ಚಿಕ್ಕಮಗಳೂರಿನಲ್ಲಿ ಮುಳುಗಿದ ‘ರವಿ’ – ತನ್ನ ಆಪ್ತನಿಂದಲೇ ಸೋಲು ಕಂಡ ಸಿ.ಟಿ ರವಿ
ಚಿಕ್ಕಮಗಳೂರಿನಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಟಿ ರವಿ ತೀವ್ರ ಮುಖಭಂಗ ಅನುಭವಿಸಿದ್ದಾರೆ. ಸತತ ನಾಲ್ಕು ಬಾರಿ ವಿಜಯ ಸಾಧಿಸಿರುವ ಸಿ.ಟಿ ರವಿ ಈ ಬಾರಿ ತನ್ನ ಆಪ್ತನಿಂದಲೇ ಹೀನಾಯ ಸೋಲು ಕಂಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿಗೆ ತನ್ನ ಕ್ಷೇತ್ರವನ್ನು ಕೂಡಾ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.
ಇದನ್ನೂ ಓದಿ: ಮೈಸೂರಿನಲ್ಲಿ ಸಿದ್ದರಾಮಯ್ಯ ಭರ್ಜರಿ ಜಯಭೇರಿ – ‘ಟಗರು’ ಡಿಚ್ಚಿಗೆ ವಿ.ಸೋಮಣ್ಣ ಸುಸ್ತು
ಕಾಂಗ್ರೆಸ್ನ ಹೆಚ್. ಡಿ. ತಿಮ್ಮಯ್ಯ 64552 ಮತಗಳನ್ನು ಪಡೆದು ಗೆದ್ದಿದ್ದಾರೆ. ಸಿ. ಟಿ. ರವಿ 55678 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ. 1999ರ ವಿಧಾನಸಭಾ ಚುನಾವಣೆ ಬಳಿಕ ಸೋಲು ಕಾಣದ ರವಿಗೆ ಈ ಬಾರಿ ಮತ್ತೆ ಬಿಜೆಪಿ ಮಣೆ ಹಾಕಿತ್ತು. ಆದರೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಬದಲಿಸಿ ಬಿಜೆಪಿಯಿಂದ ಕರೆತಂದ ತಮ್ಮಯ್ಯಗೆ ಟಿಕೆಟ್ ನೀಡಿತ್ತು, ಜೆಡಿಎಸ್ನಿಂದ ತಿಮ್ಮಶೆಟ್ಟಿ ಸ್ಪರ್ಧಿಸಿದ್ದರೆ ಎಎಪಿಯಿಂದ ಈರೇಗೌಡ ಸ್ಪರ್ಧಿಸಿದ್ದಾರೆ. 1999ರಲ್ಲಿ ಸುಮಾರು 900 ಮತಗಳಿಂದ ಸೋತಿದ್ದ ಸಿಟಿ ರವಿ ನಂತರದ ಚುನಾವಣೆಯಲ್ಲಿ ಕ್ರಮವಾಗಿ 25 ಸಾವಿರ, 15 ಸಾವಿರ, 11 ಸಾವಿರ, 26 ಮತಗಳಿಂದ ಗೆಲುವು ಸಾಧಿಸುತ್ತಾ ಬಂದಿದ್ದಾರೆ. ಈ ಬಾರಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸ್ನೇಹಿತರೇ ಪರಸ್ಪರ ಜಿದ್ದಾಜಿದ್ದಿಗೆ ಇಳಿದಿದ್ದು, ಕೊನೆಗೂ ಸಿ.ಟಿ ರವಿ ಸೋಲು ಅನುಭವಿಸಿದ್ದಾರೆ.