾರಲು ಕಾಂಗ್ರೆಸ್ ಚಿಂತನೆ

ಗ್ಯಾರಂಟಿಗಳನ್ನು ಜಾರಿಗೊಳಿಸಲು ಬೃಹತ್ ಸಮಾವೇಶಕ್ಕೆ ಸಿದ್ಧತೆ – ಹೊಸ ಸಂದೇಶ ಸಾರಲು ಕಾಂಗ್ರೆಸ್ ಚಿಂತನೆ

ಗ್ಯಾರಂಟಿಗಳಲ್ಲೇ ಸದ್ದು ಮಾಡಿರುವ ಕಾಂಗ್ರೆಸ್ ಇಡೀ ರಾಷ್ಟ್ರಕ್ಕೆ ಹೊಸ ಸಂದೇಶ ಸಾರಲು ಪ್ಲ್ಯಾನ್ ರೂಪಿಸಿದೆ. ಬಿಜೆಪಿ ದಂಡಯಾತ್ರೆ ನಡುವೆ ಅಸ್ತಿತ್ವ ಕಳೆದುಕೊಳ್ಳುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕ ಚುನಾವಣಾ ಫಲಿತಾಂಶ ಹೊಸ ಶಕ್ತಿ ನೀಡಿದೆ. ಇದೇ ಕಾರಣಕ್ಕೆ ಗ್ಯಾರಂಟಿಗಳನ್ನು ಜಾರಿಗೊಳಿಸಿ, ಫಲಾನುಭವಿಗಳಿಗೆ ಯೋಜನೆಯನ್ನು ತಲುಪಿಸುವುದಕ್ಕೆ ಅಧಿಕೃತ ಚಾಲನೆ ನೀಡಲು ಬೃಹತ್‌ ಸಮಾವೇಶ ನಡೆಸಲು ಕಾಂಗ್ರೆಸ್ ಯೋಜನೆ ರೂಪಿಸಿದೆ.

ಇದನ್ನೂ ಓದಿ: ಹೇಳಿದ್ದು ಸರ್ಕಾರಿ ಬಸ್ಸುಗಳಲ್ಲಿ, ಕೇಳ್ತಿರುವುದು ಖಾಸಗಿ ಬಸ್ಸುಗಳಲ್ಲಿ! – ಮಹಿಳೆಯರ ಉಚಿತ ಪ್ರಯಾಣದಲ್ಲೂ ಶುರುವಾಯ್ತು ರಾಜಕೀಯ..!

ಜೂನ್ 2ನೇ ವಾರದೊಳಗೆ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸಲು ಭರ್ಜರಿ ತಯಾರಿ ನಡೆದಿದೆ ಎನ್ನುವ ಮಾಹಿತಿ ಕಾಂಗ್ರೆಸ್‌ ಪಕ್ಷದಿಂದ ಸಿಗುತ್ತಿದೆ. ಸಮಾವೇಶಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ರಾಷ್ಟ್ರ ಮಟ್ಟದ ನಾಯಕರನ್ನ ಕರೆಸಲು ಚಿಂತನೆ ನಡೆಸಲಾಗಿದೆ. ಈ ಮೂಲಕ ಇಡೀ ದೇಶಕ್ಕೆ ಕಾಂಗ್ರೆಸ್ ಪಕ್ಷ ಜನಪರ ಹಾಗೂ ಬಡವರ ಪರ ಇದೆ ಅನ್ನೋ ಸಂದೇಶ ಸಾರಲು ಮುಂದಾಗಿದೆ.

 

suddiyaana