ಭರದಿಂದ ಸಾಗುತ್ತಿದೆ ಅಯೋಧ್ಯೆಯ ರಾಮಮಂದಿರ ನಿರ್ಮಾಣ ಕಾರ್ಯ – ಮಂದಿರದ ಗರ್ಭಗುಡಿ ಫಸ್ಟ್ ಲುಕ್ ಇಲ್ಲಿದೆ..
ಕೋಟ್ಯಾಂತರ ಹಿಂದೂಗಳ ಶತ ಶತಮಾನಗಳ ಕನಸು ನನಸಾಗುವ ಕಾಲ ಹತ್ತಿರ ಬರುತ್ತಿದೆ. ಅಯೋಧ್ಯೆಯ ಶ್ರೀರಾಮ ದೇಗುಲ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಈಗಾಗಲೇ ಬಹುತೇಕ ರಾಮಮಂದಿರ ಕಾರ್ಯ ಪೂರ್ಣಗೊಂಡಿದೆ. ಇದೀಗ ಅಯೋಧ್ಯೆಯಲ್ಲಿ ರೂಪುಗೊಳ್ಳುತ್ತಿರುವ ರಾಮಮಂದಿರದ ಫೋಟೋಗಳನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆಗೆ ಡೇಟ್ ಫಿಕ್ಸ್ – ಭಕ್ತರಿಗೆ ದರ್ಶನ ಯಾವಾಗ?
ಚಂಪತ್ ರಾಯ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಫೋಟೋ ಹಾಗೂ ವಿಡಿಯೋಗಳಲ್ಲಿ ಗರ್ಭಗುಡಿ ಕಾಮಗಾರಿಯ ಝಲಕ್ ಕಾಣಬಹುದಾಗಿದೆ. ಬಿಳಿಯ ಅಮೃತಶಿಲೆಯ ಗೋಡೆಗಳ ತುಂಬಾ ಮನ ಸೆಳೆವ ಕಲಾರಚನೆಗಳನ್ನು ಕೆತ್ತನೆ ಮಾಡಲಾಗಿದೆ.
ಜನವರಿ 2024ರ ಮೊದಲು ದೇವಾಲಯದ ನೆಲ ಮಹಡಿ ಸಿದ್ಧವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಜನವರಿ 14 ಮತ್ತು 15 ರಂದು ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಭಕ್ತರಿಗಾಗಿ ದೇವಾಲಯದ ದ್ವಾರಗಳನ್ನು ತೆರೆಯಲಾಗುವುದು ಎಂದು ದೇವಾಲಯದ ಟ್ರಸ್ಟ್ ಸದಸ್ಯ ಮಹಂತ್ ಕಮಲ್ ನಯನ್ ದಾಸ್ ತಿಳಿಸಿದ್ದಾರೆ.
ರಾಮಮಂದಿರದ ನೆಲಮಹಡಿಯಲ್ಲಿ ಶೇ.70ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಶೇ.40ರಷ್ಟು ಮೇಲ್ಛಾವಣಿಯ ಕಾಮಗಾರಿ ಮುಗಿದಿದೆ. ಈ ಮಧ್ಯೆ ಅಯೋಧ್ಯೆಗೆ ಆಧ್ಯಾತ್ಮಿಕ ನಗರ ಎಂಬ ಗುರುತನ್ನು ನೀಡಲು ಸರ್ಕಾರ ಮುಂದಾಗಿದೆ. ದೇವಾಲಯದ ಪಟ್ಟಣದ ಪ್ರಮುಖ ಬೀದಿಗಳಿಗೆ ವಿನ್ಯಾಸಗಳು, ಕಲಾಕೃತಿಗಳು ಮತ್ತು ಪರಿಕಲ್ಪನೆಗಳನ್ನು ಒದಗಿಸಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಮತ್ತು ಇತರ ವ್ಯಕ್ತಿಗಳಿಗೆ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ ಸ್ಪರ್ಧೆಯನ್ನು ಏರ್ಪಡಿಸಿದೆ. ದೇವಾಲಯದ ಟ್ರಸ್ಟ್ ಪ್ರಕಾರ ಅಂತಿಮ ವಿನ್ಯಾಸವು ದೇವಾಲಯದ ಸ್ಥಳದಲ್ಲಿ ಸೂರ್ಯ, ಗಣೇಶ, ಶಿವ, ದುರ್ಗಾ, ವಿಷ್ಣು ಮತ್ತು ಬ್ರಹ್ಮ ದೇವಾಲಯಗಳ ನಿರ್ಮಾಣವನ್ನು ಒಳಗೊಂಡಿರುತ್ತದೆ ಎಂದು ಮಹಂತ್ ಕಮಲ್ ನಯನ್ ದಾಸ್ ತಿಳಿಸಿದ್ದಾರೆ.
होइहि सोइ जो राम रचि राखा।
को करि तर्क बढ़ावै साखा॥ pic.twitter.com/wtmjMEnCZD— Champat Rai (@ChampatRaiVHP) May 5, 2023