ಜೂನ್‌ 1 ರಿಂದ ಕರಾವಳಿಯಲ್ಲಿ ಮೀನುಗಾರಿಕೆ ಬಂದ್‌! – ರೂಲ್ಸ್‌ ಬ್ರೇಕ್‌ ಮಾಡಿದ್ರೆ ಕಠಿಣ ಕ್ರಮ..

ಜೂನ್‌ 1 ರಿಂದ ಕರಾವಳಿಯಲ್ಲಿ ಮೀನುಗಾರಿಕೆ ಬಂದ್‌! – ರೂಲ್ಸ್‌ ಬ್ರೇಕ್‌ ಮಾಡಿದ್ರೆ ಕಠಿಣ ಕ್ರಮ..

ಜೂನ್‌ 1 ರಿಂದ ಎರಡು ತಿಂಗಳ ಕಾಲ ಕರಾವಳಿಯ ಕಡಲ ತೀರದಲ್ಲಿ ಮೀನುಗಾರಿಕಾ ಚಟುವಟಿಕೆಗಳನ್ನು ನಿಷೇಧಿಸಲು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಮೀನುಗಳ ಸಂತಾನೋತ್ಪತ್ತಿ ನಡೆಯುವ ಹಿನ್ನೆಲೆ ಜೂನ್‌ 1 ರಿಂದ ಜುಲೈ 31ರ ವರೆಗೆ ಮೀನುಗಾರಿಕೆಗೆ ನಿಷೇಧ ಹೇರಲಾಗುತ್ತಿದೆ. ಈ ಎರಡು ತಿಂಗಳ ಕಾಲ ಯಾವುದೇ ಮೀನುಗಾರಿಕಾ ಚಟುವಟಿಕೆ ನಡೆಸದಂತೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಆಯಾಯ ಜಿಲ್ಲಾಡಳಿತಗಳು ನಿಷೇಧ ಹೇರಿವೆ.

ಇದನ್ನೂ ಓದಿ: ದಾಖಲೆ ಮಟ್ಟದಲ್ಲಿ ಕರಗಿತು ಮಂಜುಗಡ್ಡೆ – ಮುಳುಗಡೆಯಾಗುತ್ತಾ  ಕರಾವಳಿ ಪ್ರದೇಶಗಳು?

ಇನ್ನು ಎರಡು ತಿಂಗಳ ಕಾಲ ಆಳ ಸಮುದ್ರ ಮೀನುಗಾರಿಕೆಗೆ ಹಾಕಲಾದ ನಿರ್ಬಂಧವನ್ನು ಉಲ್ಲಂಘಿಸಿದರೆ, ಕರ್ನಾಟಕ ಸಮುದ್ರ ಮೀನುಗಾರಿಕಾ ನಿಯಂತ್ರಣ ಕಾಯ್ದೆ 1986ರ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ. ಅದರಂತೆ ಒಂದು ವರ್ಷದ ಡೀಸೆಲ್‌ ಸಬ್ಸಿಡಿ ಕಡಿತಗೊಳಿಸುವ ಅವಕಾಶ ಸರಕಾರಕ್ಕೆ ಇರುತ್ತದೆ.

ಈ ಆದೇಶದ ಹಿನ್ನೆಲೆ ಆಳಸಮುದ್ರ ಮೀನುಗಾರಿಕೆಗಾಗಿ ತೆರಳಿದ್ದ ಬೋಟ್‌ ಗಳು ಈಗಾಗಲೇ ದಡ ಸೇರಲು ಆರಂಭಿಸಿವೆ. ಬಂದರು ಪ್ರದೇಶಗಳಾದ ಮಂಗಳೂರಿನ ಹಳೆ ಬಂದರು ಹಾಗೂ ಉಡುಪಿಯ ಮಲ್ಪೆಯಲ್ಲಿ ಬೋಟ್‌ ಗಳು ಲಂಗರು ಹಾಕುತ್ತಿವೆ.

ಮೀನುಗಾರಿಕೆ ನಿಷೇಧ ಸಮಯದಲ್ಲಿ ನಾಡ ದೋಣಿ ಮೀನುಗಾರಿಕಾ ಚಟುವಟಿಕೆ ಗರಿಗೆದರುತ್ತವೆ. ಹೆಚ್ಚಿನ ಪ್ರಮಾಣದ ಬಲೆ ಬಳಸದೇ ಸ್ಥಳೀಯವಾಗಿ ಮೀನುಗಾರಿಕೆ ನಡೆಸುತ್ತಾರೆ. ಆದರೆ, ತೀವ್ರ ಗಾಳಿ, ಮಳೆ ಸಮಯದಲ್ಲಿ ಜಿಲ್ಲಾಡಳಿತದ ಎಚ್ಚರಿಕೆ ಗಮನಿಸಿಕೊಂಡು ಚಟುವಟಿಕೆ ನಡೆಸಬೇಕಾಗುತ್ತದೆ.  ಹಾಗಾಗಿ ಜನರಿಗೆ ಮಳೆಗಾಲದಲ್ಲೂ ಮೀನು ಸಾಮಾನ್ಯವಾಗಿ ಸಿಗುತ್ತವೆ. ಇನ್ನು ಶೀತಲೀಕರಣದಲ್ಲಿ ಸಂಗ್ರಹಿಸಿ ಮೀನುಗಳನ್ನು ಈ ಸಮಯದಲ್ಲಿ ಮಾರಾಟ ಮಾಡಲಾಗುತ್ತದೆ.

suddiyaana