ಸೆಖೆ ಎಂದು ಮನೆಯ ಹೊರಗೆ ಮಲಗುವವರೇ ಎಚ್ಚರ.. – ನಿಮ್ಮ  ಜೀವಕ್ಕೆ ಎದುರಾಗಬಹುದು ಕಂಟಕ!

ಸೆಖೆ ಎಂದು ಮನೆಯ ಹೊರಗೆ ಮಲಗುವವರೇ ಎಚ್ಚರ.. – ನಿಮ್ಮ  ಜೀವಕ್ಕೆ ಎದುರಾಗಬಹುದು ಕಂಟಕ!

ದೇಶದಾದ್ಯಂತ ಬಿಸಿಲಿನ ಝಳ ಹೆಚ್ಚಾಗಿದೆ. ಬಿಸಿಲಿನ ತಾಪಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಸೆಖೆ ತಡೆಯಲಾಗದೇ ಜನ ಮನೆಯ ಮಹಡಿಗಳಲ್ಲಿ ಮನೆಯ ಅಂಗಳದಲ್ಲಿ ಹೀಗೆ ರಾತ್ರಿಯ ಹೊತ್ತು ತಂಪು ಗಾಳಿ ಬೀಸುವ ಸ್ಥಳ ನೋಡಿ ಮಲಗುತ್ತಾರೆ. ಹೀಗೆ ಮನೆಯ ಹೊರಗೆ ಮಲಗುವವರು ಎಚ್ಚರಿಕೆಯಿಂದ ಇರುವುದು ಅಗತ್ಯ. ಇಲ್ಲದಿದ್ದರೆ ಜೀವಕ್ಕೆ ಅಪಾಯ ಎದುರಾಗುವ ಸಾಧ್ಯತೆ ಇದೆ.

ಮಹಾರಾಷ್ಟ್ರದ ಪುಣೆಯ ಅಲೆಫಟಾ ಸಮೀಪದ ಕಲ್ಯಾಣ ನಗರದಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದೆ. ಸೆಖೆ ತಡೆಯಲಾಗದೇ ವ್ಯಕ್ತಿಯೊಬ್ಬ  ಹೊರಾಂಗಣದಲ್ಲಿ ಮಲಗಿದ್ದಾನೆ. ಈ ವೇಳೆ ಚಿರತೆಯೊಂದು ಬಂದು ಆತನ ಸಾಕು ನಾಯಿಯನ್ನು ಹೊತ್ತೊಯ್ದಿದ್ದು, ಆತ ಜಸ್ಟ್ ಮಿಸ್ ಆಗಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಆಟವಾಡುತ್ತಿದ್ದ ಬಾಲಕನ ಮೇಲೆರಗಿತ್ತು ಚಿರತೆ – ಕುಡುಗೋಲಿನಲ್ಲೇ ಮಗುವನ್ನ ರಕ್ಷಿಸಿದ್ದೇಗೆ ತಾಯಿ..!?

ಈ ವೀಡಿಯೋದಲ್ಲಿ ಇದೊಂದು ಗ್ಯಾರೇಜ್‌ನಂತೆ ಕಾಣಿಸುತ್ತಿದ್ದು, ಆತ ಸಾಲಾಗಿ ನಿಲ್ಲಿಸಿರುವ ಲಾರಿಗಳ ಮುಂದೆ ಬೆಂಚೊಂದನ್ನು ಜೋಡಿಸಿ ಅದರ ಮೇಲೆ ಮಲಗಿದ್ದಾನೆ. ಆತನ ಪಕ್ಕದಲ್ಲೇ ನಾಯೊಂದು ಕೆಳಗೆ ಮಲಗಿದೆ. ಮಧ್ಯರಾತ್ರಿ ವೇಳೆ ಇಲ್ಲಿಗೆ ಚಿರತೆಯೊಂದು ಬಂದಿದ್ದು, ಸ್ವಲ್ಪ ಕಾಲ ಸಂದರ್ಭವನ್ನು ಅವಲೋಕಿಸಿದ ಚಿರತೆ ಸ್ವಲ್ಪ ಮುಂದೆ ಬಂದು ನಾಯಿಯನ್ನು ಎಳೆದುಕೊಂಡು ಅಲ್ಲಿಂದ ಕ್ಷಣದಲ್ಲಿ ಮರೆಯಾಗಿದೆ. ಈ ವೇಳೆ ನಾಯಿ ಜೋರಾಗಿ ಬೊಬ್ಬೆ ಹಾಕಿದ್ದು, ಈ ಸದ್ದು ಕೇಳಿ ಎದ್ದ ಮಾಲೀಕನಿಗೆ ಏನಾಗುತ್ತಿದೆ ಎಂಬುದೇ ತಿಳಿಯದಾಗಿದೆ.

ನಿದ್ದೆ ಮಂಪರಿನಲ್ಲಿದ್ದ ಆತ ಸಂಪೂರ್ಣವಾಗಿ ವಾಸ್ತವಕ್ಕೆ ಬರುವ ವೇಳೆ ಚಿರತೆ ಆತನ ಶ್ವಾನವನ್ನು ಎತ್ತಿಕೊಂಡು ಮಾರು ದೂರ ತಲುಪಿದೆ. ಅದೃಷ್ಟವಶಾತ್ ಚಿರತೆ ನಾಯಿಯನ್ನು ಬಿಟ್ಟು ಆತನ ಮೇಲೆ ದಾಳಿ ಮಾಡದಿರುವುದು ಪುಣ್ಯ.  ಈ ದೃಶ್ಯಾವಳಿ ಅಲ್ಲೇ ಇದ್ದ ಸಿಸಿ ಕ್ಯಾಮರಾದಲ್ಲಿ ವೈರಲ್ ಆಗಿದ್ದು, ವೀಡಿಯೋ ನೋಡಿದ ಅನೇಕರು ದಿಗ್ಭ್ರಾಂತರಾಗಿದ್ದಾರೆ.

suddiyaana