ಝೊಮ್ಯಾಟೋ ಅಪ್ಲಿಕೇಷನ್‌ ನಲ್ಲಿ ಹೊಸ ಫೀಚರ್‌ – ಯುಪಿಐ ಮುಖಾಂತರ ವ್ಯಾಪಾರಿಗಳಿಗೆ ನೇರ ಪಾವತಿ!

ಝೊಮ್ಯಾಟೋ ಅಪ್ಲಿಕೇಷನ್‌ ನಲ್ಲಿ ಹೊಸ ಫೀಚರ್‌ – ಯುಪಿಐ ಮುಖಾಂತರ ವ್ಯಾಪಾರಿಗಳಿಗೆ ನೇರ ಪಾವತಿ!

ಜನಪ್ರಿಯ ಆಹಾರ ವಿತರಣಾ ಕಂಪನಿಗಳಲ್ಲೊಂದಾದ ಝೊಮ್ಯಾಟೋ ಇದೀಗ ತನ್ನದೇ ಸ್ವಂತ ಯುಪಿಐ (UPI-ಯುನಿಫೈಡ್‌ ಪೇಮೆಂಟ್ಸ್‌ ಇಂಟರ್‌ ಫೇಸ್) ಸೇವೆಯನ್ನು ಆರಂಭಿಸಿದೆ. ಇದರಿಂದಾಗಿ ಗ್ರಾಹಕರಿಗೆ ಹಣಪಾವತಿ ಮಾಡಲು ಸಹಕಾರಿಯಾಗಲಿದೆ.

ಇದನ್ನೂ ಓದಿ: ಯೂಟ್ಯೂಬ್‌ ಸರ್ವರ್‌ ಡೌನ್ – ಬಳಕೆದಾರರು, ​​ಕಂಟೆಂಟ್​​ ಕ್ರಿಯೆಟರ್​ಗಳಿಂದ ದೂರು

ಝೊಮ್ಯಾಟೋ ಐಸಿಐಸಿಐ ಬ್ಯಾಂಕ್‌ ಸಹಭಾಗಿತ್ವದಲ್ಲಿ ರಿಯಲ್‌ ಟೈಮ್‌ ಪಾವತಿಗೆ ಅನುಕೂಲವಾಗುವಂತೆ ಆರಂಭಿಸಿರುವ ಯುಪಿಐ ಮೂಲಕ ಝೊಮ್ಯಾಟೋ ಬಳಕೆದಾರರು ಫುಡ್‌ ಡೆಲಿವರಿಗಳಲ್ಲಿ ಹಣವನ್ನು ನೇರವಾಗಿ ವ್ಯಾಪಾರಿಗಳಿಗೆ ಪಾವತಿಸಬಹುದಾಗಿದೆ. ಹಾಗೂ ಇತರ ಬಳಕೆದಾರರಿಗೂ ಹಣವನ್ನು ಕಳುಹಿಸಲು ಅನುಕೂಲವಾಗಲಿದೆ. ಝೊಮ್ಯಾಟೋ ಅಪ್ಲಿಕೇಷನ್‌ ಬಳಸುವ ಗ್ರಾಹಕರು ಅಪ್ಲಿಕೇಷನ್‌ ಸೈನ್‌ ಇನ್‌ ಮಾಡಿ ತಮ್ಮದೇ ಯುಪಿಐ ಐಡಿಗಳನ್ನು ರಚಿಸಿದ ನಂತರ ಅಪ್ಲಿಕೇಶನ್‌ ಮೂಲಕ ಪಾವತಿ ಮಾಡಲು ಸಾಧ್ಯವಾಗುತ್ತದೆ.

ಝೊಮ್ಯಾಟೋ ಯುಪಿಐ ಕ್ರಿಯೇಟ್‌ ಮಾಡಲು ಹೀಗೆ ಮಾಡಿ..

  • ಝೊಮ್ಯಾಟೋ App ಡೌನ್‌ ಲೋಡ್‌ ಮಾಡಿ, ಅದನ್ನು ಓಪನ್‌ ಮಾಡಿ.
  • ನಂತರ ಝೊಮ್ಯಾಟೋ ಅಕೌಂಟ್‌ ನಲ್ಲಿರುವ ಪ್ರೊಫೈಲ್‌ ಸೆಕ್ಷನ್‌ ಕ್ಲಿಕ್‌ ಮಾಡಿ.
  • ಬಳಿಕ ಝೊಮ್ಯಾಟೋ UPI ಆಯ್ಕೆಗಾಗಿ ಸ್ಕ್ರೋಲ್‌ ಡೌನ್‌ ಮಾಡಿ.
  • ಝೊಮ್ಯಾಟೋ ಯುಪಿಐ Activate ಅನ್ನು ಕ್ಲಿಕ್‌ ಮಾಡಿ.
  • ನಿಮ್ಮ ಆಯ್ಕೆಯ ಝೊಮ್ಯಾಟೋ ಯುಪಿಐ ಐಡಿಯನ್ನು ರಚಿಸಿ.
  • ನಿಮ್ಮ ಮೊಬೈಲ್‌ ಸಂಖ್ಯೆಯನ್ನು ಆಯ್ಕೆ ಮಾಡಿ.

ನಂತರ ಝೊಮ್ಯಾಟೋ ಅಪ್ಲಿಕೇಶನ್‌ ಮೂಲಕ ಸುಲಭ ಪಾವತಿ ಸಕ್ರಿಯಗೊಳಿಸಲು ನಿಮ್ಮ ಬ್ಯಾಂಕ್‌ ಖಾತೆಯನ್ನು ಲಿಂಕ್‌ ಮಾಡಿ. ಈ ಕ್ರಮಗಳನ್ನು ಅನುಸರಿಸಿದ ಬಳಿಕ ಝೊಮ್ಯಾಟೋ ಯುಪಿಐ Activate ಆಗುವ ಮೂಲಕ ನೀವು ಆರ್ಡರ್‌ ಮಾಡುವ ಆಹಾರಗಳಿಗೆ ಸುಲಭವಾಗಿ ಹಣವನ್ನು ಪಾವತಿಸಬಹುದಾಗಿದೆ.

suddiyaana