ಕರೆಂಟ್ ಬಿಲ್ ಕೇಳಿದ್ದಕ್ಕೆ ಲೈನ್ ಮೆನ್ ಮೇಲೆ ಹಲ್ಲೆ – ದರ್ಪ ತೋರಿದವನು ಅರೆಸ್ಟ್!

ಕರೆಂಟ್ ಬಿಲ್ ಕೇಳಿದ್ದಕ್ಕೆ ಲೈನ್ ಮೆನ್ ಮೇಲೆ ಹಲ್ಲೆ – ದರ್ಪ ತೋರಿದವನು ಅರೆಸ್ಟ್!

ಕಾಂಗ್ರೆಸ್ ಸರ್ಕಾರ ಅಧಿಕಾರ ಬರುವ ಮುನ್ನ 5 ಗ್ಯಾರಂಟಿಗಳನ್ನ ಘೋಷಣೆ ಮಾಡಿತ್ತು. ಅದರಲ್ಲಿ 200 ಯುನಿಟ್ ವಿದ್ಯುತ್ ಫ್ರೀ ಆಫರ್ ಕೂಡ ಒಂದು. ಇದೀಗ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಿದ್ದು, ಜನರೆಲ್ಲಾ ಕರೆಂಟ್ ಬಿಲ್ ಕಟ್ಟಲು ನಕಾರ ಮಾಡುತ್ತಿದ್ದಾರೆ. ಅದರಲ್ಲೂ ಕೊಪ್ಪಳ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಲೈನ್ ಮೆನ್ ಮೇಲೆಯೇ ಹಲ್ಲೆ ಮಾಡಿ ಅರೆಸ್ಟ್ ಆಗಿದ್ದಾನೆ.

ಕರೆಂಟ್ ಬಿಲ್ (Electricity Bill) ಕೇಳಲು ಬಂದಿದ್ದ ಲೈನ್‍ಮೆನ್ ಮೇಲೆ ಹಲ್ಲೆ ಮಾಡಿದ್ದ ವ್ಯಕ್ತಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಬಿಲ್ ಕೇಳಲು ಬಂದ ಲೈನ್ ಮೆನ್ ಮಂಜುನಾಥ್ (Lineman Manjunath) ಮೇಲೆ ಚಂದ್ರಶೇಖರಯ್ಯ ಹಲ್ಲೆ ಮಾಡಿದ್ದನು. ಇದೀಗ ಆರೋಪಿ ಚಂದ್ರಶೇಖರಯ್ಯನನ್ನು ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಪೊಲೀಸರು (Munirabad Police) ಬಂಧಿಸಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್‌ ನ ಐದು ಗ್ಯಾರಂಟಿ ಪಡೆಯಲು ಜನರ ಸರ್ಕಸ್‌ – ಬೆಂಗಳೂರಿನಲ್ಲಿ ಬಿಪಿಎಲ್ ಕಾರ್ಡ್‍ಗೆ ಫುಲ್‌ ಡಿಮ್ಯಾಂಡ್‌!

ಚಂದ್ರಶೇಖರಯ್ಯ ಕಳೆದ ಆರು ತಿಂಗಳಿಂದ ಅಂದಾಜು 9,990 ಬಿಲ್ ಬಾಕಿ ಉಳಿಸಿಕೊಂಡಿದ್ದನು. ಹೀಗಾಗಿ ಜೆಸ್ಕಾಂ ಸಿಬ್ಬಂದಿ ಲೈನ್ ಕಟ್ ಮಾಡಿದ್ದರು. ಆದರೂ ಮತ್ತೆ ಅನಧಿಕೃತವಾಗಿ ಚಂದ್ರಶೇಖರಯ್ಯ ವಿದ್ಯುತ್ ಸಂರ್ಪಕ ಪಡೆದಿದ್ದನು. ಈ ಹಿನ್ನೆಲೆಯಲ್ಲಿ ಅಕ್ರಮ ವಿದ್ಯುತ್ ಸಂರ್ಪಕ ಪಡೆದಿದ್ದನ್ನೇ ಪ್ರಶ್ನಿಸೋಕೆ ಬಂದಾಗ ಹಲ್ಲೆ ಮಾಡಿದ್ದಾನೆ. ಹೀಗಾಗೆ ಚಂದ್ರಶೇಖರಯ್ಯ ಅವರನ್ನ ಅರೆಸ್ಟ್ ಮಾಡಿದ್ದೆವೆ. ಮುಂದೆ ಕಾನೂನು ಕ್ರಮ ಕೈಗೊಳ್ತೆವೆ ಎಂದು ಎಸ್ಪಿ ಯಶೋಧಾ ವಂಟಗೋಡಿ ಹೇಳಿದ್ದಾರೆ. ಇನ್ನು ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದರೆ 200 ಯುನಿಟ್ ವಿದ್ಯುತ್​ ಉಚಿತ ಎಂದು ಕಾಂಗ್ರೆಸ್​ ಹೇಳಿತ್ತು. ಇದೀಗ ಕಾಂಗ್ರೆಸ್​ ಅಧಿಕಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಕೆಲ ಜನರು ವಿದ್ಯುತ್​ ಬಿಲ್​ ಕಟ್ಟುವುದಿಲ್ಲ ಎಂದು ಲೈನ್​ಮ್ಯಾನ್​ಗಳ ಜತೆ ಜಗಳಕ್ಕೆ ಇಳಿದಿದ್ದಾರೆ. ಕೊಪ್ಪಳದ ಕುಕನಪಲ್ಲಿ ಗ್ರಾಮದಲ್ಲಿ ವಿದ್ಯುತ್​ ಬಿಲ್​ ವಸೂಲಿಗೆ ಬಂದ ಲೈನ್​ಮ್ಯಾನ್​ಗೆ ಚಂದ್ರಶೇಖರಯ್ಯ ಅವಾಚ್ಯ ಶಬ್ದದಿಂದ ನಿಂದಿಸಿದ್ದಲ್ಲದೆ, ಚಪ್ಪಲಿಯಿಂದ ಹೊಡೆದು ಹಲ್ಲೆ ಮಾಡಿದ್ದ. ಲೈನ್​ಮ್ಯಾನ್ ಮೇಲೆ ಹಲ್ಲೆ ಮಾಡಿದ್ದ ವ್ಯಕ್ತಿಯನ್ನು ಕೊಪ್ಪಳ ಜಿಲ್ಲೆ ಮುನಿರಾಬಾದ್ ಪೊಲೀಸರು ಬಂಧಿಸಿದ್ದಾರೆ.

suddiyaana