ಬಸ್‌ ಚಲಾಯಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ – ಮುಂದೇನಾಯ್ತು ಗೊತ್ತಾ?

ಬಸ್‌ ಚಲಾಯಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ – ಮುಂದೇನಾಯ್ತು ಗೊತ್ತಾ?

ವಿಜಯಪುರ: ಬಸ್‌ ಚಲಾಯಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತವಾಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ನಗರದಲ್ಲಿ‌ ನಡೆದಿದೆ.

ಮುರಿಗೆಪ್ಪ ಅಥಣಿ ಮೃತ ಚಾಲಕ. ಮಂಗಳವಾರ ಸಂಜೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ ಕಲಬುರಗಿ ಜಿಲ್ಲೆಯ ಅಫ್ಜಲ ಪುರದಿಂದ ವಿಜಯಪುರಕ್ಕೆ ಹೊರಟಿತ್ತು. ಈ ವೇಳೆ ಬಸ್‌ ನಲ್ಲಿ ಹೆಡ್‌ ಲೈಟ್‌ ನಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಬಳಿಕ ಇದನ್ನು ಪರೀಕ್ಷಿಸಿದ್ದ, ಹೆಡ್‌ ಲೈಟ್‌ ಸರಿಯಾಗದ ಕಾರಣ ಪ್ರಯಾಣಿಕರನ್ನು ದಾರಿ ಮಧ್ಯೆ ಇಳಿಸಿ, ಸಿಂದಗಿ ಡಿಪೋಗೆ ಬಸ್​​ ಹೊರಟಿತ್ತು.

ಇದನ್ನೂ ಓದಿ:ಟಿಕ್‌ ಟಾಕ್‌ ನೋಡಿ ಮೊಟ್ಟೆ ಬೇಯಿಸಿದ ಮಹಿಳೆ – ನಡೆದೇ ಹೋಯ್ತು ದುರಂತ!

ಪ್ರಯಾಣಿಕರನ್ನು ಇಳಿಸಿ ಬಸ್‌ ಸಿಂದಗಿ ನಗರಕ್ಕೆ ಆಗಮಿಸುತ್ತಿದ್ದಂತೆ ಚಾಲಕ ಮುರಿಗೆಪ್ಪ ಅಥಣಿ ಅವರಿಗೆ ಹೃದಯಾಘಾತವಾಗಿ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಆಗ ಬಸ್​ ನಿಯಂತ್ರಣ ತಪ್ಪಿ ಪೆಟ್ರೋಲ್​ ಬಂಕ್​ಗೆ ನುಗ್ಗುತ್ತಿದ್ದಂತೆ ಅಕ್ಕ-ಪಕ್ಕದಲ್ಲಿದ್ದ ಜನ ಗಾಬರಿಯಿಂದ ಓಡಿದ್ದಾರೆ. ಇದನ್ನು ಕಂಡ ನಿರ್ವಾಹಕ ಶರಣು ಟಾಕಳಿಯವರು ಬಸ್​ನ ಬ್ರೇಕ್ ಹಿಡಿದು ನಿಲ್ಲಿಸಿದ್ದಾರೆ. ಕಂಡಕ್ಟರ್​​ ಶರಣು ಅವರ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿದೆ. ಅಲ್ಲದೇ ಬಸ್‌ನಲ್ಲಿ ಪ್ರಯಾಣಿಕರು ಇಲ್ಲದೆ ಇರುವುದರಿಂದ ಸಂಭವನೀಯ ಅಪಾಯ ತಪ್ಪಿದೆ.

ಘಟನೆ ವಿಷಯ ತಿಳಿದು ಅಫ್ಜಲಪುರ ಡಿಪೋ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕಾಗಮಿಸಿ ಅಗತ್ಯ ಕ್ರಮ ಕೈಗೊಂಡಿದ್ದಾರೆ. ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

suddiyaana