ಆರ್‌ಸಿಬಿ ತಂಡಕ್ಕೆ ಮತ್ತೊಂದು ಆಘಾತ – ದಿನೇಶ್ ಕಾರ್ತಿಕ್ ಆರೋಗ್ಯದಲ್ಲಿ ಏರುಪೇರು

ಆರ್‌ಸಿಬಿ ತಂಡಕ್ಕೆ ಮತ್ತೊಂದು ಆಘಾತ – ದಿನೇಶ್ ಕಾರ್ತಿಕ್ ಆರೋಗ್ಯದಲ್ಲಿ ಏರುಪೇರು

ಪ್ಲೇ ಆಫ್ ಹಂತಕ್ಕೇರಲು ಶತಪ್ರಯತ್ನ ನಡೆಸುತ್ತಿರುವ ಆರ್‌ಸಿಬಿ ತಂಡಕ್ಕೆ ಮತ್ತೊಂದು ಆಘಾತ ಉಂಟಾಗಿದೆ. ತಂಡದ ಪ್ರಮುಖ ವಿಕೆಟ್ ಕೀಪರ್, ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಆರೋಗ್ಯದಲ್ಲಿ ಏರುಪೇರಾಗಿದೆ. ಅನಾರೋಗ್ಯದಿಂದ ಕಾರ್ತಿಕ್ ಬಳಲುತ್ತಿದ್ದಾರೆ. ದಿನೇಶ್ ಕಾರ್ತಿಕ್ ಅನಾರೋಗ್ಯದ ಹೊರತಾಗಿಯೂ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಬ್ಯಾಟ್ ಮಾಡಿದ್ದರು ಎಂದು ಆರ್‌ಸಿಬಿ ಕೋಚ್ ಸಂಜಯ್ ಬಾಂಗರ್ ಪಂದ್ಯದ ಬಳಿಕ ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ:  ಬೊಮ್ಮನ್ ಮತ್ತು ಬೆಳ್ಳಿಗೆ ಮರೆಯಲಾರದ ಉಡುಗೊರೆ – ಧೋನಿಯಿಂದ ಜೆರ್ಸಿ ಗಿಫ್ಟ್

ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ದಿನೇಶ್ ಕಾರ್ತಿಕ್ ಕೇವಲ 18 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ 30 ರನ್ ಸಿಡಿಸಿದ್ದರು. ಆದರೆ, ಕ್ರಿಸ್ ಜೋರ್ಡನ್ ಎಸೆತದಲ್ಲಿ ನೆಹಾಲ್ ವಧೇರಾಗೆ ಕ್ಯಾಚ್ ನೀಡಿ ಔಟ್ ಆದರು. ಇದಾದ ನಂತರ ದಿನೇಶ್ ಕಾರ್ತಿಕ್ ವಾಂತಿ ಮಾಡಿಕೊಂಡಿದ್ದರು. ಈ ಬಗ್ಗೆ ಆರ್‌ಸಿಬಿ ಕೋಚ್ ಸಂಜಯ್ ಬಾಂಗರ್ ಮಾಹಿತಿ ನೀಡಿದ್ದಾರೆ. ‘ದಿನೇಶ್ ಕಾರ್ತಿಕ್ ಕ್ರೀಸ್‌ನಲ್ಲಿ ಬ್ಯಾಟ್ ಮಾಡುತ್ತಿರುವ ವೇಳೆ ಅಸ್ವಸ್ಥರಾದರು. ಅವರು ಸ್ವಲ್ಪಮಟ್ಟಿಗೆ ನಿರ್ಜಲೀಕರಣಗೊಂಡಿದ್ದರು ಹಾಗೂ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ಮರಳುವ ವೇಳೆ ಡಗ್ಔಟ್ ಸಮೀಪ ವಾಂತಿ ಕೂಡ ಮಾಡಿಕೊಂಡಿದ್ದರು. ಮುಂದಿನ ಪಂದ್ಯಕ್ಕೆ ನಮಗೆ ಸಾಕಷ್ಟು ಅಂತರ ಇದೆ. ಹಾಗಾಗಿ, 3-4 ದಿನಗಳ ಕಾಲ ಔಷಧಿ ತೆಗೆದುಕೊಂಡರೆ ಅವರು ಸರಿಯಾಗುತ್ತಾರೆ,” ಎಂದು ತಿಳಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಮುಂದಿನ ಪಂದ್ಯವನ್ನು ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಲಿದೆ. ಜೈಪುರದ ಸವಾಯ್ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ.

suddiyaana