ಆರೋಪಿಯನ್ನ ತಪಾಸಣೆಗೆಂದು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು – ವೈದ್ಯೆಯನ್ನೇ ಇರಿದು ಕೊಂದ ಪಾಪಿ ಶಿಕ್ಷಕ!

ಆರೋಪಿಯನ್ನ ತಪಾಸಣೆಗೆಂದು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು – ವೈದ್ಯೆಯನ್ನೇ ಇರಿದು ಕೊಂದ ಪಾಪಿ ಶಿಕ್ಷಕ!

ಶಾಲೆಯಲ್ಲಿ ಶಿಕ್ಷಕನಾಗಿದ್ದ ಆತ ಮಕ್ಕಳನ್ನ ಒಳ್ಳೆ ದಾರಿಯಲ್ಲಿ ನಡೆಸಬೇಕಿತ್ತು. ಆದರೆ ಗುರುವಾಗಿದ್ದವನು ತಾನೇ ದಾರಿ ತಪ್ಪಿದ್ದ. ಹೀಗಾಗಿ ಕೆಲಸವನ್ನೂ ಕಳೆದುಕೊಂಡಿದ್ದ. ಮನೆಯವರ ಪಾಲಿಗೂ ಕ್ರೂರಿಯಾಗಿ ಚಿತ್ರಹಿಂಸೆ ನೀಡುತ್ತಿದ್ದ. ಕೊನೆಗೆ ಚಿಕಿತ್ಸೆ ನೀಡಲು ಬಂದ ವೈದ್ಯೆಯನ್ನೇ ಕೊಂದು ಹಾಕಿದ್ದಾನೆ.

ಇದನ್ನೂ ಓದಿ : ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅರೆಸ್ಟ್ – ಪಾಕಿಸ್ತಾನದಲ್ಲಿ ಭುಗಿಲೆದ್ದ ಭಯಾನಕ ಹಿಂಸಾಚಾರ

ಕೇರಳದ ಕೊಲ್ಲಂನ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯೆಯನ್ನ ಕೊಂದಿರುವ ದಾರುಣ ಘಟನೆ ನಡೆದಿದೆ. ಅದೂ ಕೂಡ ಪೊಲೀಸರು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆತಂದ ಶಾಲಾ ಶಿಕ್ಷಕನೇ ಇಂಥಾದ್ದೊಂದು ಕೃತ್ಯ ಎಸಗಿದ್ದಾನೆ. ಕೊಟ್ಟಾರಕ್ಕರ ಸರ್ಕಾರಿ ತಾಲೂಕು ಆಸ್ಪತ್ರೆಯಲ್ಲಿ ಇಂದು ಮುಂಜಾನೆ ಈ ಘಟನೆ ನಡೆದಿದೆ. ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಂದನಾ ದಾಸ್ (23) (Vandana Das)ಎಂಬ ವೈದ್ಯೆಯ ಎದೆ ಮತ್ತು ಕತ್ತಿನ ಮೇಲೆ ಆರೋಪಿ ಅನೇಕ ಬಾರಿ ಇರಿದಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ವಂದನಾರನ್ನ ತಿರುವನಂತಪುರಂನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

42 ವರ್ಷದ ಆರೋಪಿ ಎಸ್.ಸಂದೀಪ್ ಎಂಬಾತನೇ ಇಂಥಾದ್ದೊಂದು ಕೃತ್ಯ ಎಸಗಿದ್ದಾನೆ. ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕನಾಗಿದ್ದ ಈತ ಪೊಲೀಸರು ಸೇರಿದಂತೆ ಆಸ್ಪತ್ರೆಯಲ್ಲಿ ಇತರ ನಾಲ್ವರ ಮೇಲೆಯೂ ಹಲ್ಲೆ ನಡೆಸಿದ್ದಾನೆ. ಮಂಗಳವಾರ ರಾತ್ರಿ ಸಂದೀಪ್ ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸಿದ ಕಾರಣ ಆತನನ್ನು ಪೊಲೀಸರು ಬಂಧಿಸಿದ್ದರು. ಈ ವೇಳೆ ಸಂದೀಪ್ ಕಾಲಿಗೆ ಸಣ್ಣ ಗಾಯವಾಗಿದ್ದರಿಂದ, ಪೊಲೀಸ್ ತಂಡವು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ದಿತ್ತು. ಆದರೆ ಸಂದೀಪ್ ಗಾಯಕ್ಕೆ ಚಿಕಿತ್ಸೆ ನೀಡುತ್ತಿರುವಾಗ ಆತ ಆಸ್ಪತ್ರೆಯ ಡ್ರೆಸ್ಸಿಂಗ್ ರೂಮ್‌ನಲ್ಲಿದ್ದ ಶಸ್ತ್ರಚಿಕಿತ್ಸೆಯ ಕತ್ತರಿಯನ್ನು ಕೈಗೆತ್ತಿಕೊಂಡಿದ್ದಾನೆ. ಕತ್ತರಿಯಿಂದ ವೈದ್ಯೆ ವಂದನಾಳ ಎದೆಗೆ ಮತ್ತು ಕುತ್ತಿಗೆಗೆ ಪದೇ ಪದೆ ಇರಿದಿದ್ದಲ್ಲದೆ ಆಸ್ಪತ್ರೆಗೆ ಕರೆದೊಯ್ದ ಪೊಲೀಸರ ಮೇಲೂ ಹಲ್ಲೆ ನಡೆಸಿದ್ದಾನೆ.

ಕೇರಳದ ಸರ್ಕಾರಿ ವೈದ್ಯಕೀಯ ಅಧಿಕಾರಿಗಳ ಸಂಘ (ಕೆಜಿಎಂಒಎ), ರಾಜ್ಯದ ಸರ್ಕಾರಿ ವೈದ್ಯರ ಸಂಘಟನೆಯು ಹತ್ಯೆಯ ವಿರುದ್ಧ ಪ್ರತಿಭಟನೆ ನಡೆಸಿದೆ. KGMOA ಕೊಲ್ಲಂ ಜಿಲ್ಲೆಯಲ್ಲಿ ಮುಷ್ಕರ ಘೋಷಿಸಿದೆ. ಆರೋಪಿ ಮಾದಕವಸ್ತು ವ್ಯಸನಿ ಕೊಟ್ಟಾರಕ್ಕರದಲ್ಲಿ ಕರ್ತವ್ಯದ ವೇಳೆ ವೈದ್ಯೆಯೊಬ್ಬರನ್ನು ಇರಿದು ಕೊಂದ ಪ್ರಕರಣದ ಆರೋಪಿ ಶಿಕ್ಷಕ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ನೆಡುಂಪಣ ಯು.ಪಿ ಶಾಲಾ ಶಿಕ್ಷಕ ಎಂದು ಪೊಲೀಸರು ತಿಳಿಸಿದ್ದಾರೆ. ಮಾದಕ ವ್ಯಸನದಿಂದಾಗಿ ಆತನನ್ನು ಅಮಾನತುಗೊಳಿಸಲಾಗಿತ್ತು. ಈತ ಇತ್ತೀಚೆಗಷ್ಟೇ ಡಿ-ಅಡಿಕ್ಷನ್ ಸೆಂಟರ್ ನಿಂದ ಹೊರಬಂದಿದ್ದ . ಈ ನಡುವೆ ಮನೆಯಲ್ಲಿ  ಜಗಳ ನಡೆದಿದ್ದು, ಆತನ ಕಾಲಿಗೆ ಗಾಯವಾಗಿತ್ತು.

suddiyaana