ಹಗಲಿನಲ್ಲಿ ಹೆಚ್ಚು ನಿದ್ದೆ ಮಾಡುತ್ತೀರಾ? – ಎಚ್ಚರ.. ಇದು ಕಾಯಿಲೆ ಇರಬಹುದು!

ಹಗಲಿನಲ್ಲಿ ಹೆಚ್ಚು ನಿದ್ದೆ ಮಾಡುತ್ತೀರಾ? – ಎಚ್ಚರ.. ಇದು ಕಾಯಿಲೆ ಇರಬಹುದು!

ಇಂದಿನ ಜೀವನ ಶೈಲಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಕೆಲಸದ ಒತ್ತಡದಿಂದ ಊಟ, ತಿಂಡಿ, ನಿದ್ದೆ ಸಮಯಕ್ಕೆ ಸರಿಯಾಗಿ ಮಾಡುವುದಿಲ್ಲ. ಇದರಿಂದಾಗಿ ಸಾಕಷ್ಟು ಮಂದಿ ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಅವುಗಳಲ್ಲಿ ಹಗಲು ಹೊತ್ತಿನಲ್ಲಿ ನಿದ್ದೆ ಮಾಡುವುದು ಕೂಡ ಒಂದಾಗಿದೆ.

ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಅನೇಕರು ಒಂದೆರಡು ಗಂಟೆಗಳ ಕಾಲ ನಿದ್ದೆ ಮಾಡುತ್ತಾರೆ. ಇದು ಸಾಮಾನ್ಯ. ಆದರೆ ಕೆಲವರು ಹಗಲು ಹೊತ್ತಿನಲ್ಲಿಯೂ ಹೆಚ್ಚು ನಿದ್ದೆ ಮಾಡುತ್ತಿದ್ದು, ಇದು ಕಾಯಿಲೆಯಾಗಿ ಮಾರ್ಪಟ್ಟಿದೆ. ಇದನ್ನು ಇಡಿಎಸ್ ಎಂದು ಕರೆಯುತ್ತಾರೆ. ಮತ್ತೊಂದು ಸಮಸ್ಯೆ ಎಂದರೆ ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ(OSA ).  ಇತ್ತೀಚಿನ ದಿನಗಳಲ್ಲಿ ಇದೊಂದು ಸಾಮಾನ್ಯ ಅಸ್ವಸ್ಥತೆ ಆಗಿದೆ. ಇದು ನಿದ್ರೆಗೆ ಸಂಬಂಧಿಸಿದ ಉಸಿರಾಟದ ಸಮಸ್ಯೆ. ಇದರಿಂದ ನಿದ್ದೆ ಮಾಡುವಾಗ ಉಸಿರಾಟಕ್ಕೆ ತೊಂದರೆಯುಂಟು ಮಾಡುತ್ತದೆ. ಉಸಿರಾಟ ನಿಂತು ಮತ್ತೆ ಆರಂಭವಾಗುತ್ತದೆ.

ಇದನ್ನೂ ಓದಿ: ವಯಸ್ಸಿಗೂ ಮೊದಲೇ ನಿಮ್ಮ ಕೂದಲು ಬಿಳಿಯಾಗಿದ್ಯಾ? – ಈ ಮನೆಮದ್ದು ಬಳಸಿ ನಿಮ್ಮ ಕೂದಲಿನ ಆರೈಕೆ ಮಾಡಿ

ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ ಬಗ್ಗೆ ಅನೇಕ ಸಂಶೋಧನೆಗಳು ನಡೆಯುತ್ತಿದ್ದು ಅದರಲ್ಲಿ ಮೆಕ್ ಮಾಸ್ಟರ್ ವಿಶ್ವವಿದ್ಯಾಲಯದ ದೇನಾ ಜೆರಾಟ್ಕರ್ ಮತ್ತು ಟೈಲರ್ ಪಿಟ್ರೆ ಅವರು ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ (ಒಎಸ್ಎ) ಹೊಂದಿರುವ ವ್ಯಕ್ತಿಗಳಲ್ಲಿ ಮತ್ತು ಅತಿಯಾದ ಹಗಲಿನ ನಿದ್ರೆಗೆ (ಇಡಿಎಸ್) ಸೋಲ್ರಿಯಂಫೆಟಾಲ್ ಔಷಧಿ ಅತ್ಯಂತ ಪರಿಣಾಮಕಾರಿ ಚಿಕಿತ್ಸೆಯಾಗಿದೆ ಎಂದು ಕಂಡುಹಿಡಿದಿದ್ದಾರೆ. ಒಎಸ್ಎ ಹೊಂದಿರುವ ಕೆಲವು ರೋಗಿಗಳು ಇಡಿಎಸ್ ಹೊಂದಿದ್ದಾರೆ. ಇದರಿಂದಾಗಿ ಆಯಾಸ ವಿರೋಧಿ ಔಷಧಿಯಿಂದ ಪ್ರಯೋಜನ ಪಡೆಯಬಹುದು.

ಜೆರಾಟ್ಕರ್ ಮತ್ತು ಪಿತ್ರೆ ಅವರು  ತಮ್ಮ ಸಂಶೋಧನೆಗಳ ವರದಿಯನ್ನು ಅನ್ನಲ್ಸ್ ಆಫ್ ಇಂಟರ್ನಲ್ ಮೆಡಿಸಿನ್‌ ಜರ್ನಲ್‌ ನಲ್ಲಿ ಪ್ರಕಟಿಸಿದ್ದಾರೆ. ಅದರಲ್ಲಿ ಅವರು ಕೆಲವು ಅಂಶಗಳನ್ನು ಸ್ಪಷ್ಟಪಡಿಸಿದ್ದಾರೆ. “ಒಎಸ್ಎ ಹೊಂದಿರುವ ಜನರು ಮಾಡಬೇಕಾದ ಪ್ರಮುಖ ವಿಷಯವೆಂದರೆ ತಮ್ಮ ಪಿಎಪಿ ಯಂತ್ರವನ್ನು ಬಳಸುವುದು ಉತ್ತಮ. ಅದರ ಜೊತೆಗೆ ಅವರ ದಣಿವನ್ನು ಕಡಿಮೆ ಮಾಡಲು ಔಷಧಿಗಳ ರೂಪದಲ್ಲಿ ಆಯ್ಕೆಗಳಿವೆ” ಎಂದು ಮೆಕ್ಮಾಸ್ಟರ್ ವಿಶ್ವವಿದ್ಯಾಲಯದ ವೈದ್ಯ ಮತ್ತು ಲೇಖಕ ಟೈಲರ್ ಪಿಟ್ರೆ ತಿಳಿಸಿದ್ದಾರೆ.

ಉತ್ತರ ಅಮೆರಿಕಾದಲ್ಲಿ ಶೇಕಡಾ 15 ರಿಂದ 30 ಮಂದಿ ಜನರಲ್ಲಿ ಒಎಸ್ಎ ಪತ್ತೆಯಾಗಿದೆ. ಆದರೆ ಅನೇಕರು ಈ ರೋಗದಿಂದ ಬಳಲುತ್ತಿದ್ದರೂ ಪರೀಕ್ಷೆ ಒಳಗಾಗಿಲ್ಲ. ಇದರಿಂದಾಗಿ ಈ ರೋಗ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಧ್ಯತೆಯೂ ಹೆಚ್ಚಾಗಿದೆ. ಇದು ಕೆನಡಾ, ಯುನೈಟೆಡ್ ಸ್ಟೇಟ್ಸ್ ಮತ್ತು ಇತರ ಹೆಚ್ಚಿನ ದೇಶಗಳಲ್ಲಿ ಹಲವು ಜನರ ಮೇಲೆ ಪರಿಣಾಮ ಬೀರುತ್ತದೆ” ಎಂದು ಅವರು ಹೇಳಿದ್ದಾರೆ.

