ಇಷ್ಟವಾದ ಕುದುರೆ ಸವಾರಿಯಿಂದಲೇ ಜೀವಕ್ಕೆ ಕಂಟಕ – ಫೇಮಸ್ ಮಾಡೆಲ್ ಸಿಯನ್ನಾ ವಿಯರ್ ದಾರುಣ ಸಾವು..!

ಇಷ್ಟವಾದ ಕುದುರೆ ಸವಾರಿಯಿಂದಲೇ ಜೀವಕ್ಕೆ ಕಂಟಕ – ಫೇಮಸ್ ಮಾಡೆಲ್ ಸಿಯನ್ನಾ ವಿಯರ್ ದಾರುಣ ಸಾವು..!

2022ರ ಮಿಸ್ ಯೂನಿವರ್ಸ್ ಫೈನಲಿಸ್ಟ್, ಆಸ್ಟ್ರೇಲಿಯಾ ಮಾಡೆಲ್  ಸಿಯನ್ನಾ ವಿಯರ್ ಅವರು ನಿಧನ ಹೊಂದಿದ್ದಾರೆ. ಅವರಿಗೆ 23 ವರ್ಷ ವಯಸ್ಸಾಗಿತ್ತು. ತಮಗೆ ಕುದುರೆ ಓಡಿಸುವುದು ಅಂದರೆ ತುಂಬಾ ಇಷ್ಟ. ಅವಕಾಶ ಸಿಕ್ಕಾಗೆಲ್ಲ ನಾನು ಕುದುರೆಯೊಂದಿಗೆ ವೇಳೆ ಕಳೆಯುತ್ತೇನೆ ಎಂದು ಸದಾ ಹೇಳುತ್ತಿದ್ದ ಸಿಯನ್ನಾ ವಿಯರ್ ,ಅದೇ ಕುದುರೆ ಸವಾರಿ ವೇಳೆ ನಡೆದ ಅವಘಡದಲ್ಲಿ ಪ್ರಾಣಬಿಟ್ಟಿದ್ದಾರೆ.

 ಇದನ್ನೂ ಓದಿ: ಮರೆಯಾದ ಕ್ರೀಡಾತಾರೆ – ಎರಡು ಬಾರಿ ವಿಶ್ವಚಾಂಪಿಯನ್ ಶಿಪ್ ಗೆದ್ದ ಟೋರಿ ಬೋವಿ ಇನ್ನಿಲ್ಲ

ಏಪ್ರಿಲ್ 2 ರಂದು ಆಸ್ಟ್ರೇಲಿಯಾದ ವಿಂಡ್ಸರ್ ಪೋಲೋ ಗ್ರೌಂಡ್ ನಲ್ಲಿ ನಡೆಯುತ್ತಿದ್ದ ಹಾರ್ಸ್ ರೈಡ್ ನಲ್ಲಿ ಸಿಯನ್ನಾ ಪಾಲ್ಗೊಂಡಿದ್ದರು. ಕುದುರೆ ಸವಾರಿ ಮಾಡುವಾಗ ಕುದುರೆ ಕುಸಿದು ಬಿದ್ದಿದೆ. ಆಗ ನೆಲಕ್ಕೆ ಬಿದ್ದ ಸಿಯನ್ನಾ ತಲೆಗೆ ತೀವ್ರ ಪೆಟ್ಟುಬಿದ್ದಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಿ ವಿಶೇಷ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಒಂದು ತಿಂಗಳು ಕಳೆದರೂ ಸಿಯನ್ನಾ ವಿಯರ್ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಳ್ಳದೇ ಇರುವ ಕಾರಣಕ್ಕಾಗಿ ಕುಟುಂಬದ ಅನುಮತಿಯೊಂದಿಗೆ ಮೇ 4ರಂದು ಲೈಫ್ ಸಪೋರ್ಟ್ ತೆಗೆಯಲಾಗಿದೆ. ಈ ಮೂಲಕ ಸಿಯನ್ನಾ ನಿಧನರಾಗಿದ್ದಾರೆ ಎಂದು ವೈದ್ಯರು ಘೋಷಣೆ ಮಾಡಿದ್ದಾರೆ.

ಸಿಯನ್ನಾ ವಿಯರ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೆ ಅವರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ‘ನಮ್ಮ ಹೃದಯದಲ್ಲಿ ಸದಾ ನೀವು ಇರುತ್ತೀರಿ’ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುವ ಮೂಲಕ ಅವರ ಫೋಟೋ ಹಂಚಿಕೊಂಡಿದ್ದಾರೆ.

suddiyaana