ಕೊನೆಗೂ ಬಗೆಹರಿದ ಸಂಪುಟ ರಚನೆ ಬಿಕ್ಕಟ್ಟು –  24 ಶಾಸರಿಗೆ ಒಲಿದ ಮಂತಿಗಿರಿ!

ಕೊನೆಗೂ ಬಗೆಹರಿದ ಸಂಪುಟ ರಚನೆ ಬಿಕ್ಕಟ್ಟು –  24 ಶಾಸರಿಗೆ ಒಲಿದ ಮಂತಿಗಿರಿ!

ಬೆಂಗಳೂರು: ರಾಜ್ಯದಲ್ಲಿ ಕೊನೆಗೂ ಸಂಪುಟ ರಚನೆ ಬಿಕ್ಕಟ್ಟು ಬಗೆಹರಿದಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಸತತ ಮೂರು ದಿನಗಳವರೆಗೆ ಕಾಂಗ್ರೆಸ್ ಹೈಕಮಾಂಡ್ ಜೊತೆಗೆ ಸಮಾಲೋಚನೆ ನಡೆಸಿ ಸಂಪುಟ ವಿಸ್ತರಣೆ ಕಗ್ಗಂಟನ್ನು ಬಗೆಹರಿಸಿದ್ದು 24 ಶಾಸಕರು ಸಂಪುಟಕ್ಕೆ ಶನಿವಾರ ಸೇರ್ಪಡೆಯಾಗಿದ್ದಾರೆ.

ನೂತನ ಸಚಿವರ ಪ್ರಮಾಣವಚನ ಸಮಾರಂಭ ಶನಿವಾರ ಬೆಳಿಗ್ಗೆ 11.45ಕ್ಕೆ ರಾಜಭವನದಲ್ಲಿ ನಡೆಯಲಿದೆ. ಪ್ರಮಾಣವಚನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ರಾಜಭವನಕ್ಕೆ ಶುಕ್ರವಾರ ಮಧ್ಯಾಹ್ನವೇ ಮುಖ್ಯಮಂತ್ರಿ ಸಚಿವಾಲಯ ಸಂದೇಶ ರವಾನಿಸಿತ್ತು. ನೂತನ ಸಚಿವರ ಪಟ್ಟಿಯನ್ನು ಶುಕ್ರವಾರ ರಾತ್ರಿ ರಾಜಭವನಕ್ಕೆ ಕಳುಹಿಸಲಾಯಿತು.

ಇದನ್ನೂ ಓದಿ: ರಾಹುಲ್‌ ಗಾಂಧಿಗೆ  ʼಸಾಮಾನ್ಯʼ ಪಾಸ್‌ ಪೋರ್ಟ್‌! – ರಾಜತಾಂತ್ರಿಕ ಪಾಸ್‌ಪೋರ್ಟ್‌ ಗೆ ಕೋರ್ಟ್‌ ನಿರಾಕರಿಸಿದ್ದೇಕೆ?  

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಶಿವಕುಮಾರ್‌ ಹಾಗೂ ಎಂಟು ಶಾಸಕರು ಸಚಿವರಾಗಿ ಕಳೆದ ಶನಿವಾರ ಪ್ರಮಾಣವಚನ ಸ್ವೀಕರಿಸಿದ್ದರು. ಸಚಿವ ಸಂಪುಟದಲ್ಲಿ ಒಟ್ಟು 34 ಮಂದಿಯ ಸೇರ್ಪಡೆಗೆ ಅವಕಾಶ ಇದೆ. 24 ಮಂದಿಯ ಸೇರ್ಪಡೆಯಿಂದ ಸಂಪುಟ ಭರ್ತಿಯಾದಂತೆ ಆಗುತ್ತದೆ.

