ಹರಿಹರ ವೀರ ಮಲ್ಲು ಚಿತ್ರದ ಸೆಟ್‌ನಲ್ಲಿ ಅಗ್ನಿ ನರ್ತನ – 6 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದ ಸಿನಿಮಾ ಸೆಟ್ ಬೆಂಕಿಗಾಹುತಿ

ಹರಿಹರ ವೀರ ಮಲ್ಲು ಚಿತ್ರದ ಸೆಟ್‌ನಲ್ಲಿ ಅಗ್ನಿ ನರ್ತನ – 6 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದ ಸಿನಿಮಾ ಸೆಟ್ ಬೆಂಕಿಗಾಹುತಿ

ತೆಲುಗು ನಟ ಪವನ್ ಕಲ್ಯಾಣ್ ನಟನೆಯ ಹರಿಹರ ವೀರ ಮಲ್ಲು ಸಿನಿಮಾ ತಂಡಕ್ಕೆ ಆಘಾತ ಎದುರಾಗಿದೆ. ಪವನ್ ಕಲ್ಯಾಣ್ ನಟನೆಯ ಐತಿಹಾಸಿಕ ಕತೆ ಆಧಾರಿತ ಹರಿಹರ ವೀರ ಮಲ್ಲು ಸಿನಿಮಾ ಚಿತ್ರೀಕರಣಕ್ಕಾಗಿ ಹಾಕಲಾಗಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಸೆಟ್ ಬೆಂಕಿಗೆ ಆಹುತಿಯಾಗಿದೆ.

ಇದನ್ನೂ ಓದಿ:  ಕ್ರೇಜಿಸ್ಟಾರ್ ಬರ್ತಡೇಗೆ ‘ಕೆಡಿ’ ಟೀಮ್​ನಿಂದ ಪೋಸ್ಟರ್ ಗಿಫ್ಟ್ – ‘ರವಿಮಾಮ’ನ ಲುಕ್ ಗೆ ಫ್ಯಾನ್ಸ್ ಫಿದಾ!

ಹರಿಹರ ವೀರ ಮಲ್ಲು ಸಿನಿಮಾದ ಸೆಟ್‌ನಲ್ಲಿ ಭಾರಿ ಅಗ್ನಿ ಅನಾಹುತ ಸಂಭವಿಸಿದ್ದು ಸೆಟ್ ಬಹುತೇಕ ಉರಿದು ಬೂದಿಯಾಗಿದೆ. ಅನಾಹುತದಲ್ಲಿ ಯಾರಿಗೂ ಏನೂ ಹಾನಿಯಾಗಿಲ್ಲ. ಆದರೆ, ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಲಾಗಿದ್ದ ಸೆಟ್ ಸಂಪೂರ್ಣ ಉರಿದು ಭಸ್ಮವಾಗಿದೆ. ತೆಲಂಗಾಣದ ದುಂಡಿಗಲ್‌ನ ಬೀರಂಪೇಟ್ ನಲ್ಲಿ ಹರಿಹರ ವೀರ ಮಲ್ಲು ಸಿನಿಮಾಕ್ಕಾಗಿ ಅದ್ಧೂರಿ ಸೆಟ್‌ಗಳನ್ನು ಹಾಕಲಾಗಿತ್ತು. ಆದರೆ,  ಭಾನುವಾರ ತಡರಾತ್ರಿ ಆಕಸ್ಮಿಕವಾಗಿ ತಗುಲಿದ ಬೆಂಕಿಯಿಂದಾಗಿ ಸೆಟ್ ಸಂಪೂರ್ಣ ನಾಶವಾಗಿದೆ. ಸೆಟ್ ಅನ್ನು ಸುಮಾರು 6 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿತ್ತು ಎನ್ನಲಾಗುತ್ತಿದೆ. ಹರಿಹರ ವೀರ ಮಲ್ಲು ಸಿನಿಮಾದ 75% ಚಿತ್ರೀಕರಣ ಮುಗಿದಿತ್ತು. ಆದರೆ ಇನ್ನೂ 25% ಚಿತ್ರೀಕರಣ ಬಾಕಿ ಇತ್ತು. ಈ ಸಿನಿಮಾದ ಚಿತ್ರೀಕರಣ ಮುಗಿಸಿ ಆಂಧ್ರ ಪ್ರದೇಶ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುವ ಯೋಜನೆಯಲ್ಲಿ ಪವನ್ ಕಲ್ಯಾಣ್ ಇದ್ದರು. ಆದರೆ ಈಗ ಸೆಟ್ ಬೆಂಕಿಗೆ ಆಹುತಿಯಾಗಿರುವ ಕಾರಣ ಮತ್ತೆ ಸೆಟ್ ನಿರ್ಮಿಸಿ ಚಿತ್ರೀಕರಣ ಮಾಡಬೇಕಿದೆ. ಚುನಾವಣೆಗೆ ತಯಾರಾಗುತ್ತಿರುವ ಪವನ್ ಕಲ್ಯಾಣ್ ಹೇಗೆ ಈ ಸಿನಿಮಾ ಮುಗಿಸುತ್ತಾರೆ ಅನ್ನೋ ಪ್ರಶ್ನೆಯೂ ಎದುರಾಗಿದೆ. ಹರಿ ಹರ ವೀರ ಮಲ್ಲು, ಪವನ್ ಕಲ್ಯಾಣ್ ಅವರ ಮೊದಲ ಐತಿಹಾಸಿಕ ಕತೆ ಆಧರಿತ ಸಿನಿಮಾ ಆಗಿದೆ. ಸಿನಿಮಾದಲ್ಲಿ ಪವನ್ ಕಲ್ಯಾಣ್ ಜೊತೆಗೆ ಬಾಲಿವುಡ್‌ನ ಬಾಬಿ ಡಿಯೋಲ್ ಸಹ ಇದ್ದಾರೆ. ನಾಯಕಿಯರಾಗಿ ನಿಧಿ ಅಗರ್ವಾಲ್ ಹಾಗೂ ನರ್ಗಿಸ್ ಫಕ್ರಿ ನಟಿಸುತ್ತಿದ್ದಾರೆ. ಮೊಘಲ್ ಸಾಮ್ರಾಜ್ಯದ ವಿರುದ್ಧ ಹೋರಾಡಿದ ವೀರ ಮಲ್ಲು ಜೀವನದ ಕುರಿತ ಸಿನಿಮಾ ಇದಾಗಿದೆ. ಸಿನಿಮಾವನ್ನು ಕ್ರಿಶ್ ನಿರ್ದೇಶನ ಮಾಡುತ್ತಿದ್ದಾರೆ.

suddiyaana