ವಿಮಾನದ ಟಿಕೆಟ್ ಗಿಂತಲೂ ದುಬಾರಿ ಉಬರ್! – ಏರ್‌ಪೋರ್ಟ್ ನಿಂದ ಎಲೆಕ್ಟ್ರಾನಿಕ್ ಸಿಟಿಗೆ ಎಷ್ಟು ಹಣ ಗೊತ್ತಾ?
ಬೆಂಗಳೂರು: ಬೆಂಗಳೂರು ಟ್ರಾಫಿಕ್ ಜಾಮ್ ಗೆ ಹೆಸರುವಾಸಿಯಾಗಿದೆ. ಬಸ್ ನಲ್ಲಿ ಹೋದರೆ ಸರಿಯಾದ ಸಮಯಕ್ಕೆ ತಲುಪಲು ಸಾಧ್ಯವಿಲ್ಲ ಎಂದು ಬಹಳಷ್ಟು ಜನ ಓಲಾ ಮತ್ತು ಉಬರ್‌ನಂತಹ ಕ್ಯಾಬ್ ಗಳನ್ನು ಅವಲಂಬಿಸಿದ್ದಾರೆ. ಇದನ್ನೇ ಕ್ಯಾಬ್ ಡ್ರೈವರ್ ಗಳು ಬಂಡವಾಳವನ್ನಾಗಿಸಿಕೊಂಡು ಹಗಲು ದರೋಡೆ ಮಾಡುತ್ತಿದ್ದಾರೆ. ಇತ್ತೀಚೆಗೆ ವಿಮಾನ ನಿಲ್ದಾಣದಿಂದ ಎಲೆಕ್ಟ್ರಾನಿಕ್ ಸಿಟಿಗೆ ಪ್ರಯಾಣಿಸಲು ಬಯಸಿದ ಪ್ರಯಾಣಿಕರು ಉಬರ್ ಕ್ಯಾಬ್‌ನ ಬೆಲೆಗಳನ್ನು ಗಮನಿಸಿ ಆಘಾತಕ್ಕೊಳಗಾಗಿದ್ದಾರೆ.
ಇದನ್ನೂ ಓದಿ: ಮೊಬೈಲ್ ಬಿದ್ದಿದ್ದಕ್ಕೆ ಡ್ಯಾಂ ನೀರನ್ನೇ ಖಾಲಿ ಮಾಡಿಸಿದ್ದ ಅಧಿಕಾರಿಗೆ 53,000 ರೂಪಾಯಿ ದಂಡ!
ವ್ಯಕ್ತಿಯೊಬ್ಬರು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಎಲೆಕ್ಟ್ರಾನಿಕ್ ಸಿಟಿಗೆ ಪ್ರಯಾಣಿಸಲು ಉಬರ್ ನಲ್ಲಿ ಕ್ಯಾಬ್ ಬುಕ್ ಮಾಡಲು ಮುಂದಾಗಿದ್ದಾರೆ. ಹೀಗಾಗಿ ಉಬರ್ ಆ್ಯಪ್ ಓಪನ್ ಮಾಡಿ ಕ್ಯಾಬ್ ಬುಕ್ ಮಾಡಲು ಪ್ರಯಾಣದ ದರ ಪರೀಕ್ಷಿಸಿದ್ದಾರೆ. ಇದನ್ನು ಪ್ರಯಾಣ ದರ ಕಂಡು ಒಂದು ಕ್ಷಣ ಶಾಕ್ ಆಗಿದ್ದಾರೆ. ಉಬರ್ ಕ್ಯಾಬ್ ಡ್ರೈವರ್ ವಿಧಿಸಿದ ಪ್ರಯಾಣ ದರ ನೂರು, ಇನ್ನೂರು ರೂಪಾಯಿ ಅಲ್ಲ.. ಬರೋಬ್ಬರಿ 4 ಸಾವಿರ ರೂಪಾಯಿ! ಉಬರ್ ಕ್ಯಾಬ್ ಪ್ರಯಾಣ ದರದ ಸ್ಟ್ರೀನ್ ಶಾಟ್ ಅನ್ನು ಪ್ರಯಾಣಿಕ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದ ಭಾರಿ ವೈರಲ್ ಆಗುತ್ತಿದೆ.
ಟ್ವಿಟರ್ ನಲ್ಲಿ ಪ್ರಯಾಣ ದರದ ಫೋಟೋವನ್ನು ಶೇರ್ ಮಾಡಿದ್ದು, ವಿಮಾನ ನಿಲ್ದಾಣದಿಂದ ಎಲೆಕ್ಟ್ರಾನಿಕ್ ಸಿಟಿಗೆ ಕ್ಯಾಬ್‌ಗಾಗಿ ಹುಡುಕಾಡಿದ್ದು, ಪ್ರಯಾಣ ದರ ನೋಡಿ ಆಘಾತವಾಯಿತು. ವಿಮಾನದ ಟಿಕೆಟ್ ಬೆಲೆ ಮತ್ತು ಉಬರ್ ಬೆಲೆ ಬಹುತೇಕ ಸಮಾನವಾಗಿದೆ. Uber ಪ್ರೀಮಿಯಂಗೆ 52 ಕಿಮೀ ದೂರಕ್ಕೆ ಕನಿಷ್ಠ ದರವು 2,584.59 ಮತ್ತು UberXL ಗೆ 4,051.15 ರೂ. ‘ಇ-ಸಿಟಿಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಉಬರ್ ದರದ ಕ್ಯಾಬ್ ದರವು ನಾನು ಫ್ಲೈಟ್ ಟಿಕೆಟ್‌ಗೆ ಪಾವತಿಸಿದ್ದಕ್ಕೆ ಬಹುತೇಕ ಸಮಾನವಾಗಿದೆ’ ಎಂದು ಬಳಕೆದಾರರು ಬರೆದಿದ್ದಾರೆ.
ಪ್ರಯಾಣಿಕರು ಪ್ರಯಾಣ ದರ ಕುರಿತು ಸರ್ಜ್ ಪ್ರೈಸಿಂಗ್ ಮಾಡುವ ಮೂಲಕ ನಿಯಮ ಉಲ್ಲಂಘನೆಗಾಗಿ ಅಗ್ರಿಗೇಟರ್ ಕಂಪನಿಯ ವಿರುದ್ಧ ನೋಟಿಸ್ ನೀಡುವಂತೆ ಆರ್‌ಟಿಒಗೆ ನಿರ್ದೇಶಿಸಿದ್ದಾರೆ. ರಸ್ತೆ ಸಾರಿಗೆ ಮತ್ತು ಸುರಕ್ಷತೆಯ ಆಯುಕ್ತ ಎಸ್ಎನ್ ಸಿದ್ದರಾಮಯ್ಯ ಪ್ರಾದೇಶಿಕ ಸಾರಿಗೆ ಕಚೇರಿಗೆ (ಆರ್‌ಟಿಒ) ಈ ಕುರಿತಾಗಿ ಸೂಚನೆ ನೀಡಿದ್ದಾರೆ.