ಒಎಸ್ಎ ಪತ್ತೆಯಾದ ಅನೇಕ ರೋಗಿಗಳಲ್ಲಿ ಇಡಿಎಸ್‌ ರೋಗ ಕೂಡ ಇದೆ. ಇದು ರೋಗಕ್ಕೆ ತುತ್ತಾದವರ ಜೀವನದ ಗುಣಮಟ್ಟದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದರಿಂದಾಗಿ ಮಾನಸಿಕವಾಗಿ ಕುಗ್ಗುವ ಅಪಾಯ ಹೆಚ್ಚಾಗಿರುತ್ತದೆ. ಅಷ್ಟೇ ಅಲ್ಲದೇ ಒಎಸ್ಎ ಜಾಗತಿಕವಾಗಿ ಸುಮಾರು ಒಂದು ಶತಕೋಟಿ ಜನರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಅವರಲ್ಲಿ ಅನೇಕರು ಇಡಿಎಸ್‌ ನ ಅಪಾಯದಲ್ಲಿಯೂ ಇದ್ದಾರೆ ಎಂದು ಪಿಟ್ರೆ ಹೇಳಿದ್ದಾರೆ.

ಜೆರಾಟ್ಕರ್ ಮತ್ತು ಪಿಟ್ರೆ ಈ ಅಧ್ಯಯನವನ್ನು ಸುಮಾರು 1 ವರ್ಷಗಳ ಕಾಲ ಅಧ್ಯಯನ ನಡೆಸಿದ್ದಾರೆ. ಅಧ್ಯಯನಕ್ಕೆ ಸುಮಾರು 3,085 ಜನರನ್ನು ಒಳಪಡಿಸಿದ್ದಾರೆ.

ಹಿರಿಯ ಲೇಖಕ ಜೆರಾಟ್ಕರ್ ಅವರು ಈ ರೋಗಕ್ಕೆ ಇರುವ ಔಷಧಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಸೋಲ್ರಿಯಂಫೆಟಾಲ್ ಇಡಿಎಸ್‌ ಗೆ  ಉತ್ತಮ ಔಷಧಿಯಾಗಿದ್ದರೂ, ಆರ್ಮೊಡಾಫಿನಿಲ್-ಮೊಡಾಫಿನಿಲ್ ಮತ್ತು ಪಿಟೊಲಿಸೆಂಟ್ ಔಷಧಿಗಳು ಆಯಾಸವನ್ನು ಎದುರಿಸುವಲ್ಲಿ ಪರಿಣಾಮಕಾರಿಯಾಗಿವೆ. ಆದರೆ, ಸೋಲ್ರಿಯಂಫೆಟಾಲ್ ರಕ್ತದೊತ್ತಡವನ್ನು ಹೆಚ್ಚಿಸಬಹುದು, ವಿಶೇಷವಾಗಿ ಒಎಸ್ಎ ಹೊಂದಿರುವ ಜನರಿಗೆ ಇದು ಅಪಾಯಕಾರಿಯಾಗಿದೆ. ಏಕೆಂದರೆ ಅವರಲ್ಲಿ ಅನೇಕರು ಹೃದಯರಕ್ತನಾಳದ ಸಮಸ್ಯೆಗಳನ್ನು ಸಹ ಹೊಂದಿದ್ದಾರೆ ಎಂದು ಎಚ್ಚರಿಸಿದ್ದಾರೆ.

ದೀರ್ಘಕಾಲದ ಆಯಾಸ, ಕೋವಿಡ್‌ ನಂತಹ ಸಂಬಂಧಿತ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಈ ಆಯಾಸ ವಿರೋಧಿ ಔಷಧಿಗಳು ಎಷ್ಟು ಪರಿಣಾಮಕಾರಿಯಾಗಿರುತ್ತವೆ ಎಂಬುದನ್ನು ನಾವು ನೋಡಿದ್ದೇವೆ. ಈಗ ಅವು ಇದೇ ರೀತಿಯ ಸ್ಥಿತಿಗೆ ಕೆಲಸ ಮಾಡುತ್ತವೆ ಎಂದು ನಮಗೆ ತಿಳಿದಿದೆ  ಎಂದು ಅರಿವಳಿಕೆ ವಿಭಾಗದ ಸಹಾಯಕ ಪ್ರಾಧ್ಯಾಪಕ ಜೆರಾಟ್ಕರ್ ಹೇಳಿದರು.

suddiyaana