9 ಜಿಲ್ಲೆಗಳಲ್ಲಿ ಶೂನ್ಯ ಫಲಿತಾಂಶ.. 8 ಜಿಲ್ಲೆಗಳಲ್ಲಿ ಒಂದೇ ಕ್ಷೇತ್ರ – ಆಡಳಿತಾರೂಢ ಬಿಜೆಪಿಗೆ ಭಾರೀ ಮುಖಭಂಗ!

9 ಜಿಲ್ಲೆಗಳಲ್ಲಿ ಶೂನ್ಯ ಫಲಿತಾಂಶ.. 8 ಜಿಲ್ಲೆಗಳಲ್ಲಿ ಒಂದೇ ಕ್ಷೇತ್ರ – ಆಡಳಿತಾರೂಢ ಬಿಜೆಪಿಗೆ ಭಾರೀ ಮುಖಭಂಗ!

ಆಡಳಿತ ಪಕ್ಷ.. ಮೋದಿ ಅಲೆ.. ಡಬಲ್ ಇಂಜಿನ್ ಸರ್ಕಾರ.. ಕರ್ನಾಟಕದಲ್ಲಿ ಕಮಲ ಕಿಲಕಿಲ ಅನ್ನುತ್ತೆ ಅಂತಾ ಬಿಜೆಪಿ ನಾಯಕರೆಲ್ಲಾ ಫುಲ್ ಖುಷಿಯಲ್ಲಿದ್ರು. ಪ್ರಧಾನಿ ಮೋದಿಯೇ ಬಂದು ವಾರಗಟ್ಲೇ ಪ್ರಚಾರ ಮಾಡಿದ್ದಾರೆ. ಮತ್ತೆ ಕರ್ನಾಟಕದಲ್ಲಿ ಸರ್ಕಾರ ರಚಿಸೋದು ಪಕ್ಕಾ ಅಂತಾ ಫಿಕ್ಸ್ ಆಗಿದ್ರು. ಆದರೆ ಮತದಾರ ಪ್ರಭುಗಳು ಬಿಜೆಪಿಯನ್ನ ತಿರಸ್ಕರಿಸಿ ಕಾಂಗ್ರೆಸ್ ಬಹುಪರಾಕ್ ಹಾಕಿದ್ದಾರೆ. ಅದೂ ಕೂಡ ಬಿಜೆಪಿ ಪಡೆ ಕನಸಲ್ಲೂ ಊಹಿಸದ ರೀರಿಯಲ್ಲಿ ಹೀನಾಯವಾಗಿ ಸೋಲು ಅನುಭವಿಸಿದೆ.

ಕೇಸರಿ ಬ್ರಿಗೇಡ್ ಕರ್ನಾಟಕದಲ್ಲಿ ಕಂಡಿರುವ ಸೋಲು ನಿಜಕ್ಕೂ ಅಚ್ಚರಿ ಮೂಡಿಸುತ್ತಿದೆ. ಅದರಲ್ಲೂ 9 ಜಿಲ್ಲೆಗಳಲ್ಲಿ ಒಂದೂ ಖಾತೆಯನ್ನ ತೆರೆಯದೆ ಮಕಾಡೆ ಮಲಗಿದೆ. ಹಾಗಾದ್ರೆ ಯಾವ್ಯಾವ ಜಿಲ್ಲೆಗಳಲ್ಲಿ ಬಿಜೆಪಿ ಒಂದೂ ಸ್ಥಾನವನ್ನೂ ಗೆದ್ದಿಲ್ಲ ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ.

ಬಿಜೆಪಿ ಶೂನ್ಯ ಫಲಿತಾಂಶದ ಜಿಲ್ಲೆಗಳು

  • ಕೊಡಗು
  • ರಾಮನಗರ
  • ಚಾಮರಾಜನಗರ
  • ಕೋಲಾರ
  • ಮಂಡ್ಯ
  • ಬಳ್ಳಾರಿ
  • ಚಿಕ್ಕಬಳ್ಳಾಪುರ
  • ಚಿಕ್ಕಮಗಳೂರು
  • ಯಾದಗಿರಿ

ಶೂನ್ಯ ಫಲಿತಾಂಶದ ಶಾಕ್ ಒಂದು ಕಡೆಯಾದ್ರೆ ಮತ್ತೆ 8 ಜಿಲ್ಲೆಗಳಲ್ಲಿ 1 ಕ್ಷೇತ್ರದಲ್ಲಷ್ಟೇ ಗೆದ್ದಿದೆ. ಹಾಗಾದ್ರೆ ಆ 8 ಜಿಲ್ಲೆಗಳು ಯಾವುವು ಅನ್ನೋ ಮಾಹಿತಿ ಇಲ್ಲಿದೆ.

ಈ ಜಿಲ್ಲೆಗಳಲ್ಲಿ 1 ಕ್ಷೇತ್ರದಲ್ಲಷ್ಟೇ ಗೆಲುವು

  • ಚಿತ್ರದುರ್ಗ
  • ಕೊಪ್ಪಳ
  • ವಿಜಯನಗರ
  • ಬೆಂಗಳೂರು ಗ್ರಾಮಾಂತರ
  • ಮೈಸೂರು
  • ಹಾವೇರಿ
  • ವಿಜಯಪುರ
  • ದಾವಣಗೆರೆ

 

suddiyaana