ಯೂಟ್ಯೂಬ್ ಸರ್ವರ್ ಡೌನ್ – ಬಳಕೆದಾರರು, ಕಂಟೆಂಟ್ ಕ್ರಿಯೆಟರ್ಗಳಿಂದ ದೂರು
ನವದೆಹಲಿ: ಜಗತ್ತಿನಾದ್ಯಂತ ಲಕ್ಷಾಂತರ ಜನರು ಬಳಸುತ್ತಿರುವ ಜನಪ್ರಿಯ ವಿಡಿಯೋ ಸ್ಟ್ರೀಮಿಂಗ್ App ಯೂಟ್ಯೂಬ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಯೂಟ್ಯೂಬ್ ಸರ್ವರ್ ಡೌನ್ ಆಗಿದ್ದು, ವಿಡಿಯೋ ಅಪ್ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ.
ಗುರುವಾರ ಯೂಟ್ಯೂಬ್ ಸರ್ವರ್ ಡೌನ್ ಆಗಿದ್ದು, ಬಳಕೆದಾರರು ಹಾಗೂ ಕಂಟೆಂಟ್ ಕ್ರಿಯೆಟರ್ಗಳಿಗೆ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ ಅನ್ನು ಪ್ರವೇಶಿಸಲು ಸಾಧ್ಯವಾಗಿಲ್ಲ. ಬಳಕೆದಾರರು ಯೂಟ್ಯೂಬ್ಗೆ ಪ್ರವೇಶಿಸಲು, ವಿಡಿಯೋಗಳನ್ನು ವೀಕ್ಷಿಸಲು ಮತ್ತು ವಿಷಯವನ್ನು ಅಪ್ಲೋಡ್ ಮಾಡುವಲ್ಲಿ ಕೆಲವು ಸಮಯ ಸಮಸ್ಯೆಯನ್ನು ಎದುರಿಸಿದ್ದಾರೆ.
ಇದನ್ನೂ ಓದಿ: ನಿವೃತ್ತಿ ವಯಸ್ಸು ದಾಟಿದರೂ ನಿರಂತರ ಕೆಲಸ..! – ಯುವಕರಿಗೆ ಸ್ಪೂರ್ತಿಯಾದ ಹಸನ್ ಅಲಿ..!
ಯೂಟ್ಯೂಬ್ ಸರ್ವರ್ ಡೌನ್ ಆಗಿರುವ ಕುರಿತಾಗಿ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ʼನನ್ನ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನನಗೆ ವಿಡಿಯೋಗಳನ್ನು ವೀಕ್ಷಿಸಲು ಆಗುತ್ತಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಯೂಟ್ಯೂಬ್ ನಲ್ಲಿ ತಾಂತ್ರಿಕ ದೋಷ ಉಂಟಾಗಿರುವ ಕುರಿತು ದೂರುಗಳು ಕೇಳಿಬಂದ ಬೆನ್ನಲ್ಲೇ, ಯೂಟ್ಯೂಬ್ ಅಧಿಕೃತ ಖಾತೆ ಮೂಲಕವಾಗಿ ಕಂಪನಿ ಪ್ರತಿಕ್ರಿಯಿಸಿದೆ. “ಯೂಟ್ಯೂಬ್ ಬಳಕೆದಾರರು ಹಾಗೂ ಕಂಟೆಂಟ್ ಕ್ರಿಯೆಟರ್ಗಳು ವಿಡಿಯೋ ಅಪ್ಲೋಡ್ ಮಾಡಲು ಅಥವಾ ಯೂಟ್ಯೂಬ್ ವೀಕ್ಷಿಸಲು ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂದು ನಮಗೆ ತಿಳಿದಿದೆ. ನಮ್ಮ ತಂಡವು ತಾಂತ್ರಿಕ ದೋಷ ಸರಿಪಡಿಸುವಲ್ಲಿ ಕಾರ್ಯನಿರ್ವಹಿಸುತ್ತಿದೆ. ಹೆಚ್ಚಿನ ಮಾಹಿತಿಗಾಗಿ ನೀವು ಈ ಲಿಂಕ್ ಅನುಸರಿಸಬಹುದು” ಎಂದು ಹೇಳಿದೆ.