ಕರ್ನಾಟಕ ವಿಧಾನಸಭಾ ಚುನಾವಣೆ 2023 – ಒಂದೇ ಕುಟುಂಬದ 65 ಮಂದಿ ಏಕಕಾಲಕ್ಕೆ ಮತದಾನ

ಕರ್ನಾಟಕ ವಿಧಾನಸಭಾ ಚುನಾವಣೆ 2023 – ಒಂದೇ ಕುಟುಂಬದ 65 ಮಂದಿ ಏಕಕಾಲಕ್ಕೆ ಮತದಾನ

ಚಿಕ್ಕಬಳ್ಳಾಪುರ: ರಾಜ್ಯ ವಿಧಾನಸಭಾ ಚುನಾವಣೆ ಭರದಿಂದ ಸಾಗುತ್ತಿದೆ. ರಾಜ್ಯದ ಸಿನಿಮಾ ತಾರೆಯರು, ಗಣ್ಯರು ಸೇರಿದಂತೆ ಅನೇಕರು ಮತಗಟ್ಟೆಗೆ ತೆರಳಿ ವೋಟ್ ಹಾಕುತ್ತಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಒಂದೇ ಕುಟುಂಬದ 65 ಮಂದಿ ಏಕಕಾಲಕ್ಕೆ ಮತದಾನ ಮಾಡಿದ್ದಾರೆ.

ಇದನ್ನೂ ಓದಿ: ವೋಟ್ ಹಾಕಿದ ರಿಯಲ್ ಸ್ಟಾರ್ – ಹಕ್ಕು ಚಲಾಯಿಸಿದ ಜಾವಗಲ್ ಶ್ರೀನಾಥ್

ಚಿಕ್ಕಬಳ್ಳಾಪುರ ನಗರದ ಬಾದಂ ಕುಟುಂಬದ 65 ಮಂದಿ ಜ್ಯೂನಿಯರ್ ಕಾಲೇಜು ಆವರಣಕ್ಕೆ ಬಂದು ಏಕಕಾಲಕ್ಕೆ ಮತ ಚಲಾಯಿಸಿದ್ದಾರೆ. ಬಾದಂ ಕುಟುಂಬದ ಸದಸ್ಯರೆಲ್ಲರೂ ಒಂದೇ ಬಾರಿಗೆ ಆಗಮಿಸಿ ಮತ ಚಲಾಯಿಸುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ

ಈ ಬಗ್ಗೆ ಮಾತನಾಡಿದ ಬಾದಂ ಕುಟುಂಬಸ್ಥದ ಸದಸ್ಯರೊಬ್ಬರು, ಪ್ರತಿ ಬಾರಿಯೂ ಕುಟುಂಬಸ್ಥರೆಲ್ಲರೂ ಒಮ್ಮೆಲೆ ಆಗಮಿಸಿ ಮತ ಚಲಾವಣೆ ಮಾಡುತ್ತೇವೆ. ಈ ಬಾರಿಯೂ ಎಲ್ಲರೂ ಒಟ್ಟಾಗಿ ಬಂದು ಮತಹಾಕಿದ್ದೇವೆ ಎಂದು ಹೇಳಿದ್ದಾರೆ.

suddiyaana