`ಸಿದ್ದು ಪೂರ್ಣಾವಧಿ ಸಿಎಂ’- ಕಾಂಗ್ರೆಸ್‌ ಒಳಗೆ ಕಿಚ್ಚು ಹಚ್ಚಿ ಎಂ.ಬಿ ಪಾಟೀಲ್‌ ಯುಟರ್ನ್ ಹೊಡೆದಿದ್ಯಾಕೆ?

`ಸಿದ್ದು ಪೂರ್ಣಾವಧಿ ಸಿಎಂ’- ಕಾಂಗ್ರೆಸ್‌ ಒಳಗೆ ಕಿಚ್ಚು ಹಚ್ಚಿ ಎಂ.ಬಿ ಪಾಟೀಲ್‌ ಯುಟರ್ನ್ ಹೊಡೆದಿದ್ಯಾಕೆ?

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಟೇಕಾಫ್‌ ಆಗಿ ನಾಲ್ಕು ದಿನ ಕಳೆಯುವಷ್ಟರಲ್ಲೇ ಸಿದ್ದರಾಮಯ್ಯ ಆಪ್ತ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್‌ ಹೊಸ ಬಾಂಬ್‌ ಸಿಡಿಸುವ ಮೂಲಕ ಡಿ.ಕೆ ಶಿವಕುಮಾರ್‌ ಬಣಕ್ಕೆ ಟಾಂಗ್‌ ಕೊಟ್ಟಿದ್ದಾರೆ.

ರಾಜ್ಯದಲ್ಲಿ ಸಿದ್ದರಾಮಯ್ಯ ಅವರೇ 5 ವರ್ಷ  ಸಿಎಂ ಆಗಿರಲಿದ್ದಾರೆ. ಅಧಿಕಾರ ಹಂಚಿಕೆ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ. ಲೋಕಸಭೆ ಚುನಾವಣೆ ಬಳಿಕ ಯಾವುದೇ ಬದಲಾವಣೆ ಇಲ್ಲ. ಸಿಎಂ ಬದಲಾವಣೆ ಮಾಡುವ ಬಗ್ಗೆ ಎಐಸಿಸಿ ಮಟ್ಟದಲ್ಲಿ ಚರ್ಚೆಯೂ ನಡೆದಿಲ್ಲ. ಸಿದ್ದರಾಮಯ್ಯ ಅವರೇ ಮುಂದಿನ 5 ವರ್ಷ ಸಿಎಂ ಆಗಿರಲಿದ್ದಾರೆ. ಈ ಬಗ್ಗೆ ಎಐಸಿಸಿ ಕಾರ್ಯದರ್ಶಿ ವೇಣುಗೋಪಾಲ್‌ ಸ್ಪಷ್ಟಪಡಿಸಿದ್ದಾರೆ ಎಂದು ಎಂಬಿ ಪಾಟೀಲ್‌ ಹೇಳಿಕೆ ನೀಡುವ ಮೂಲಕ ಹೊಸ ಚರ್ಚೆ ಹುಟ್ಟುಹಾಕಿದ್ದರು.

ಇದನ್ನೂ ಓದಿ: ಸೋಲಿನ ಆಘಾತ.. ಬಿಜೆಪಿಯಲ್ಲಿ ವಿಪಕ್ಷನಾಯಕನ ಆಯ್ಕೆ ಕಗ್ಗಂಟು – ರೇಸ್ ನಲ್ಲಿ ಯಾರ್ಯಾರು..?

ಇದೀಗ ಎಂಬಿ ಪಾಟೀಲ್ ಯು ಟರ್ನ್ ತೆಗೆದುಕೊಂಡಿದ್ದು ಪಕ್ಷದ ವರಿಷ್ಟರು ಹೇಳಿದ್ದನ್ನು ಮಾತ್ರ ಹೇಳಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ. “ಪಕ್ಷದ ವರಿಷ್ಠರು ಹೇಳಿದ್ದನ್ನಷ್ಟೇ ನಾನು ಹೇಳಿದ್ದೇನೆ. ನಾನು ಪದೇ ಪದೇ ಮಾತನಾಡಲ್ಲ. ನೆನ್ನೆ ಮಾಧ್ಯಮದವರು ಒಂದು ಪ್ರಶ್ನೆ ಕೇಳಿದ್ರು. ಸಿದ್ದರಾಮಯ್ಯ ಬದಲಾಗ್ತಾರಾ ಅಂತ ಕೇಳಿದ್ರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಅಂತ ನಮ್ಮ ನಾಯಕರು ವೇಣುಗೋಪಾಲ್ ಸುದ್ದಿಗೋಷ್ಠಿಯಲ್ಲಿ ಏನು ಹೇಳಿದ್ರೋ, ನಾನು ಅದನ್ನೆ ಹೇಳಿದ್ದೆ. ಪವರ್ ಸ್ಟೇರಿಂಗ್ ಶೇರಿಂಗ್ ಇಲ್ಲ. ಇದ್ರೆ ಅದು ಜನರ ಜತೆ ಮಾತ್ರ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ಸಿಎಂ ಪಟ್ಟಕ್ಕೆ ಪಟ್ಟು ಹಿಡಿದಿದ್ದರು. ಕೊನೆಗೆ ಸಾಕಷ್ಟು ಹೈಡ್ರಾಮಗಳ ಬಳಿಕ ಹೈಕಮಾಂಡ್‌ ಸಂಧಾನ ಸೂತ್ರ ಸಿದ್ದಪಡಿಸಿತ್ತು. ಮೊದಲ ಎರಡೂವರೆ ವರ್ಷ ಸಿದ್ದರಾಮಯ್ಯ ನಂತರ ಎರಡೂವರೆ ವರ್ಷ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಕೆ ಶಿವಕುಮಾರ್‌ ಅಧಿಕಾರ ಹಿಡಿಯಲಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ಈ ವದಂತಿ ಬಗ್ಗೆ ಯಾರು ಸ್ಪಷ್ಟನೆ ನೀಡಿರಲಿಲ್ಲ. ಇದೀಗ ಎಂಬಿ ಪಾಟೀಲ್‌ ಹೇಳಿಕೆಯಿಂದಾಗಿ ಮತ್ತೆ ಗೊಂದಲ ಮೂಡಿದೆ.

suddiyaana