ಸಿದ್ದು ಭೇಟಿಗೆ ವರುಣಾ ಕ್ಷೇತ್ರದ ಜನರಿಗೆ ಮುಕ್ತ ಅವಕಾಶ – ಐಡಿ ಚೆಕ್ ಮಾಡಿ ಬಿಡಲು ಪೊಲೀಸರಿಗೆ ಸೂಚನೆ!
ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ಕ್ಷೇತ್ರದ ಆಯ್ಕೆ ಗೊಂದಲದಲ್ಲೇ ಇದ್ದ ಸಿದ್ದರಾಮಯ್ಯ ಕೊನೆಗೆ ತವರು ಕ್ಷೇತ್ರ ವರುಣಾದಿಂದಲೇ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಜೊತೆಗೆ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ತಮ್ಮನ್ನ ಶಾಸಕರನ್ನಾಗಿ ಆಯ್ಕೆ ಮಾಡಿ ಸಿಎಂ ಕುರ್ಚಿಗೇರಲು ಅವಕಾಶ ಕಲ್ಪಿಸಿದ ವರುಣಾ ಕ್ಷೇತ್ರದ ಜನ್ರಿಗೆ ಸಿದ್ದರಾಮಯ್ಯ ದೊಡ್ಡ ಕೊಡುಗೆಯನ್ನೇ ಕೊಡ್ತಿದ್ದಾರೆ.
ಇದನ್ನೂ ಓದಿ : APL, BPL ಎನ್ನುವ ಷರತ್ತುಗಳಿಲ್ಲ.. ಎಲ್ಲಾ ಮಹಿಳೆಯರಿಗೂ ಉಚಿತ ಪ್ರಯಾಣ – ಸಾರಿಗೆ ಸಚಿವರಿಂದ ಮಹತ್ವದ ಘೋಷಣೆ
ಸಿಎಂ ಸಿದ್ದರಾಮಯ್ಯರನ್ನ ಭೇಟಿ ಮಾಡಲು ಬರುವ ವರುಣಾ ಕ್ಷೇತ್ರದ ಮತದಾರರಿಗೆ ಸಿಎಂ ಸುಲಭ ಭೇಟಿಗೆ ಅವಕಾಶ ನೀಡಲಾಗಿದೆ. ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಬರುವ ವರುಣಾ ಕ್ಷೇತ್ರದ ಮತದಾರರಿಗೆ ತಮ್ಮ ಸರ್ಕಾರಿ ನಿವಾಸಕ್ಕೆ ಬರಲು ಮುಕ್ತ ಅವಕಾಶ ಕಲ್ಪಿಸಿದ್ದಾರೆ. ವರುಣಾದಿಂದ ಬಂದ ಮತದಾರರು ತಮ್ಮ ಅಡ್ರೆಸ್ ತೋರಿಸಿ ಒಳಗೆ ಹೋಗಲು ಅವಕಾಶ ನೀಡಲಾಗಿದೆ. ಆಧಾರ್, ಐಡಿ ಚೆಕ್ ಮಾಡಿ ವರುಣಾ ಕ್ಷೇತ್ರದ ಮತದಾರರು ಇದ್ರೆ ಅವರನ್ನು ಸಿಎಂ ಭೇಟಿಗೆ ಬಿಡಲು ಪೊಲೀಸರಿಗೆ ಸೂಚಿಸಲಾಗಿದೆ. ಸಿದ್ದರಾಮಯ್ಯ ವರುಣಾ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ ಸಿಎಂ ಆಗಿದ್ದಾರೆ. ಹೀಗಾಗಿ ಕೊನೆಯ ಅಧಿಕಾರದ ಸಂದರ್ಭದಲ್ಲಿ ತಮ್ಮ ಕ್ಷೇತ್ರದ ಮತದಾರರಿಗೆ ಭೇಟಿಗೆ ಮುಕ್ತ ಅವಕಾಶ ಕಲ್ಪಿಸಿದ್ದಾರೆ. ಇದರಿಂದ ಸಿದ್ದರಾಮಯ್ಯ ಅಭಿಮಾನಿಗಳು ಮತ್ತಷ್ಟು ಖುಷಿ ಪಟ್ಟಿ ಸಂಭ್ರಮಿಸಿದ್ದಾರೆ.
ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಸಿದ್ದರಾಮಯ್ಯ ವರುಣಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ ನಿಜ. ಆದರೆ ಈಗ ಬರೀ ಶಾಸಕರಾಗಿ ಉಳಿದಿಲ್ಲ. ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಅಂದರೆ ಇಡೀ ಕರ್ನಾಟಕದ ಆಡಳಿತ ಅವರ ಕೈಯಲ್ಲಿದೆ. ಹೀಗಿರುವಾಗ ತಮ್ಮ ಕ್ಷೇತ್ರದ ಜನರಿಗೆ ಮಾತ್ರ ಹೀಗೆ ಮುಕ್ತ ಅವಕಾಶ ಕಲ್ಪಿಸಿರೋದು ಹಲವರ ವಿರೋಧಕ್ಕೂ ಕಾರಣವಾಗಿದೆ. ಹಾಗಾದ್ರೆ ಸಿದ್ದರಾಮಯ್ಯ ಅವರ ಕ್ಷೇತ್ರದ ಜನರಿಗೆ ಮಾತ್ರ ಮುಖ್ಯಮಂತ್ರಿಯಾ ಅಥವಾ ಇಡೀ ಕರ್ನಾಟಕದ ಮುಖ್ಯಮಂತ್ರಿಯಾ ಎಂದು ಪ್ರಶ್ನಿಸುತ್ತಿದ್ದಾರೆ.