ಕೊಟ್ಟ ಮಾತನ್ನು ಉಳಿಸಿಕೊಂಡ ದೊಡ್ಮನೆ ಸೊಸೆ – ಹೈಸ್ಕೂಲ್‌ ದತ್ತು ಪಡೆದ ಗೀತಾ ಶಿವರಾಜ್ ಕುಮಾರ್

ಕೊಟ್ಟ ಮಾತನ್ನು ಉಳಿಸಿಕೊಂಡ ದೊಡ್ಮನೆ ಸೊಸೆ – ಹೈಸ್ಕೂಲ್‌ ದತ್ತು ಪಡೆದ ಗೀತಾ ಶಿವರಾಜ್ ಕುಮಾರ್

ದೊಡ್ಮನೆ ಕುಟುಂಬ ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಿರುವುದು ಎಲ್ಲರಿಗೂ ಗೊತ್ತಿದೆ. ಅದರಲ್ಲೂ ಪಾರ್ವತಮ್ಮ ರಾಜ್‌ಕುಮಾರ್ ಮೈಸೂರಿನ ಶಕ್ತಿಧಾಮದ ಮೂಲಕ ಅದೆಷ್ಟೋ ನೊಂದ ಹೆಣ್ಣುಮಕ್ಕಳಿಗೆ ಶಕ್ತಿಯಾಗಿ ನಿಂತಿದ್ದರು. ಇವರ ನಂತರ ಗೀತಾ ಶಿವರಾಜ್ ಕುಮಾರ್ ಶಕ್ತಿಧಾಮದ ಹೊಣೆ ಹೊತ್ತುಕೊಂಡಿದ್ದರು. ಈಗ ಗೀತಾ ಶಿವರಾಜ್ ಕುಮಾರ್ ಇನ್ನೊಂದು ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಇದನ್ನೂ ಓದಿ:  ‘ಕೈ’ಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ದೊಡ್ಮನೆ ಸೊಸೆ – ಕಾಂಗ್ರೆಸ್ ಸೇರಿದ ಗೀತಾ ಶಿವರಾಜ್ ಕುಮಾರ್  

ಗೀತಾ ಶಿವರಾಜ್ ಕುಮಾರ್ ಈ ಬಾರಿ ಹೈಸ್ಕೂಲ್‌ನ್ನು ತಗೆದುಕೊಂಡಿದ್ದು, ಆ ಶಾಲೆಯ ಮಕ್ಕಳ ಕನಸನ್ನು ನನಸು ಮಾಡಲು ಮುಂದಾಗಿದ್ದಾರೆ. ವೇದ ಸಿನಿಮಾದ ಪ್ರಚಾರದ ವೇಳೆ ಸಂಡೂರು ತಾಲ್ಲೂಕಿನ ಇಂಗಳಗಿ ಸಮೀಪದ ಅನ್ನಪೂರ್ಣೇಶ್ವರಿ ವಿದ್ಯಾಪೀಠವು ನಡೆಸುತ್ತಿದ್ದ ಉಚಿತ ವಸತಿಯುತ ಪ್ರೌಢಶಾಲೆಯ ವಿಚಾರವನ್ನು ಶಿವಣ್ಣ ದಂಪತಿಗೆ ತಿಳಿಸಲಾಗಿತ್ತು. ಜೋಗದ ದಿಗಂಬರ ರಾಜಭಾರತಿ ಸ್ವಾಮೀಜಿ 2012ರಲ್ಲಿ ಶುರು ಮಾಡಿದ್ದ ಈ ಶಾಲೆ ಅನುದಾನವಿಲ್ಲದೇ ಸೊರಗಿತ್ತು. ಈ ವಿಚಾರವು ತಿಳಿಯುತ್ತಿದ್ದಂತೆಯೇ ಶಾಲೆ ದತ್ತು ಪಡೆಯುವುದಾಗಿ ಗೀತಾ ಶಿವರಾಜ್ ಕುಮಾರ್ ಘೋಷಿಸಿದ್ದರು. ತಾವು ಮಾತು ಕೊಟ್ಟಂತೆ ನಿನ್ನೆ ಶಾಲೆಗೆ ಭೇಟಿ ನೀಡಿರುವ ಗೀತಾ ಶಿವರಾಜ್ ಕುಮಾರ್, ಮೂಲ ಸೌಕರ್ಯ ಸೇರಿದಂತೆ ಅಗತ್ಯವಿರುವ  ಸೌಕರ್ಯವನ್ನು ನೀಡುವುದಾಗಿ ತಿಳಿಸಿದರು. ಕೂಡಲೇ ಟ್ರಸ್ಟ್ ರಚಿಸಿ, ಪದಾಧಿಕಾರಿಗಳ ನೇಮಕ ಮಾಡಿ ಶಾಲೆಯನ್ನು ಅಭಿವೃದ್ಧಿ ಮಾಡುವುದಾಗಿ ತಿಳಿಸಿದ್ದಾರೆ. ಈ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.

suddiyaana