ಜಾತಿ, ಪ್ರದೇಶ, ಹಿರಿತನ ಒಳಗೊಂಡು ನಾನಾ ಮಾನದಂಡಗಳಡಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಪ್ರತ್ಯೇಕ ಪಟ್ಟಿ ಹಿಡಿದುಕೊಂಡು ಬುಧವಾರ ಸಂಜೆ ದೆಹಲಿಗೆ ಹಾರಿದ್ದರು. ಇನ್ನು ದೆಹಲಿಗೆ ಬಂದಿದ್ದ ನಾಯಕರೊಂದಿಗೆ ಕೆ.ಸಿ.ವೇಣುಗೋಪಾಲ್‌ ತಡರಾತ್ರಿ ಒಂದು ಸುತ್ತಿನ ಸಭೆ ನಡೆಸಿದ್ದರು. ಗುರುವಾರ ಮತ್ತೆ ವೇಣುಗೋಪಾಲ್‌ ನಿವಾಸದಲ್ಲಿ 2ನೇ ಸುತ್ತಿನ ಸಭೆ ನಡೆದಿತು.

ಈ ಬಳಿಕ ಮೇ. 27 ರಂದು ಬೆಳಿಗ್ಗೆ 11 ಗಂಟೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ವೇಣುಗೋಪಾಲ್‌, ರಣದೀಪ್‌ ಸಿಂಗ್‌ ಸುರ್ಜೇವಾಲ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ನಡುವಿನ ಚರ್ಚೆ ಬಳಿಕ 24 ಸಚಿವರ ಪಟ್ಟಿಯನ್ನು ಅಂತಿಮಗೊಳಿಸಲಾಯಿತು. ಇನ್ನು ಸಚಿವರ ಯಾದಿ ಕಸರತ್ತು ಪೂರ್ಣಗೊಂಡ ಬಳಿಕ ರಾಜ್ಯಪಾಲರ ಲಭ್ಯತೆಯ ಬಗ್ಗೆ ಸರಕಾರ ಮಾಹಿತಿ ಕೇಳಿ ಪಡೆದುಕೊಂಡಿದೆ. ಭಾನುವಾರ ನೂತನ ಪಾರ್ಲಿಮೆಂಟ್‌ ಕಟ್ಟಡ ಉದ್ಘಾಟನಾ ಸಮಾರಂಭದ ಹಿನ್ನೆಲೆಯಲ್ಲಿ ಶನಿವಾರ ನೂತನ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಲು ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಒಪ್ಪಿಗೆ ಸೂಚಿಸಿದ್ದಾರೆ.‌

ನೂತನ ಸಚಿವರ ಪಟ್ಟಿ ಹೀಗಿದೆ..

  • ಎಚ್.ಕೆ.ಪಾಟೀಲ
  • ಕೃಷ್ಣ ಬೈರೇಗೌಡ
  • ಎನ್.ಚಲುವರಾಯಸ್ವಾಮಿ
  • ಕೆ.ವೆಂಕಟೇಶ್
  • ಡಾ.ಎಚ್.ಸಿ.ಮಹದೇವಪ್ಪ
  • ಈಶ್ವರ ಖಂಡ್ರೆ
  • ಕೆ.ಎನ್.ರಾಜಣ್ಣ
  • ದಿನೇಶ್ ಗುಂಡೂರಾವ್
  • ಶರಣಬಸಪ್ಪ ದರ್ಶನಾಪುರ
  • ಶಿವಾನಂದ ಪಾಟೀಲ
  • ಆರ್.ಬಿ.ತಿಮ್ಮಾಪುರ
  • ಎಸ್.ಎಸ್.ಮಲ್ಲಿಕಾರ್ಜುನ
  • ಶಿವರಾಜ ತಂಗಡಗಿ
  • ಶರಣ ಪ್ರಕಾಶ ಪಾಟೀಲ
  • ಮಂಕಾಳ ಸುಬ್ಬ ವೈದ್ಯ
  • ಲಕ್ಷ್ಮಿ ಹೆಬ್ಬಾಳಕರ
  • ರಹೀಂ ಖಾನ್
  • ಡಿ.ಸುಧಾಕರ್
  • ಸಂತೋಷ್ ಎಸ್‌.ಲಾಡ್
  • ಎನ್.ಎಸ್.ಬೋಸರಾಜು
  • ಬೈರತಿ ಸುರೇಶ್‌
  • ಮಧು ಬಂಗಾರಪ್ಪ
  • ಡಾ.ಎಂ.ಸಿ.ಸುಧಾಕರ್
  • ಬಿ.ನಾಗೇಂದ್ರ

suddiyaana