ಡಿಕೆಶಿಗೆ ಸಿಕ್ಕೇ ಬಿಡ್ತು ಅದೃಷ್ಟದ ಮನೆ! – ಯಾರಿಗೆ ಯಾವ ಬಂಗಲೆ?
ಕಾವೇರಿ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಶಿಫ್ಟ್ ..

ಡಿಕೆಶಿಗೆ ಸಿಕ್ಕೇ ಬಿಡ್ತು ಅದೃಷ್ಟದ ಮನೆ! – ಯಾರಿಗೆ ಯಾವ ಬಂಗಲೆ?ಕಾವೇರಿ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಶಿಫ್ಟ್ ..

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ಅದೃಷ್ಟದ ನಿವಾಸ ಕುಮಾರಕೃಪಾ ತನಗೆ ಬೇಕೆಂದು ಡಿ.ಕೆ ಶಿವಕುಮಾರ್‌ ಬೇಡಿಕೆಯನ್ನ ಇಟ್ಟಿದ್ದರು. ಇದೀಗ ಡಿಕೆಶಿ ಅವರ ಬೇಡಿಕೆಯಂತೆ ಸಿದ್ದರಾಮಯ್ಯ ಅವರಿದ್ದ ಅದೃಷ್ಟದ ಮನೆಯನ್ನು ನೀಡಲಾಗಿದೆ.

ಇದನ್ನೂ ಓದಿ:  ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕಸರತ್ತು – ಕಾಂಗ್ರೆಸ್‌ ಹೈಕಮಾಂಡ್‌ ಅಂಗಳದಲ್ಲಿ ಹೈವೋಲ್ಟೇಜ್‌ ಮೀಟಿಂಗ್‌

ಇಷ್ಟು ದಿನ ಸಿಎಂ ಸಿದ್ದರಾಮಯ್ಯ ಅವರು ವಾಸವಿದ್ದ ಸರ್ಕಾರಿ ಬಂಗಲೆ ಕುಮಾರಕೃಪಾ ಅದೃಷ್ಟದ ಮನೆ ಎಂದು ಹೇಳಲಾಗಿತ್ತು. ಈ ಹಿಂದೆ ಸಿಎಂ ಆಗಿದ್ದಾಗಲೂ ಸಿದ್ದರಾಮಯ್ಯ ಅವರು ಇದೇ ನಿವಾಸದಲ್ಲಿದ್ದರು. 5 ವರ್ಷ ಆಡಳಿತ ಯಶಸ್ವಿಯಾಗಿ ಪೂರೈಸಿದ್ದರು. ಇದೀಗ ಅದೃಷ್ಟದ ಮನೆಯನ್ನ ಡಿ.ಕೆ ಶಿವಕುಮಾರ್ ಅವರಿಗೆ ನಿಗದಿ ಮಾಡಲಾಗಿದೆ.

ಸಿದ್ದರಾಮಯ್ಯ ಅವರು ಕಾವೇರಿ ನಿವಾಸಕ್ಕೆ ಶಿಫ್ಟ್ ಆದ ನಂತರ ಡಿಕೆ ಶಿವಕುಮಾರ್ ಇಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎನ್ನಲಾಗಿದೆ. ಸಿಎಂ ಬೊಮ್ಮಾಯಿ ಅವರಿದ್ದ ಮನೆಯನ್ನು ಎಂ.ಬಿ ಪಾಟೀಲ್‌ಗೆ ನಿಗದಿ ಮಾಡಲಾಗಿದ್ದು, ಸ್ಪೀಕರ್ ಆಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿದ್ದ ವಸತಿ ಗೃಹವನ್ನ ನೂತನ ಸಚಿವ ಪ್ರಿಯಾಂಕ್ ಖರ್ಗೆಗೆ ನಿಗದಿ ಮಾಡಲಾಗಿದೆ.

ಯಾರಿಗೆಯಾವ ಮನೆ?

  • ಡಿ.ಕೆ ಶಿವಕುಮಾರ್ – ನಂ.1 ಕುಮಾರ ಕೃಪಾ ಈಸ್ಟ್, ಗಾಂಧಿಭವನ ರಸ್ತೆ
  • ಜಿ. ಪರಮೇಶ್ವರ್ – ನಂ.94/ಎ, 9ನೇ ಕ್ರಾಸ್, ಸದಾಶಿವನಗರ, ಆರ್‌ಎಂವಿ ಬಡಾವಣೆ
  • ಎಂ.ಬಿ ಪಾಟೀಲ್ – ನಂ.1, ರೇಸ್ ವ್ಯೂ ಕಾಟೇಜ್, ರೇಸ್ ಕೋರ್ಸ್ ರಸ್ತೆ
  • ಕೆ.ಜೆ ಜಾರ್ಜ್ – ನಂ.2, ರೇಸ್ ವ್ಯೂ ಕಾಟೇಜ್, ರೇಸ್ ಕೋರ್ಸ್ ರಸ್ತೆ
  • ಪ್ರಿಯಾಂಕ್ ಖರ್ಗೆ – ನಂ.4, ರೇಸ್ ವ್ಯೂ ಕಾಟೇಜ್, ರೇಸ್ ಕೋರ್ಸ್ ರಸ್ತೆ

suddiyaana