ಪಾಕಿಸ್ತಾನ ಜೈಲಿನಿಂದ 198 ಭಾರತೀಯರು ಮೀನುಗಾರರು ಬಿಡುಗಡೆ
ನವದೆಹಲಿ: ಪಾಕಿಸ್ತಾನದ ಸಮುದ್ರ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದಾರೆ ಎಂಬ ಆರೋಪದ ಮೇಲೆ ಬಂಧಿಸಲಾಗಿದ್ದ 198 ಮಂದಿ ಭಾರತೀಯ ಮೀನುಗಾರರನ್ನು ಪಾಕಿಸ್ತಾನ ಸರ್ಕಾರ ಗುರುವಾರ ಬಿಡುಗಡೆ ಮಾಡಿದೆ.
ಕರಾಚಿಯ ಲಾಂಧಿ ಸೆರೆಮನೆಯಲ್ಲಿ 199 ಭಾರತೀಯ ಮೀನುಗಾರರು ಹಾಗೂ ಓರ್ವ ನಾಗರಿಕನನ್ನು ಬಂಧಿಸಿ ಇರಿಸಲಾಗಿತ್ತು. ಇವರ ಪೈಕಿ 198 ಮಂದಿ ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಲಾಗಿದೆ. 200 ಜನರ ಪೈಕಿ ಒಬ್ಬ ನಾಗರಿಕ ಕೈದಿ, ಜುಲ್ಫಿಕರ್, ಗುರುವಾರ ಬಿಡುಗಡೆಯಾಗಬೇಕಿತ್ತು. ಆದರೆ ಅವರು ಶನಿವಾರ ಜೈಲಿನಲ್ಲಿ ನಿಧನರಾಗಿದ್ದಾರೆ. ಗುಜರಾತ್‌ನ ಒಬ್ಬ ಮೀನುಗಾರರೂ ಸೋಮವಾರ ನಿಧನರಾಗಿದ್ದಾರೆ. ಅವರಿಬ್ಬರ ಪಾರ್ಥೀವ ಶರೀರವನ್ನು ಯಾವಾಗ ಸ್ವದೇಶಕ್ಕೆ ತರಲಾಗುವುದು ಎಂಬುದರ ಕುರಿತು ಇನ್ನೂ ಯಾವುದೇ ವಿಚಾರ ಮಾತುಕತೆ ಆಗಿಲ್ಲ.
ಇದನ್ನೂ ಓದಿ:ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬುಕ್ಕಿಂಗ್ ಎಲೆಕ್ಷನ್? – ಉಪ್ಪು ಮುಟ್ಟಿ ‘ಕೈ’ ಅಭ್ಯರ್ಥಿ ಪ್ರಮಾಣ..!
ಗುರುವಾರ ಬಿಡುಗಡೆಯಾದ ಮೀನುಗಾರರು 500 ಭಾರತೀಯ ಕೈದಿಗಳ ಗುಂಪಿನ ಭಾಗವಾಗಿದ್ದು- ಉಳಿದ ಮೀನುಗಾರರು ಮತ್ತು ಒಬ್ಬ ನಾಗರಿಕ – ಅವರನ್ನು ಪಾಕಿಸ್ತಾನವು ಈ ವರ್ಷ ಜುಲೈ 3 ರೊಳಗೆ ಬಿಡುಗಡೆ ಮಾಡಿ ವಾಪಸು ಕಳುಹಿಸಲಿದೆ.
ಇನ್ನು ಭಾರತದ ಜೈಲುಗಳಲ್ಲಿರುವ ಪಾಕಿಸ್ತಾನಿ ಮೀನುಗಾರರನ್ನು ಬಿಡುಗಡೆ ಮಾಡುವ ಮೂಲಕ ಭಾರತವು ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಬೇಕು ಎಂದು ಪಾಕಿಸ್ತಾನ ಮೂಲದ ಕಾರ್ಯಕರ್ತರು ಒತ್ತಾಯಿಸಿದ್ದಾರೆ ಎನ್ನಲಾಗಿದೆ.
“ಪಾಕಿಸ್ತಾನದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಗಮನಿಸಿದರೆ, ಪಾಕಿಸ್ತಾನ ಸರ್ಕಾರವು ಗುರುವಾರ ನಿಗದಿಪಡಿಸಿದಂತೆ ಮೊದಲ ಬ್ಯಾಚ್ ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡುತ್ತದೆಯೇ ಎಂಬ ಆತಂಕವಿತ್ತು. ಆದಾಗ್ಯೂ, ಪಾಕಿಸ್ತಾನವು 198 ಭಾರತೀಯ ಮೀನುಗಾರರನ್ನು ಕರಾಚಿಯ ಲಾಂಡಿ ಜೈಲಿನಿಂದ ಬಿಡುಗಡೆ ಮಾಡಿತು ಎಂದು ಪಾಕಿಸ್ತಾನ್ ಇಂಡಿಯಾ ಪೀಪಲ್ಸ್ ಫೋರಮ್ ಫಾರ್ ಪೀಸ್ ಅಂಡ್ ಡೆಮಾಕ್ರಸಿ (ಪಿಐಪಿಎಫ್‌ಪಿಡಿ) ಮಾಜಿ ಪ್ರಧಾನ ಕಾರ್ಯದರ್ಶಿ ಜತಿನ್ ದೇಸಾಯಿ ಹೇಳಿದ್ದಾರೆ.
ಬಿಡುಗಡೆಯಾದ 198 ಮೀನುಗಾರರಲ್ಲಿ 183 ಜನರು ಗುಜರಾತ್‌ನವರಾಗಿದ್ದು, ಮಹಾರಾಷ್ಟ್ರದ ಐವರು, ಕೇಂದ್ರಾಡಳಿತ ಪ್ರದೇಶವಾದ ದಿಯು ಮತ್ತು ಉತ್ತರ ಪ್ರದೇಶದ ತಲಾ ನಾಲ್ವರು ಮತ್ತು ಆಂಧ್ರಪ್ರದೇಶದ ಒಬ್ಬರು ಮತ್ತು ಇತರ ರಾಜ್ಯದ ಒಬ್ಬರು ಸೇರಿದ್ದಾರೆ.