ಎಲ್ಲಾ ಮಾದರಿಯ ಕ್ರಿಕೆಟ್‌ಗೂ ನಿವೃತ್ತಿ ಘೋಷಿಸಿದ ಅಂಬಟಿ ರಾಯುಡು..!

ಎಲ್ಲಾ ಮಾದರಿಯ ಕ್ರಿಕೆಟ್‌ಗೂ ನಿವೃತ್ತಿ ಘೋಷಿಸಿದ ಅಂಬಟಿ ರಾಯುಡು..!

ಐಪಿಎಲ್-2023ರ ಚಾಂಪಿಯನ್ ಪಟ್ಟಕ್ಕೇರಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಅಂಬಟಿ ರಾಯುಡು ಐಪಿಎಲ್‌ಗೆ ವಿದಾಯ ಹೇಳಿದ್ದರು. ಈಗ ಫೈನಲ್ ಗೆದ್ದ ಒಂದು ದಿನದ ಬಳಿಕ ಮತ್ತೊಂದು ಮಹತ್ವದ ನಿರ್ಧಾರವನ್ನು ರಾಯುಡು ತಿಳಿಸಿದ್ದಾರೆ. ಅಂಬಟಿ ರಾಯುಡು, ಭಾರತೀಯ ಕ್ರಿಕೆಟ್‌ನ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿಯಾಗುತ್ತಿರುವುದಾಗಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಚೆನ್ನೈ ಗೆದ್ದ ಖುಷಿಯಲ್ಲಿ ಜಡೇಜಾರನ್ನ ತಬ್ಬಿ ಕಣ್ಣೀರಿಟ್ಟ ಧೋನಿ – ನಿವೃತ್ತಿಗೆ ಇದು ಸರಿಯಾದ ಸಮಯ ಎಂದಿದ್ದೇಕೆ ಮಾಹಿ?

ಸೋಮವಾರ ನಡೆದ ಐಪಿಎಲ್-2023 ರ ಫೈನಲ್ ಪಂದ್ಯದಲ್ಲಿ ಅಂಬಟಿ ರಾಯುಡು ಎಂಟು ಎಸೆತಗಳಲ್ಲಿ 19 ರನ್ ಗಳಿಸಿ ಚೆನ್ನೈ ತಂಡವನ್ನು ಗೆಲುವಿನ ಟ್ರ್ಯಾಕ್‌ಗೆ ತಂದಿದ್ದರು. ಐಪಿಎಲ್ ಇತಿಹಾಸದಲ್ಲಿ ಎರಡು ತಂಡಗಳ ಪರ ಆಡಿರುವ ರಾಯಡು ಆರು ಬಾರಿ ಐಪಿಎಲ್ ಗೆದ್ದಿರುವ ಆಟಗಾರ ಎನಿಸಿಕೊಂಡಿದ್ದಾರೆ. ಈ ಬಲಗೈ ಬ್ಯಾಟ್ಸ್ಮನ್ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಪರ ತಲಾ ಮೂರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಟೀಂ ಇಂಡಿಯಾ ಪರ 55 ಏಕದಿನ ಪಂದ್ಯಗಳನ್ನು ಆಡಿರುವ ರಾಯುಡು 47.05 ಸರಾಸರಿಯಲ್ಲಿ 1694 ರನ್ ಬಾರಿಸಿದ್ದಾರೆ. ಔಟಾಗದೆ 124 ರನ್ ಬಾರಿಸಿರುವುದು ಅವರ ಅತ್ಯುತ್ತಮ ಸ್ಕೋರ್ ಆಗಿದೆ. ಇನ್ನು ಏಕದಿನ ಕ್ರಿಕೆಟ್‌ನಲ್ಲಿ ಮೂರು ಶತಕ ಮತ್ತು 10 ಅರ್ಧಶತಕಗಳನ್ನು ಬಾರಿಸಿರುವ ರಾಯುಡು ಟೀಂ ಇಂಡಿಯಾ ಪರ ಆರು ಟಿ20 ಪಂದ್ಯಗಳನ್ನು ಆಡಿದ್ದಾರೆ. 2010-2017 ರವರೆಗೆ 114 ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದ ರಾಯಡು 126.16 ಸ್ಟ್ರೈಕ್ ರೇಟ್ ಹಾಗೂ 27.15 ರ ಸರಾಸರಿಯಲ್ಲಿ 14 ಅರ್ಧ ಶತಕಗಳೊಂದಿಗೆ 2,416 ರನ್ ಬಾರಿಸಿದ್ದರು. ಔಟಾಗದೆ 81* ಬಾರಿಸಿದ್ದು ಅವರ ಅತ್ಯಧಿಕ ರನ್ ಆಗಿತ್ತು. 2018 ರಲ್ಲಿ ಚೆನ್ನೈ ತಂಡ ಸೇರಿಕೊಂಡ ರಾಯುಡು ತಂಡದ ಪರ 90 ಪಂದ್ಯಗಳನ್ನಾಡಿದ್ದು, 30.18 ರ ಸರಾಸರಿಯಲ್ಲಿ 1,932 ರನ್ ಬಾರಿಸಿದ್ದಾರೆ.

suddiyaana