ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಮತ್ತೊಂದು ಚೀತಾ – ವಾಸಸ್ಥಾನದಲ್ಲಿ ಹೇಗಿರಬೇಕು ಗೊತ್ತಾ ವಾತಾವರಣ?

ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಮತ್ತೊಂದು ಚೀತಾ – ವಾಸಸ್ಥಾನದಲ್ಲಿ ಹೇಗಿರಬೇಕು ಗೊತ್ತಾ ವಾತಾವರಣ?

ಭಾರತದಲ್ಲಿ ಚೀತಾಗಳ ಸಂಖ್ಯೆ ಬೆರಳೆಣಿಕೆಯಷ್ಟಿದ್ದು, ಅವನತಿಯತ್ತ ಸಾಗುತ್ತಿವೆದೆ. ಹೀಗಾಗಿಯೇ ನಮೀಬಿಯಾದಿಂದ ಕರೆತಂದು ಚೀತಾಗಳಿಗೆ ಭಾರತದಲ್ಲಿ ಕುನೋ ರಾಷ್ಟ್ರೀಯ ಉದ್ಯಾನವನಲ್ಲಿ ವಾಸಸ್ಥಾನ ಕಲ್ಪಿಸಲಾಗಿದೆ. ಮಧ್ಯಪ್ರದೇಶದ ಅರಣ್ಯ ಭೂಪ್ರದೇಶದಲ್ಲಿ ವಿಶಾಲವಾಗಿ 748 ಚ.ಕಿ.ಮೀ ವ್ಯಾಪ್ತಿಯಲ್ಲಿ ಕುನೋ ಪಾಲ್ಪುರ್ ರಾಷ್ಟ್ರೀಯ ಉದ್ಯಾನವನವು ವ್ಯಾಪಿಸಿಕೊಂಡಿದೆ. ಮಾನವನ ಸಂಚಾರವಿಲ್ಲದ ಪ್ರದೇಶವಾಗಿದ್ದು, ಕೊರಿಯಾದ ಸಾಲ್ ಕಾಡುಗಳಿಗೆ ಹತ್ತಿರದಲ್ಲಿದೆ.

ಕುನೋ ರಾಷ್ಟ್ರೀಯ ಉದ್ಯಾನವನ (ಕೆಎನ್ ಪಿ) ನಲ್ಲಿ ಮತ್ತೊಂದು ಚೀತಾವನ್ನು ಬೇಟೆಗೆ ಅನುಕೂಲಕರವಾಗಿರುವ ದೊಡ್ಡ ಆವರಣಕ್ಕೆ ಬಿಡುಗಡೆ ಮಾಡಲಾಗಿದೆ. ಈ ಮೂಲಕ ಉದ್ಯಾನವನದ ದೊಡ್ಡ ಆವರಣದಲ್ಲಿರುವ ಚೀತಾಗಳ ಸಂಖ್ಯೆ 7 ಕ್ಕೆ ಏರಿಕೆಯಾಗಿದೆ. 3-4 ವರ್ಷ ವಯಸ್ಸಾಗಿರುವ ದಕ್ಷಿಣ ಆಫ್ರಿಕಾದ ಹೆಣ್ಣು ಚೀತಾ ನೀರ್ವಾ ಭಾನುವಾರ ಸಂಜೆ ಉದ್ಯಾನವನದ ಬೇಟೆಗೆ ಮುಕ್ತವಾಗಿರುವ ಆವರಣ ಪ್ರವೇಶಿಸಿದೆ ಎಂದು ರಾಷ್ಟ್ರೀಯ ಉದ್ಯಾನವನದ ವಿಭಾಗೀಯ ಅರಣ್ಯಾಧಿಕಾರಿ (ಡಿಎಫ್ಒ) ಪ್ರಕಾಶ್ ಕುಮಾರ್ ವರ್ಮಾ ತಿಳಿಸಿದ್ದಾರೆ.

ಇದನ್ನೂ ಓದಿ : ಅಮ್ಮನೊಂದಿಗೆ ಚಿರತೆ ಮರಿ ತುಂಟಾಟ – ಖುಷಿ ನೀಡುತ್ತದೆ ಅಪರೂಪದ ದೃಶ್ಯ

ಇಲ್ಲಿಯವರೆಗೆ, ಏಳು ಚಿರತೆಗಳನ್ನು ಮುಕ್ತ ವಾತಾವರಣಕ್ಕೆ ಬಿಡುಗಡೆ ಮಾಡಲಾಗಿದೆ, ಆದರೆ ಇನ್ನೂ 10 ಚೀತಾಗಳನ್ನು ದೊಡ್ಡ ಆವರಣಗಳಲ್ಲಿ ಇರಿಸಲಾಗಿದೆ. ಉಳಿದ ಚಿರತೆಗಳನ್ನು ಕಾಡಿಗೆ ಬಿಡುವ ಕುರಿತು ಕೇಂದ್ರ ರಚಿಸಿರುವ ಸ್ಟೀರಿಂಗ್ ಸಮಿತಿ ನಿರ್ಧಾರ ಕೈಗೊಳ್ಳಲಿದೆ. ಸಮಿತಿಯ ಸದಸ್ಯರು ಮಂಗಳವಾರ ಕೆಎನ್‌ಪಿಗೆ ಭೇಟಿ ನೀಡಲಿದ್ದಾರೆ ಎಂದು ಸ್ಥಳೀಯ ಅಧಿಕಾರಿ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದು 2022ರ  ಸೆ.17ರಂದು ನಮೀಬಿಯಾದಿಂದ ಕರೆತಂದ ಚೀತಾಗಳನ್ನು ಮಹಾರಾಷ್ಟ್ರದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಅರ್ಪಿಸಲಾಗಿತ್ತು. ಚೀತಾಗಳಿಗೆ ವಾಸಿಸಲು ಸೂಕ್ತವಾದ ಹವಾಮಾನ ಬೇಕು. ಎತ್ತರದ ಪ್ರದೇಶ, ಕರಾವಳಿ, ಈಶಾನ್ಯ ಪ್ರದೇಶಗಳನ್ನು ಹೊರತುಪಡಿಸಿ ಉಳಿದೆಡೆ ಚಿರತೆಗಳ ನೆಲೆಯಾಗಿವೆ. ಚೀತಾಗಳ ವಾಸಕ್ಕೆ ಯೋಗ್ಯವಾದ ಹವಾಮಾನ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿದೆ. ಇಲ್ಲಿ ಮನುಷ್ಯರ ಸಂಚಾರವಿಲ್ಲ. ಚೀತಾಗಳಿಗೆ ಭೇಟೆಯಾಡಿ ಆಹಾರ ಪಡೆದುಕೊಳ್ಳುವ ವಾತಾವರಣವಿದೆ. ಹೀಗಾಗಿ ವೈಲ್ಡ್​ಲೈಫ್ ಇನ್ಸ್​ಟಿಟ್ಯೂಟ್ ಆಫ್ ಇಂಡಿಯಾ ಮತ್ತು ವೈಲ್ಡ್​​ಲೈಫ್ ಟ್ರಸ್ಟ್​ ಆಫ್ ಇಂಡಿಯಾ (WTI) ಕುನೋ ರಾಷ್ಟ್ರೀಯ ಉದ್ಯಾನವನವನ್ನು ಆಯ್ಕೆ ಮಾಡಿದೆ.

suddiyaana