ಡೆಂಗ್ಯೂ ಹರಡುವಿಕೆ ತಡೆಯಲು ಬಿಬಿಎಂಪಿ ಯಿಂದ ಹೊಸ ಪ್ಲಾನ್ – ಐಐಎಸ್ ಸಿ ಯಿಂದ ಹೊಸ ತಂತ್ರಜ್ಞಾನ!

ಡೆಂಗ್ಯೂ ಹರಡುವಿಕೆ ತಡೆಯಲು ಬಿಬಿಎಂಪಿ ಯಿಂದ ಹೊಸ ಪ್ಲಾನ್ – ಐಐಎಸ್ ಸಿ ಯಿಂದ ಹೊಸ ತಂತ್ರಜ್ಞಾನ!

ಬೆಂಗಳೂರು: ಮಳೆಗಾಲ ಸಮೀಪಿಸುತ್ತಿದ್ದಂತೆ ಡೆಂಗ್ಯೂ ಭೀತಿ ಹೆಚ್ಚಾಗತೊಡಗಿದೆ. ಈಗಾಗಲೇ ರಾಜ್ಯದಲ್ಲಿ ನೂರಾರು ಜನರು ಡೆಂಗ್ಯೂನಿಂದ ಬಳಲುತ್ತಿದ್ದಾರೆ. ಮಳೆಯ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ. ಇದೀಗ ಡೆಂಗ್ಯೂ ಹರಡುವಿಕೆಯನ್ನು ತಡೆಯಲು ಬೆಂಗಳೂರಿನ ಸಂಸ್ಥೆಯೊಂದು ಹೊಸ ಆವಿಷ್ಕಾರವೊಂದನ್ನು ಮಾಡಿದೆ

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಎಂಬ ಸಂಸ್ಥೆ ಡೆಂಗ್ಯೂ ತಡೆಯಲು ರೊಬೊಟಿಕ್ಸ್ ಟೆಕ್ನಾಲಜಿ ಪಾರ್ಕ್ ಡ್ಯಾಶ್ಬೋರ್ಡ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಈ ಸಾಫ್ಟ್ವೇರ್ ಸೊಳ್ಳೆಯಿಂದ ಹರಡುವ ರೋಗ ಯಾವಾಗ ಮತ್ತು ಎಲ್ಲಿ ಸಂಭವಿಸಬಹುದು ಎಂಬುದನ್ನು ಪತ್ತೆ ಹಚ್ಚುತ್ತದೆ.

ಇದನ್ನೂ ಓದಿ: ನಾವು ಕರೆಂಟ್ ಬಿಲ್ ಕಟ್ಟಲ್ಲ, ಅದ್ಯಾವ್ ನನ್ಮಗ ಬರ್ತಾನೋ ಬರಲಿ – ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿದೆ ಫ್ರೀ ಕರೆಂಟ್​ ಬೇಡಿಕೆ!

ಸೊಳ್ಳೆಯಿಂದ ಹರಡುವ ರೋಗವನ್ನು ಪತ್ತೆಹಚ್ಚಲು ಕೃತಕ ಬುದ್ಧಿಮತ್ತೆಯನ್ನು ಈ ಸ್ವಾಫ್ಟವೇರ್ ನಲ್ಲಿ ಬಳಸಿಕೊಳ್ಳಲಾಗುತ್ತದೆ.  ಆದರೆ ಇದನ್ನು ತಡೆಯಲು ARTPARK ಫೌಂಡೇಶನ್ 15 ದಿನಗಳ ಹಿಂದೆ ಡ್ಯಾಶ್ಬೋರ್ಡ್ ಅಭಿವೃದ್ಧಿ ಕುರಿತು BBMP ಯೊಂದಿಗೆ ಎಂಒಯು ಮಾಡಿಕೊಂಡಿದೆ. ಈ ಸ್ವಾಫ್ಟವೇರ್ ಬಳಕೆಯಿಂದಾಗಿ ಸೊಳ್ಳೆಯಿಂದ ಹರಡುವ ರೋಗವನ್ನುತಡೆಯಲು ಬಿಬಿಎಂಪಿಗೆ ಸಹಾಯ ಆಗಲಿದೆ.

ಕೇಂದ್ರ ಸರ್ಕಾರದ ಒನ್ ಹೆಲ್ತ್ ಕಾರ್ಯಕ್ರಮದ ಅಡಿಯಲ್ಲಿ ಪ್ರತಿಷ್ಠಾನವು ಪ್ರಾಜೆಕ್ಟ್ ಪ್ರೊ ಬೊನೊವನ್ನು ಮಾಡುತ್ತಿದೆ. ಒಂದು ತಿಂಗಳೊಳಗೆ ಡೆಂಗ್ಯೂ ಪ್ರಕರಣಗಳ ಸ್ಥಿತಿ ಮತ್ತು ವಿಶ್ಲೇಷಣೆಯನ್ನು ನೀಡುವ ವಿಶ್ಲೇಷಣಾತ್ಮಕ ಡ್ಯಾಶ್ಬೋರ್ಡ್ ಸಿದ್ಧವಾಗಲಿದೆ ಎಂದು ವರದಿಯಾಗಿದೆ.

ಬಿಬಿಎಂಪಿಯ ಮುಖ್ಯ ಆರೋಗ್ಯಾಧಿಕಾರಿ ಡಾ.ಬಾಲಸುಂದರ್ ಮಾತನಾಡಿ, ಔಷಧಿಗಳ ಖರೀದಿ, ಪರೀಕ್ಷಾ ಸೌಲಭ್ಯಗಳನ್ನು ಹೆಚ್ಚಿಸುವುದು ಮತ್ತು ಫಾಗಿಂಗ್ನಂತಹ ತಡೆಗಟ್ಟುವ ಕ್ರಮಗಳಿಗೆ ಸಂಬಂಧಿಸಿದಂತೆ BBMP ಇನ್ನಷ್ಟು ತಯಾರಿ ಮಾಡಲು ಈ ಹೊಸ ಡ್ಯಾಶ್ಬೋರ್ಡ್ ಸಹಾಯ ಮಾಡಲಿದೆ ಎಂದು ತಿಳಿಸಿದ್ದಾರೆ.

suddiyaana