ಕರ್ನಾಟಕದಲ್ಲೂ ಬ್ಯಾನ್‌ ಆಗುತ್ತಾ ʼದಿ ಕೇರಳ ಸ್ಟೋರಿʼ ?

ಕರ್ನಾಟಕದಲ್ಲೂ ಬ್ಯಾನ್‌ ಆಗುತ್ತಾ ʼದಿ ಕೇರಳ ಸ್ಟೋರಿʼ ?

‘ದಿ ಕೇರಳ ಸ್ಟೋರಿ’ ಸಿನಿಮಾ ಬಗ್ಗೆ ದಿನಕಳೆದಂತೆ ಪರ, ವಿರೋಧ ಚರ್ಚೆಗಳು ಹೆಚ್ಚಾಗುತ್ತಿದೆ. ಒಂದೆಡೆ ಚಿತ್ರ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಷ್ಟೇ ಅಲ್ಲದೇ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ 100 ಕೋಟಿಗೂ ಮೀರಿದ ಕಮಾಯಿ ಮಾಡಿದೆ. ಆದರೆ ಚಿತ್ರಕ್ಕೆ ತಡೆ ನೀಡಬೇಕೆಂದು ಆರಂಭದಿಂದಲೂ ಅನೇಕರು ಪ್ರಯತ್ನಿಸುತ್ತಿದ್ದಾರೆ. ಇದೀಗ ಕರ್ನಾಟಕದಲ್ಲೂ ಚಿತ್ರ ಬ್ಯಾನ್‌ ಆಗುತ್ತಾ ಅನ್ನೋ ಪ್ರಶ್ನೆ ಎದುರಾಗಿದೆ.

ದೇಶದ ಕೆಲವು ರಾಜ್ಯಗಳಲ್ಲಿ ʼದಿ ಕೇರಳ ಸ್ಟೋರಿʼ ಸಿನಿಮಾ ಪ್ರದರ್ಶನಕ್ಕೆ ನಿಷೇಧ ಹೇರಲಾಗಿದೆ. ಇದೀಗ ರಾಜ್ಯದಲ್ಲೂ ಈ ಸಿನಿಮಾ ಬ್ಯಾನ್‌ ಆಗುತ್ತಾ ಅನ್ನೋ ಪ್ರಶ್ನೆ ಎಲ್ಲೆಡೆ ಕೇಳಿಬರುತ್ತಿದೆ. ಇದಕ್ಕೆ ಕಾರಣ ಕಾಂಗ್ರೆಸ್‌ ಗೆ ಬಹುಮತ ಬಂದಿರುವುದು.

ಇದನ್ನೂ ಓದಿ: ಮುಂದಿನ ಜನಾಂಗ ಕೊಲ್ಲೂರು ದೇವಸ್ಥಾನಕ್ಕೆ ಬರಬೇಕೆಂದರೆ ‘ದಿ ಕೇರಳ ಸ್ಟೋರಿ’ನೋಡಿ! – ದೇಗುಲದಲ್ಲಿ ಫ್ಲೆಕ್ಸ್ ಹಾಕಿದ್ಯಾರು?

ಬೇರೆ ಬೇರೆ ರಾಜ್ಯದಲ್ಲಿ ಈ ಸಿನಿಮಾ ನಿಷೇಧ ಮಾಡಲಾಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ವಹಿಸಿಕೊಂಡ ಬಳಿಕ ಸಿನಿಮಾ ನಿಷೇಧ ಮಾಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಿಂದೂ ಯುವತಿಯರು ಸಿನಿಮಾ ನೋಡಲು ಚಿತ್ರ ಮಂದಿರ ಬುಕ್ ಮಾಡಿದ್ದಾರೆ.

ಯತ್ನಾಳ್‌ ಅವರಿಂದ ಇಡೀ ಚಿತ್ರಮಂದಿರ ಬುಕ್ ಮಾಡಲಾಗಿದೆ. ವಿಜಯಪುರದ ಹಿಂದೂಗಳಿಗೆ ಚಿತ್ರ ತೋರಿಸಲು ಅಲ್ಲಿನ ಅಪ್ಸರಾ ಚಿತ್ರ ಮಂದಿರದಲ್ಲಿ ಮೂರು ದಿನಗಳ ಕಾಲ ಉಚಿತವಾಗಿ ಸಿನಿಮಾ ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿದೆ. ಮೂರು ದಿನಗಳ ಕಾಲ ಬೆಳಿಗ್ಗೆ 12 ಗಂಟೆಯ ಶೋ ಉಚಿತವಾಗಿ ವೀಕ್ಷಣೆ ಮಾಡಬಹುದು.

ಮೇ, 16,17,18 ರಂದು ಮೂರು ದಿನಗಳ ಕಾಲ ಸಿನಿಮಾ ವೀಕ್ಷಿಸಲು ಅವಕಾಶ ನೀಡಲಾಗಿದೆ. ವಿಜಯಪುರ ಹಿಂದೂ ಯುವತಿಯರು ಸಿನಿಮಾ ನೋಡುವಂತೆ ಯತ್ನಾಳ ಬೆಂಬಲಿಗರು ಕರೆಕೊಟ್ಟಿದ್ದಾರೆ.

suddiyaana